ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ

|
Google Oneindia Kannada News

ಪಣಜಿ, ಜನವರಿ 12; ಗೋವಾದ ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರಿದ್ದಾರೆ. ಸೋಮವಾರ ಅವರು ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಬಿಜೆಪಿ ತೊರೆದಿದ್ದರು.

ಗೋವಾ ಚುನಾವಣೆಯ ಎಐಸಿಸಿ ಉಸ್ತುವಾರಿ ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಮಿಚೆಲ್ ಲೋಬೊ ಪತ್ನಿ ಜೊತೆ ಕಾಂಗ್ರೆಸ್ ಸೇರಿದರು. ಮಿಚೆಲ್ ಲೋಬೊ ರಾಜ್ಯದ ಪ್ರಭಾವಿ ನಾಯಕರಾಗಿದ್ದು, 5 ರಿಂದ 6 ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ.

ಗೋವಾ ಚುನಾವಣೆ; ಮೈತ್ರಿ ಸುಳಿವು ಕೊಟ್ಟ ಶರದ್ ಪವಾರ್ ಗೋವಾ ಚುನಾವಣೆ; ಮೈತ್ರಿ ಸುಳಿವು ಕೊಟ್ಟ ಶರದ್ ಪವಾರ್

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು, "ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪರಂಪರೆಯನ್ನು ಬಿಜೆಪಿ ಮರೆತು ಹೋಗಿದೆ" ಎಂದು ಟೀಕಿಸಿದರು.

ಗೋವಾ; ಶಾಸಕ ಸ್ಥಾನಕ್ಕೆ ಸಂಸ್ಕೃತಿ ಖಾತೆ ಸಚಿವ ರಾಜೀನಾಮೆ ಗೋವಾ; ಶಾಸಕ ಸ್ಥಾನಕ್ಕೆ ಸಂಸ್ಕೃತಿ ಖಾತೆ ಸಚಿವ ರಾಜೀನಾಮೆ

Goa Former Minister Michael Lobo Joins Congress

ಮಿಚೆಲ್ ಲೋಬೊ ಚುನಾವಣೆಯಲ್ಲಿ ಪತ್ನಿಗೆ ಸಹ ಟಿಕೆಟ್ ಕೇಳಿದ್ದರು ಎಂಬ ಆರೋಪವಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, "ನಾನು ಯಾರಿಗೂ ಸಹ ಟಿಕೆಟ್ ಕೇಳಿರಲಿಲ್ಲ" ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಗೋವಾ; ಬಿಜೆಪಿಗೆ ತಲೆನೋವಾದ ಕ್ರಿಶ್ಚಿಯನ್ ಶಾಸಕರ ರಾಜೀನಾಮೆ! ಗೋವಾ; ಬಿಜೆಪಿಗೆ ತಲೆನೋವಾದ ಕ್ರಿಶ್ಚಿಯನ್ ಶಾಸಕರ ರಾಜೀನಾಮೆ!

ಕಲಂಘಾಟ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಮಿಚೆಲ್ ಲೋಬೊ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ವಿಜ್ಞಾನ & ತಂತ್ರಜ್ಞಾನ, ಬಂದರು ಖಾತೆ ಸಚಿವರಾಗಿದ್ದರು. ಸೋಮವಾರ ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಕೆ ಮಾಡಿದ್ದರು.

ರಾಜೀನಾಮೆ ಬಳಿಕ ಮಾತನಾಡಿದ ಮೈಕಲ್ ಲೋಬೊ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಬಿಜೆಪಿ ಈಗ ಜನಸಾಮಾನ್ಯರ ಪಕ್ಷವಾಗಿ ಉಳಿದಿಲ್ಲ. ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ" ಎಂದು ಆರೋಪಿಸಿದ್ದರು.

ಮೈಕಲ್ ಲೋಬೊ ಗೋವಾ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿದ್ದರು. 2019ರಲ್ಲಿ ಡೆಪ್ಯುಟಿ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಪುನಾರಚನೆ ಮಾಡಿದಾಗ ಸಚಿವರಾಗಿದ್ದರು.

ಕ್ಯಾಥೋಲಿಕ್ ಸಮುದಾಯದ ಪ್ರಭಾವಿ ನಾಯಕರಾದ ಮೈಕಲ್ ಲೋಬೋ ಬರ್ದೇಶ್‌ ಪ್ರದೇಶದಲ್ಲಿ ಹೆಚ್ಚಿನ ಪ್ರಭಾವ ಇಟ್ಟುಕೊಂಡಿದ್ದಾರೆ. ಈ ಪ್ರದೇಶದಲ್ಲಿ 6 ವಿಧಾನಸಭಾ ಕ್ಷೇತ್ರಗಳಿವೆ. ಗೋವಾ ಬಿಜೆಪಿಯಲ್ಲಿದ್ದ ನಾಲ್ವರು ಕ್ರಿಶ್ಚಿಯನ್ ಶಾಸಕರ ಪೈಕಿ ಮೂವರು ಪಕ್ಷ ತೊರೆದಿದ್ದು, ಪಕ್ಷಕ್ಕೆ ಹಿನ್ನಡೆಯಾಗಿದೆ.

ಬಿಜೆಪಿ ಶಾಸಕರಾಗಿದ್ದ ಅಲಿನಾ ಸಾಲ್ದಾನಾ, ಕಾರ್ಲೊಸ್ ಅಲ್ಮೇಡಾ, ಮೈಕಲ್ ಲೋಬೋ ಈಗಾಗಲೇ ಪಕ್ಷವನ್ನು ತೊರೆದಿದ್ದಾರೆ. ಸೋಮವಾರ ಪ್ರವೀಣ್ ಜಾಂತ್ಯೆ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದಿದ್ದರು ಅವರು ಎಂಜಿಪಿ ಪಕ್ಷವನ್ನು ಸೇರಲಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಈಗ ಬಿಜೆಪಿಯೇ ಅಧಿಕಾರದಲ್ಲಿದ್ದು, ಮತ್ತೆ ಪಕ್ಷ ಅಧಿಕಾರ ಪಡೆಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. 13 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಗೋವಾ ಫಾರ್ವರ್ಡ್‌ ಪಕ್ಷ, ಪಕ್ಷೇತರ ಶಾಸಕರ ಬಲದಿಂದ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು. 17 ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾದರೂ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು.

ಈ ಬಾರಿಯ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಗೋವಾ ಪ್ರಾದೇಶಿಕ ಪಕ್ಷಗಳ ಜೊತೆಗೆ ಎಎಪಿ ಮತ್ತು ಟಿಎಂಸಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.

Recommended Video

Dravid ಹಾಗು Virat ಇಬ್ಬರಿಗೂ ಈಗ Pantರದ್ದೇ ಚಿಂತೆ | Oneindia Kannada

ಎಎಪಿ ರಾಜ್ಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವಷ್ಟು ಸೀಟುಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಆದ್ದರಿಂದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

English summary
Goa former minister Michael Lobo who quit BJP on Monday joined Congress ahead of the assembly elections. Elections will be held on February 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X