ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; 13 ಅಂಶಗಳ ಅಜೆಂಡಾ ಘೋಷಿಸಿದ ಅರವಿಂದ ಕೇಜ್ರಿವಾಲ್

|
Google Oneindia Kannada News

ಪಣಜಿ, ಜನವರಿ 16; "ಗೋವಾದ ಜನರಿಗಾಗಿ ಆಮ್ ಆದ್ಮಿ ಪಕ್ಷ 13 ಅಂಶಗಳ ಅಜೆಂಡಾ ಅಭಿವೃದ್ಧಿಪಡಿಸಿದೆ" ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದರು.

ಗೋವಾ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಅರವಿಂದ ಕೇಜ್ರಿವಾಲ್ ಎರಡು ದಿನಗಳ ಗೋವಾ ಪ್ರವಾಸದಲ್ಲಿದ್ದಾರೆ. ಭಾನುವಾರ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಗೋವಾ ಚುನಾವಣೆ; ದೆಹಲಿಗೆ ಹೊರಟ ಪ್ರಮೋದ್ ಸಾವಂತ್ ಗೋವಾ ಚುನಾವಣೆ; ದೆಹಲಿಗೆ ಹೊರಟ ಪ್ರಮೋದ್ ಸಾವಂತ್

"ಗೋವಾ ಮುಂಬರುವ ಫೆಬ್ರವರಿ 14ರ ಚುನಾವಣೆಗಾಗಿ ಕಾಯುತ್ತಿದೆ. ರಾಜ್ಯದ ಜನರ ಮುಂದೆ ಎಎಪಿ ಹೊಸ ಭರವಸೆಯಾಗಿದೆ. ಈ ಹಿಂದೆ ಕಾಂಗ್ರೆಸ್, ಬಿಜೆಪಿ ಬಿಟ್ಟು ಅವರಿಗೆ ಬೇರೆ ಆಯ್ಕೆ ಇರಲಿಲ್ಲ. ಜನರು ಬದಲಾವಣೆ ಬಯಸಿದ್ದಾರೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

ಗೋವಾ ಚುನಾವಣೆ; ಬಿಜೆಪಿ ಅಭ್ಯರ್ಥಿ ಅಂತಿಮಗೊಳಿಸಿದ ಎರಡು ಕ್ಷೇತ್ರಗಳು! ಗೋವಾ ಚುನಾವಣೆ; ಬಿಜೆಪಿ ಅಭ್ಯರ್ಥಿ ಅಂತಿಮಗೊಳಿಸಿದ ಎರಡು ಕ್ಷೇತ್ರಗಳು!

Goa Elections Arvind Kejriwal Announced 13 Point Agenda For State

"ಎಎಪಿ ಗೋವಾದ ಜನರಿಗಾಗಿ 13 ಅಂಶಗಳ ಅಜೆಂಡಾವನ್ನು ಅಭಿವೃದ್ಧಿಪಡಿಸಿದೆ. ಯುವಕರಿಗೆ ಉದ್ಯೋಗ ನೀಡಲಾಗುತ್ತದೆ. ಉದ್ಯೋಗ ಸಿಗದ ಯುವಕರಿಗೆ ಮಾಸಿಕ 3000 ರೂ. ನೀಡಲಾಗುತ್ತದೆ. ಗಣಿಗಾರಿಕೆಗೆ ಉತ್ತಮ ಅವಕಾಶವಿದೆ. ಅಧಿಕಾರಕ್ಕೆ ಬಂದ ಆರು ತಿಂಗಳಿನಲ್ಲಿಯೇ ಭೂಮಿ ನೀಡಲಾಗುತ್ತದೆ" ಎಂದು ಕೇಜ್ರಿವಾಲ್‌ ಭರವಸೆ ನೀಡಿದರು.

ಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂ ಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂ

"18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ 1000 ರೂ. ನೀಡಲಾಗುತ್ತದೆ. ಅಂತರಾಷ್ಟ್ರೀಯ ಗುಣಮುಟ್ಟಕ್ಕೆ ತಕ್ಕಂತೆ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲಾಗುತ್ತದೆ. ಗೋವಾಕ್ಕೆ 24*7 ವಿದ್ಯುತ್, ನೀರು ಉಚಿತವಾಗಿ ನೀಡಲಾಗುತ್ತದೆ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ" ಎಂದರು.

