ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ; ಟಿಕೆಟ್ ಸಿಗುವ ಮೊದಲೇ ಉತ್ಪಲ್ ಪರಿಕ್ಕರ್ ಪ್ರಚಾರದಲ್ಲಿ ಬ್ಯುಸಿ!

|
Google Oneindia Kannada News

ಪಣಜಿ, ಜನವರಿ 18; ಗೋವಾ ವಿಧಾನಸಭೆ ಚುನಾವಣೆಗೆ ಉತ್ಪಲ್ ಪರಿಕ್ಕರ್ ಪಣಜಿಯಲ್ಲಿ ಮನೆ-ಮನೆ ಪ್ರಚಾರ ಆರಂಭಿಸಿದ್ದಾರೆ. ಫೆಬ್ರವರಿ 14ರಂದು ನಡೆಯುವ ಗೋವಾ ವಿಧಾನಸಭೆ ಚುನಾವಣೆಗೆ ಉತ್ಪಲ್ ಪರಿಕ್ಕರ್ ಬಿಜೆಪಿ ಟಿಕೆಟ್ ಆಕಾಂಕ್ಷಿ.

ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಗೋವಾದ ರಾಜಧಾನಿ ಪಣಜಿ ಕ್ಷೇತ್ರದಿಂದಲೇ ಉತ್ಪಲ್ ಪರಿಕ್ಕರ್ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಆದರೆ ಟಿಕೆಟ್ ಸಿಗುವ ಯಾವುದೇ ಸೂಚನೆ ಇನ್ನೂ ಸಿಕ್ಕಿಲ್ಲ.

ಗೋವಾ; ಉತ್ಪಲ್ ಪರಿಕ್ಕರ್‌ಗೆ ಎಲ್ಲಾ ವಿರೋಧ ಪಕ್ಷಗಳ ಬೆಂಬಲ? ಗೋವಾ; ಉತ್ಪಲ್ ಪರಿಕ್ಕರ್‌ಗೆ ಎಲ್ಲಾ ವಿರೋಧ ಪಕ್ಷಗಳ ಬೆಂಬಲ?

ಬಿಜೆಪಿ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಪಲ್ ಪರಿಕ್ಕರ್ ಬಯಸಿದ್ದು, ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಪಣಜಿಯಲ್ಲಿ ಹಲವಾರು ಬಿಜೆಪಿ ನಾಯಕರ ಜೊತೆ ಅವರು ಮನೆ-ಮನೆ ಪ್ರಚಾರ ನಡೆಸಿದರು.

ಗೋವಾ; ಎಎಪಿ, ಟಿಎಂಸಿಗೆ ಟ್ವೀಟ್ ಬಾಣ ಬಿಟ್ಟ ಪಿ. ಚಿದಂಬರಂ ಗೋವಾ; ಎಎಪಿ, ಟಿಎಂಸಿಗೆ ಟ್ವೀಟ್ ಬಾಣ ಬಿಟ್ಟ ಪಿ. ಚಿದಂಬರಂ

Goa Elections Utpal Parrikar Started Door To Door Campaign

ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಮಾಡಿ, "ಗೋವಾದ ಎಲ್ಲ ವಿರೋಧ ಪಕ್ಷಗಳು ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವುದನ್ನು ಬೆಂಬಲಿಸಬೇಕು. ಯಾವ ಪಕ್ಷಗಳು ಸಹ ಅವರ ವಿರುದ್ಧ ಅಭ್ಯರ್ಥಿ ಹಾಕಬಾರದು" ಎಂದು ಕರೆ ಕೊಟ್ಟಿದ್ದಾರೆ.

ಚುನಾವಣಾ ಸಮೀಕ್ಷೆ; ಗೋವಾದಲ್ಲಿ ಅತಂತ್ರ ಫಲಿತಾಂಶ! ಚುನಾವಣಾ ಸಮೀಕ್ಷೆ; ಗೋವಾದಲ್ಲಿ ಅತಂತ್ರ ಫಲಿತಾಂಶ!

ಗೋವಾ ಬಿಜೆಪಿ ರಾಜ್ಯ ಘಟಕ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೆಹಲಿಗೆ ಭೇಟಿ ನೀಡಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಿ ವಾಪಸ್ ಆಗಿದ್ದಾರೆ.

