ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆಯದ ಶಿಕ್ಷಕರಿಗೆ ಹೊಸ ನಿಯಮ ಜಾರಿಗೆ ತಂದ ಗೋವಾ ಸರ್ಕಾರ

|
Google Oneindia Kannada News

ಪಣಜಿ, ಜುಲೈ 13: ಕೊರೊನಾ ಲಸಿಕೆ ಪಡೆದುಕೊಳ್ಳದ ಶಿಕ್ಷಕರಿಗೆ ಗೋವಾ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಲಸಿಕೆ ಪಡೆದುಕೊಳ್ಳದ ಶಿಕ್ಷಕರು ಪ್ರತಿ ವಾರ ತಪ್ಪದೇ ಕೊರೊನಾ ನೆಗೆಟಿವ್ ಪರೀಕ್ಷಾ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶೀಘ್ರವೇ ಕೊರೊನಾ ಲಸಿಕೆ ಪಡೆದುಕೊಳ್ಳುವಂತೆ ರಾಜ್ಯ ಶಿಕ್ಷಣ ಇಲಾಖೆ ನಿರ್ದೇಶಕ ಡಿಆರ್ ಭಾಗತ್ ಸುತ್ತೋಲೆ ಹೊರಡಿಸಿದ್ದಾರೆ.

ಶಿಕ್ಷಕರು ಕೊರೊನಾ ಲಸಿಕೆ ತೆಗೆದುಕೊಳ್ಳುವುದು ಕಡ್ಡಾಯ. ಇದು ಸಾಧ್ಯವಾಗದಿದ್ದರೆ ಪ್ರತಿ ವಾರವೂ ಅವರು ತಪ್ಪದೇ ಕೊರೊನಾ ಪರೀಕ್ಷೆಯ ನೆಗೆಟಿವ್ ವರದಿ ಸಲ್ಲಿಸಬೇಕು. ಈ ಎರಡೂ ಆಯ್ಕೆಗಳು ಸಾಧ್ಯವಾಗದಿದ್ದರೆ, ಏಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ವೈದ್ಯಕೀಯ ಕಾರಣಗಳೊಂದಿಗೆ ವೈದ್ಯರಿಂದ ಪತ್ರ ನೀಡಬೇಕು ಎಂದು ಪತ್ರದಲ್ಲಿ ಆದೇಶಿಸಲಾಗಿದೆ.

Goa Government Tell Teachers To Submit Covid Negative Report Every Week If They Are Not Vaccinated

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವಿಳಂಬ ಮಾಡದೇ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರೊನಾ ಲಸಿಕೆ ಪಡೆಯುವುದು ಅವಶ್ಯಕ ಎಂದು ಶಿಕ್ಷಣ ಇಲಾಖೆ ತಿಳಿಸಿದ್ದು, ಲಸಿಕೆ ಪಡೆದುಕೊಳ್ಳುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ತಮ್ಮ ಕುಟುಂಬ ಸದಸ್ಯರು ಲಸಿಕೆ ಪಡೆದುಕೊಂಡಿರುವುದನ್ನು ಖಾತ್ರಿಪಡಿಸಬೇಕು. ಅವರಿಂದ ಸೋಂಕು ಹರಡುವ ಸಾಧ್ಯತೆಯೂ ಇರುವುದರಿಂದ ಈ ಕುರಿತು ಗಮನ ಹರಿಸಬೇಕು ಎಂದು ತಿಳಿಸಲಾಗಿದೆ.

ಕೊರೊನಾ ಸೋಂಕಿನ ಕಾರಣವಾಗಿ ಕಳೆದ ಮಾರ್ಚ್‌ನಿಂದಲೂ ಗೋವಾದಲ್ಲಿ ಶಾಲೆಗಳನ್ನು ತೆರೆದಿಲ್ಲ. ಇದೀಗ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳನ್ನು ತೆರೆಯುವ ಆಲೋಚನೆಯಲ್ಲಿ ಸರ್ಕಾರವಿದೆ.

English summary
Goa education department has told teachers to produce negative Covid test reports every week if they don’t get themselves vaccinated,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X