ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಟ್ಟುಸಿರು ಬಿಟ್ಟಿದ್ದ ಗೋವಾಗೆ ಮತ್ತೆ ಕಂಟಕ: 7 ಹೊಸ ಕೇಸ್ ಪತ್ತೆ!

|
Google Oneindia Kannada News

ಪಣಜಿ, ಮೇ 14: ಕೊರೊನಾ ವೈರಸ್‌ ಕಾಟದಿಂದ ಗೋವಾ ಸಂಪೂರ್ಣವಾಗಿ ಮುಕ್ತವಾಗಿತ್ತು. ಬಹುಶಃ ಮುಂದಿನ ದಿನಗಳಲ್ಲಿ ಹೊಸ ಕೇಸ್ ಪತ್ತೆಯಾಗುವುದು ಅನುಮಾನ ಎಂದು ತಿಳಿಯಲಾಗಿತ್ತು. ಆದರೆ, ಕೊವಿಡ್ ಕಾಟ ಸದ್ಯಕ್ಕೆ ತಪ್ಪಲ್ಲ ಎನ್ನುವುದು ಗೋವಾ ವಿಚಾರದಲ್ಲಿ ಸಾಬೀತಾಗಿದೆ.

ಹೌದು, ಕೊರೊನಾ ಮುಕ್ತವಾಗಿದ್ದ ಗೋವಾದಲ್ಲಿ ಮತ್ತೆ ಮಹಾಮಾರಿ ವಕ್ಕರಿಸಿದೆ. ರಾಜ್ಯದಲ್ಲಿ ಹೊಸದಾಗಿ ಏಳು ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ವಿಶ್ವಾಜಿತ್ ರಾಣೆ ಮಾಹಿತಿ ನೀಡಿದ್ದಾರೆ. Rapid ಟೆಸ್ಟ್ ಕಿಟ್‌ ಮೂಲಕ ಏಳು ಹೊಸ ಕೇಸ್ ಪತ್ತೆಯಾಗಿದೆ. ಆ ಬಗ್ಗೆ ದೃಢಿಕರಣವಾಗಬೇಕಿದೆ ಎಂದು ಹೇಳಿದ್ದಾರೆ.

ಈ ಏಳು ಕೇಸ್‌ಗಳು ಮಹಾರಾಷ್ಟ್ರ ಮೂಲಕ ರಾಜ್ಯಕ್ಕೆ ಬಂದವರು ಎಂದು ತಿಳಿದು ಬಂದಿದೆ. ಬುಧವಾರದಿಂದ ರಾಜ್ಯಕ್ಕೆ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಹೊರರಾಜ್ಯದಲ್ಲಿ ಸಿಲುಕಿಕೊಂಡಿದ್ದ ಯಾತ್ರಿಕರನ್ನು ಗೋವಾ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಹೀಗೆ ಬಂದ ಏಳು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಹೋರಾಟದಲ್ಲಿ ಗೆದ್ದ ಗೋವಾ: ಕೊರೊನಾ ಮುಕ್ತ ರಾಜ್ಯಹೋರಾಟದಲ್ಲಿ ಗೆದ್ದ ಗೋವಾ: ಕೊರೊನಾ ಮುಕ್ತ ರಾಜ್ಯ

Goa Found Seven New Coronavirus Cases In State

ಒಂದೇ ಕುಟುಂಬದ ಐದು ಜನ ಹಾಗೂ ಅವರ ಕಾರು ಚಾಲಕ ಸೇರಿ ಆರು ಮಂದಿ. ಮತ್ತೊಂದೆಡೆ ಸರಕು ಸಾಗಣಿಕೆ ವಾಹನದ ಚಾಲಕನಿಗೂ ಕೊವಿಡ್ ಪಾಸಿಟಿವ್ ಬಂದಿದೆ. ಈವರೆಗೂ ಗೋವಾದಲ್ಲಿ ದಿವೊಂದರಲ್ಲಿ ಹೆಚ್ಚು ಕೇಸ್ ವರದಿಯಾಗಿದ್ದು ಇದೇ ಮೊದಲು.

ಇದಕ್ಕೂ ಮುಂಚೆ ಗೋವಾದಲ್ಲಿ ಏಳು ಜನ ಕೊರೊನಾ ಸೋಂಕಿತರಿದ್ದರು. ನಂತರ ಆ ಏಳು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಅಲ್ಲಿಂದ ಸುಮಾರು ಮೂರು ವಾರ ರಾಜ್ಯದಲ್ಲಿ ಯಾವುದೇ ಹೊಸ ಕೇಸ್ ಪತ್ತೆಯಾಗಿರಲಿಲ್ಲ. ಇದೀಗ, ಮತ್ತೆ 7 ಹೊಸ ಪ್ರಕರಣ ವರದಿಯಾಗಿದ್ದು, ಪ್ರಸ್ತುತ ಗೋವಾದಲ್ಲಿ ಸೋಂಕಿತರ ಸಂಖ್ಯೆ 7ಕ್ಕೆ ಏರಿದೆ.

English summary
Goa Health Minister Vishwajit Rane says rapid testing found seven new coronavirus cases in state, confirmation is awaited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X