ಜನವರಿ 19ರಂದು ಗೋವಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಬಿಜೆಪಿ ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದೆ. ಪಣಜಿಯಲ್ಲಿ ಬಾಬೂಶ್ ಮೊನ್ಸೆರಾತ್ ಟಿಕೆಟ್ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉತ್ಪಲ್ ಪರಿಕ್ಕರ್‌ ಮನೆ-ಮನೆ ಪ್ರಚಾರದ ವೇಳೆ ಉತ್ತಮ ಜನ ಬೆಂಬಲ ಸಿಗುತ್ತಿದೆ. ಜನವರಿ 12ರಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಬಿಜೆಪಿ ಟಿಕೆಟ್ ಸಿಗುವ ಬಗ್ಗೆ ಯಾವ ನಾಯಕರು ಗುಟ್ಟುಬಿಟ್ಟುಕೊಟ್ಟಿಲ್ಲ.

2019ರಲ್ಲಿ ಮನೋಹರ್ ಪರಿಕ್ಕರ್ ನಿಧನರಾದಾಗ ಪಣಜಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಆಗ ಉತ್ಕಲ್ ಪರಿಕ್ಕರ್ ಬಿಜೆಪಿ ಟಿಕೆಟ್ ಕೇಳಿದರು. ಆದರೆ ಆಗ ಪಕ್ಷ ಸಿದ್ಧಾರ್ಥ್ ಕುನ್ಸಿಲಿಯೆಂಕರ್‌ಗೆ ಟಿಕೆಟ್ ನೀಡಿತು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಟನಸಿಯೋ ಮೊನ್ನೆರ್ರೇಟ್ 1,758 ಮತಗಳ ಅಂತರಿಂದ ಸಿದ್ಧಾರ್ಥ್ ಕುನ್ಸಿಲಿಯೆಂಕರ್‌ಗೆ ಸೋಲುಣಿಸಿದರು. ಆದರೆ ಕಳೆದ ವರ್ಷ ಅಟನಸಿಯೋ ಮೊನ್ನೆರ್ರೇಟ್ ಬಿಜೆಪಿ ಸೇರಿದ್ದಾರೆ.

ಈಗ ಪಣಜಿ ಟಿಕೆಟ್‌ಗೆ ಬಾಬೂಶ್ ಮೊನ್ಸೆರಾತ್, ಅಟನಸಿಯೋ ಮೊನ್ನೆರ್ರೇಟ್, ಉತ್ಪಲ್ ಪರಿಕ್ಕರ್ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್, "ನಾಯಕರ ಮಕ್ಕಳು ಎಂಬ ಆಧಾರದಲ್ಲಿ ಬಿಜೆಪಿ ಟಿಕೆಟ್ ನೀಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಪೈಪೋಟಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ಪಲ್ ಪರಿಕ್ಕರ್, "ಅಭ್ಯರ್ಥಿ ಆಯ್ಕೆಗೆ ಗೆಲುವೇ ಮಾನದಂಡವೇ?. ಇಂತಹ ರಾಜಕೀಯ ಗೋವಾದಲ್ಲಿ ನಡೆಯುತ್ತಿದೆ. ಗೆಲ್ಲುವ ಅಭ್ಯರ್ಥಿ ಎಂದು ಕ್ರಿಮಿನಲ್‌ಗೆ ಟಿಕೆಟ್ ಕೊಡುತ್ತೀರಾ?" ಎಂದು ಪ್ರಶ್ನೆ ಮಾಡಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ಘಟಕದಲ್ಲಿ ಅಸಮಾಧಾನವಿದೆ ಎಂಬ ಸುದ್ದಿಗಳೂ ಹಬ್ಬಿವೆ. ಒಂದು ವೇಳೆ ಉತ್ಪಲ್ ಪರಿಕ್ಕರ್‌ಗೆ ಬಿಜೆಪಿ ಟಿಕೆಟ್ ನೀಡದೆ ಅವರು ಪಕ್ಷೇತರ ಅಭ್ಯರ್ಥಿಯಾದರೆ ಬಿಜೆಪಿಗೆ ಹಿನ್ನಡೆಯಾಗಲದೆಯೇ? ಕಾದು ನೋಡಬೇಕು.

ಚುನಾವಣಾ ಪೂರ್ವ ಸಮೀಕ್ಷೆಗಳು ಗೋವಾದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳಿವೆ. ಮೊದಲ ಬಾರಿಗೆ ರಾಜ್ಯದಲ್ಲಿ ಚುನಾವಣಾ ಕಣಕ್ಕಿಳಿಯಲಿರುವ ಎಎಪಿ, ಟಿಎಂಸಿ ಬಿಜೆಪಿ, ಕಾಂಗ್ರೆಸ್‌ನ ಸ್ಥಾನಗಳನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ.

English summary
Utpal Parrikar has started a door-to-door campaign for the upcoming Goa assembly elections February 14. BJP not announced ticket for the son of14 former Goa chief minister late Manohar Parrikar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X