ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂ

|
Google Oneindia Kannada News

ಪಣಜಿ, ಜನವರಿ 13; ಗೋವಾ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಬಾರಿಯ ಗೋವಾ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಟಿಎಂಸಿ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರುವ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಗೋವಾ; ಬಿಜೆಪಿ ಹಸಿರು ನಿಶಾನೆಗಾಗಿ ಕಾದು ಕೂತ ಉತ್ಪಲ್ ಪರಿಕ್ಕರ್! ಗೋವಾ; ಬಿಜೆಪಿ ಹಸಿರು ನಿಶಾನೆಗಾಗಿ ಕಾದು ಕೂತ ಉತ್ಪಲ್ ಪರಿಕ್ಕರ್!

ಟಿಎಂಸಿ ಮತ್ತು ಎಎಪಿ ಸ್ಪರ್ಧೆ ಕುರಿತು ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಿಶ್ಲೇಷಣೆ ಮಾಡಿದ್ದಾರೆ. "ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಎದುರಾಳಿಗಳು" ಎಂದು ಅವರು ಹೇಳಿದ್ದಾರೆ.

ಗೋವಾ ಚುನಾವಣೆ; ಮಹತ್ವದ ಸಭೆ ನಡೆಸಿದ ದೇವೇಂದ್ರ ಫಡ್ನವೀಸ್ಗೋವಾ ಚುನಾವಣೆ; ಮಹತ್ವದ ಸಭೆ ನಡೆಸಿದ ದೇವೇಂದ್ರ ಫಡ್ನವೀಸ್

Goa Elections AAP And TMC Splitting Non BJP Votes Says P Chidambaram

"ಮುಂಬರುವ ಗೋವಾ ಚುನಾವಣೆಯಲ್ಲಿ ಟಿಎಂಸಿ ಮತ್ತು ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕೆಲವು ಮತಗಳನ್ನು ಪಡೆಯಬಹುದು. ಅವು ಬಿಜೆಪಿಯೇತರ ಮತಗಳನ್ನು ವಿಭಜನೆ ಮಾಡಲಿವೆ" ಎಂದು ಪಿ. ಚಿದಂಬರಂ ತಿಳಿಸಿದ್ದಾರೆ.

ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ

ಕೆಲವು ದಿನಗಳ ಹಿಂದೆ ಟಿಎಂಸಿ ಗೋವಾದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿತ್ತು. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಜೊತೆಗೂಡಿ ಮೈತ್ರಿಕೂಟ ರಚಿಸುವ ಮಾತುಗಳನ್ನು ಆಡಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಿ. ಚಿದಂಬರಂ, "ಈ ಕುರಿತು ಎಐಸಿಸಿಯಿಂದ ಯಾವುದೇ ಮಾಹಿತಿ, ಸೂಚನೆ ಬಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

"ಗೋವಾದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ. ಗೋವಾವನ್ನು ಗೋವಾದವರೇ ಆಳಬೇಕು. ಕಾಂಗ್ರೆಸ್ ಪಕ್ಷ ಇದನ್ನೇ ಚುನಾವಣಾ ಪ್ರಚಾರದಲ್ಲಿ ಹೇಳಲಿದೆ" ಎಂದು ಕಾಂಗ್ರೆಸ್ ಪಕ್ಷದ ರಣತಂತ್ರವನ್ನು ಬಿಚ್ಚಿಟ್ಟರು.

ಟಿಎಂಸಿ ತಂತ್ರ; ಗೋವಾ ಚುನಾವಣೆಯಲ್ಲಿನ ಟಿಎಂಸಿ ತಂತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ಪಿ. ಚಿದಂಬರಂ ನಿರಾಕರಿಸಿದರು. ಆದರೆ, "ಪಕ್ಷದ ನಮ್ಮ ನಾಯಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ. ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಟಿಎಂಸಿ ಮುಂದಾಗಿದೆ ಎಂಬ ವರದಿ ನಮಗೆ ಬರುತ್ತಿದೆ" ಎಂದು ಹೇಳಿದರು.

"ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ನೀಡುವ ಪ್ರಸ್ತಾವನೆ ಅನ್ವಯ ಕೇಂದ್ರ ಚುನಾವಣಾ ಸಮಿತಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. 2017ರ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ಕಾಂಗ್ರೆಸ್ ಎಚ್ಚರ ವಹಿಸಲಿದೆ" ಎಂದು ಪಿ. ಚಿದಂಬರಂ ಹೇಳಿದರು.

"ಬಿಜೆಪಿ 10 ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದೆ. ಆದರೆ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಶೇ 65ರಷ್ಟು ಗೋವಾದ ಜನರು ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಅಧಿಕವಾಗಿದೆ" ಎಂದು ವಿಶ್ಲೇಷಣೆ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಟಿಎಂಸಿ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ 40 ಕ್ಷೇತ್ರಗಳಲ್ಲಿಯೂ ಪಕ್ಷ ಕಣಕ್ಕಿಳಿಯಲಿದೆ ಎಂದು ಹೇಳಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಜೊತೆ ಮೈತ್ರಿಕೂಟ ರಚನೆ ಮಾಡಿಕೊಳ್ಳುತ್ತೇವೆ ಎಂದು ಸೂಚನೆ ನೀಡಿದ್ದರು.

ಗೋವಾದ ಟಿಎಂಸಿ ಉಸ್ತುವಾರಿ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಜೊತೆ ಮೈತ್ರಿಯ ಸುಳಿವು ನೀಡಿದ್ದರು. ಆದರೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಸೋಮವಾರ ಟಿಎಂಸಿ ಜೊತೆಗೆ ಯಾವುದೇ ಮೈತ್ರಿ ಇಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದರು.

2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. 13 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.

English summary
Congress senior leader P. Chidambaram said that, AAP and TMC will be splitting the non-BJP votes in Goa assembly elections 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X