"ಮೊಹಲ್ಲಾ ಕ್ಲಿನಿಕ್ & ಆಸ್ಪತ್ರೆಗಳನ್ನು ಪ್ರತಿ ಗ್ರಾಮ, ಜಿಲ್ಲೆಗಳಲ್ಲಿ ಆರಂಭಿಸಲಾಗುತ್ತದೆ. ರೈತರ ಜೊತೆ ಚರ್ಚೆ ನಡೆಸಿದ ಬಳಿಕ ಅವರ ಸಮಸ್ಯೆ ಬಗೆಹರಿಸಲಾಗುತ್ತದೆ. ವ್ಯಾಪಾರ ನೀತಿಯನ್ನು ಸರಳೀಕರಣಗೊಳಿಸಲಾಗುತ್ತದೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

13 ಅಂಶಗಳ ಅಜೆಂಡಾ

1. ಉದ್ಯೋಗ ನೀಡುವುದು
2. ಗಣಿಗಾರಿಕೆ ಪುನಃ ಆರಂಭ
3. ಉತ್ತಮ ಶಿಕ್ಷಣ
4. ಭೂ ಹಕ್ಕು ಪುನಃ ಸ್ಥಾಪನೆ
5. ಉತ್ತಮ ಆರೋಗ್ಯ ಸೇವೆ
6. ಭ್ರಷ್ಟಾಚಾರ ಮುಕ್ತ ಆಡಳಿತ
7. 18 ಮೇಲ್ಪಟ್ಟ ಮಹಿಳೆಗೆ ಮಾಸಿಕ 1 ಸಾವಿರ ರೂ.
8. ಕೃಷಿ ಅಭಿವೃದ್ಧಿ
9. ಸರಳವಾದ ವ್ಯಾಪಾರ & ಕೈಗಾರಿಕಾ ನೀತಿ
10. ಪ್ರವಾಸೋದ್ಯಮ ಅಭಿವೃದ್ಧಿ
11. 24*7 ವಿದ್ಯುತ್ ಸೌಲಭ್ಯ
12. 24*7 ನೀರಿನ ಸೌಲಭ್ಯ
13. ಉತ್ತಮ ರಸ್ತೆಗಳು

ಎಎಪಿ ಈಗಾಗಲೇ ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಗಳು ರಾಜ್ಯದಲ್ಲಿ ಎಎಪಿ ಪ್ರತಿಪಕ್ಷ ಸ್ಥಾನವನ್ನು ಪಡೆಯಲಿದೆ ಎಂದು ಹೇಳಿದೆ. ಅರವಿಂದ ಕೇಜ್ರಿವಾಲ್‌ ಎರಡು ದಿನಗಳಿಂದ ಗೋವಾ ಪ್ರವಾಸದಲ್ಲಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯೇ ಎಎಪಿ ಅತ್ಯಂತ ಪಾರದರ್ಶಕ ಪಕ್ಷ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತ ನಮ್ಮ ಡಿಎನ್‌ಎನಲ್ಲಿಯೇ ಬಂದಿದೆ" ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

ಎಎಪಿ ಮತ್ತು ಟಿಎಂಸಿ ಗೋವಾ ವಿಧಾನಸಭೆಗೆ ಈ ಬಾರಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೇ ಎಎಪಿ ಚುನಾವಣೆಯನ್ನು ಎದುರಿಸುತ್ತಿದೆ.

ಉತ್ಪಲ್ ಪರಿಕ್ಕರ್‌ ಎಎಪಿಗೆ; ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಎಎಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅರವಿಂದ ಕೇಜ್ರಿವಾಲ್, "ನಾನು ಮನೋಹರ್ ಪರಿಕ್ಕರ್‌ಗೆ ಗೌರವ ನೀಡುತ್ತೇನೆ. ಉತ್ಪಲ್ ಪರಿಕ್ಕರ್ ಪಕ್ಷ ಸೇರುವುದಾದರೆ ಸ್ವಾಗತಿಸುತ್ತೇನೆ" ಎಂದರು.

"ಟಿಎಂಸಿ ಜೊತೆಗೆ ಯಾವುದೇ ಚುನಾವಣಾ ಪೂರ್ವ ಮೈತ್ರಿ ಇಲ್ಲ. ರಾಜ್ಯದಲ್ಲಿ ಅತಂತ್ರ ತೀರ್ಪು ಬಂದರೆ ಬಿಜೆಪಿಯೇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲಾಗುತ್ತದೆ" ಎಂದು ಅರವಿಂದ ಕೆಜ್ರೀವಾಲ್ ಸ್ಪಷ್ಟಪಡಿಸಿದರು.

English summary
AAP national convenor and Delhi CM Arvind Kejriwal announced 13 point agenda for the Goa state ahead of the assembly elections. Elections will be held on February 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X