ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ; ಕಲಂಗುಟ್ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು?

|
Google Oneindia Kannada News

ಪಣಜಿ, ಜನವರಿ 25; ಗೋವಾ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. 40 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ. ಆದರೆ ಬಿಜೆಪಿ ಇನ್ನೂ ಕಲಂಗುಟ್ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

ಮಂಗಳವಾರ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಜೋಸೆಫ್ ಸಿಕ್ವೇರಾ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಕಲಂಗುಟ್ ಕ್ಷೇತ್ರಕ್ಕೆ ಅವರೇ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ.

ಗೋವಾ; ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ ಮಾಜಿ ಸಚಿವ ಗೋವಾ; ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ ಮಾಜಿ ಸಚಿವ

ಕಲಂಗುಟ್ ಕ್ಷೇತ್ರದಿಂದ ಕಣಕ್ಕಿಳಿಯುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಜೋಸೆಫ್ ಸೀಕ್ವೆರಾ, "ಪಕ್ಷ ನನಗೆ ಟಿಕೆಟ್ ನೀಡಿದರೆ ನಾನು ಆ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತೇನೆ" ಎಂದರು.

ಗೋವಾ; ಉತ್ಪಲ್ ಪರಿಕ್ಕರ್‌ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್ ನಾಯಕ ಗೋವಾ; ಉತ್ಪಲ್ ಪರಿಕ್ಕರ್‌ಗೆ ಬೆಂಬಲ ಘೋಷಿಸಿದ ಕಾಂಗ್ರೆಸ್ ನಾಯಕ

Goa Elections Former Congress Leader Joseph Sequeira Joins BJP

ಪ್ರಮೋದ್ ಸಾವಂತ್ ಮಾತನಾಡಿ, "ಕಲಂಗುಟ್‌ನ ಮಾಜಿ ಸರಪಂಚ್‌ ಜೋಸೆಫ್ ಸೀಕ್ವೆರಾ ಇಂದು ಬಿಜೆಪಿ ಸೇರಿದ್ದಾರೆ. ಕ್ಷೇತ್ರದಲ್ಲಿ ನಾವು ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲಿದ್ದೇವೆ. ನಾವು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋವಾ ಚುನಾವಣೆ; ಭಂಡಾರಿ ಸಮುದಾಯದ ರಾಜಕೀಯ ಮಹತ್ವ! ಗೋವಾ ಚುನಾವಣೆ; ಭಂಡಾರಿ ಸಮುದಾಯದ ರಾಜಕೀಯ ಮಹತ್ವ!

ಮಿಚೆಲ್ ಲೋಬೊ ರಾಜೀನಾಮೆ; ಕಲಂಗುಟ್ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟದಲ್ಲಿ ವಿಜ್ಞಾನ & ತಂತ್ರಜ್ಞಾನ ಮತ್ತು ಬಂದರು ಖಾತೆ ಸಚಿವರಾಗಿದ್ದ ಮಿಚೆಲ್ ಲೋಬೊ ಜನವರಿ 10ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಬಿಜೆಪಿಯನ್ನು ತೊರೆದಿದ್ದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, "ಗೋವಾ ರಾಜ್ಯದ ಜನರು ಬಿಜೆಪಿ ಆಡಳಿತದ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ಮತದಾರರು ನನಗೆ ಹೇಳಿದ್ದಾರೆ. ಬಿಜೆಪಿ ಸಾಮಾನ್ಯ ಜನರ ಪಕ್ಷವಾಗಿ ಉಳಿದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ" ಎಂದು ಆರೋಪಿಸಿದ್ದರು.

ಜನವರಿ 10ರಂದು ಬಿಜೆಪಿ ತೊರೆದಿದ್ದ ಅವರು ಜನವರಿ 12ರಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದರಿಂದಾಗಿ ಮಿಚೆಲ್ ಲೋಬೊ ರಾಜೀನಾಮೆ ಬಳಿಕ ಬಿಜೆಪಿ ಕಲಂಗುಟ್ ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮಗೊಳಿಸಿರಲಿಲ್ಲ.

ಕಳೆದ ಗುರುವಾರ ಬಿಜೆಪಿ ಗೋವಾ ಚುನಾವಣೆಗೆ 34 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 40 ಕ್ಷೇತ್ರಗಳಲ್ಲಿಯೂ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದೆ. ಆದರೆ ಉಳಿದ 6 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.

ಗೋವಾ ವಿಧಾನಸಭೆ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಜನವರಿ 28 ಕೊನೆಯ ದಿನವಾಗಿದೆ. ಬುಧವಾರ ಪಕ್ಷ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಜನವರಿ 27ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೋವಾದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿವೆ.

English summary
Former Congress leader Joseph Sequeira joined BJP in presence of Goa CM Pramod Sawant. He may contest for elections from Calangute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X