ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಜನರ ತೀರ್ಪು ಒಪ್ಪಿಕೊಂಡ ಕಾಂಗ್ರೆಸ್ ನಾಯಕರು

|
Google Oneindia Kannada News

ಪಣಜಿ, ಮಾರ್ಚ್ 10; ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳ ಪೈಕಿ 37ರಲ್ಲಿ ಕಣಕ್ಕಿಳಿದಿದ್ದ ಪಕ್ಷದ ಎರಡಂಕಿ ತಲುಪಲು ಸಹ ಪರದಾಡಿದೆ. ಪ್ರತಿಪಕ್ಷವಾಗಿ ಕೆಲಸ ಮಾಡಲಿದೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿದ್ದವು. ಆದರೆ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡುವಲ್ಲಿ ವಿಫಲವಾಗಿದೆ.

ಗೋವಾ ಚುನಾವಣೆ; ಪತಿ, ಪತ್ನಿ ಇಬ್ಬರೂ ಶಾಸಕರಾಗಿ ಆಯ್ಕೆ! ಗೋವಾ ಚುನಾವಣೆ; ಪತಿ, ಪತ್ನಿ ಇಬ್ಬರೂ ಶಾಸಕರಾಗಿ ಆಯ್ಕೆ!

ರಾಜ್ಯದಲ್ಲಿ ಅಧಿಕಾರ ರಚನೆ ಮಾಡುವ ಉತ್ಸಾಹದಲ್ಲಿದ್ದ ಕಾಂಗ್ರೆಸ್ ನಾಯಕರು ಚುನಾವಣೆ ಸೋಲನ್ನು ಒಪ್ಪಿಕೊಂಡಿದ್ದಾರೆ. ಜವಾಬ್ದಾರಿಯುವ ಪ್ರತಿಪಕ್ಷವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.

ಗೋವಾ ಚುನಾವಣೆ; ಹೀನಾಯ ಸೋಲು ಒಪ್ಪಿಕೊಂಡ ಟಿಎಂಸಿ ಗೋವಾ ಚುನಾವಣೆ; ಹೀನಾಯ ಸೋಲು ಒಪ್ಪಿಕೊಂಡ ಟಿಎಂಸಿ

Goa Election Result 2022: We Lost In Several Constituencies In Small Margins Says Chidambaram

ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಗೋವಾ ಚುನಾವಣೆ ಕಾಂಗ್ರೆಸ್ ವೀಕ್ಷಕರಾಗಿದ್ದ ಪಿ. ಚಿದಂಬರಂ, ಎಐಸಿಸಿ ಗೋವಾ ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಗೋವಾ; ಬಿಜೆಪಿಗೆ ಬೆಂಬಲ ಘೋಷಿಸಿದ ಮೂವರು ಪಕ್ಷೇತರರು! ಗೋವಾ; ಬಿಜೆಪಿಗೆ ಬೆಂಬಲ ಘೋಷಿಸಿದ ಮೂವರು ಪಕ್ಷೇತರರು!

ಪಿ. ಚಿದಂಬರಂ ಮಾತನಾಡಿ, "ಪಕ್ಷಗಳ ನಡುವೆ ಮತ ವಿಭಜನೆ ಆಗಿದ್ದರಿಂದ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಸ್ಥಾನಗಳು ಸಿಕ್ಕಿವೆ. ಬಿಜೆಪಿ ಶೇ 33ರಷ್ಟು ಮತಗಳಿಂದ ಜಯಗಳಿಸಿದೆ. ಉಳಿದ ಮತಗಳು ವಿಭಜನೆಯಾಗಿವೆ" ಎಂದರು.

"ನಾವು ಗೋವಾ ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಹಲವಾರು ತೊಂದರೆಗಳ ನಡುವೆಯೂ ನಮ್ಮ ಅಭ್ಯರ್ಥಿಗಳು ಧೈರ್ಯದಿಂದ ಚುನಾವಣೆ ಎದುರಿಸಿದ್ದಾರೆ. ಬಿಜೆಪಿಗೆ ಜನರು ಅಧಿಕಾರ ನೀಡಿದ್ದು, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಹಲವು ಕ್ಷೇತ್ರಗಳಲ್ಲಿ ನಾವು ಅತಿ ಕಡಿಮೆ ಮತಗಳಿಂದ ಸೋತಿದ್ದೇವೆ" ಎಂದು ಹೇಳಿದರು.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ 20 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್‌ ನಂಬರ್ ಸಿಕ್ಕಿಲ್ಲ.

ಮೂವರು ಪಕ್ಷೇತರ ಶಾಸಕರು, ಎಂಜಿಪಿ ಪಕ್ಷ ಸಹ ಬಿಜೆಪಿಗೆ ಬೆಂಬಲ ನೀಡಿದ್ದು, ಪಕ್ಷ ರಾಜ್ಯದಲ್ಲಿ ಅಧಿಕಾರ ರಚನೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿದ್ದ ಕಾಂಗ್ರೆಸ್ ಈ ಬಾರಿ 10 ಸ್ಥಾನಗಳಲ್ಲಿ ಜಯಗಳಿಸಿದ್ದು (ಸಂಜೆ 5.30ರ) ಹೊತ್ತಿಗೆ 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಕಾಂಗ್ರೆಸ್ ಪಕ್ಷ ಗೋವಾ ಚುನಾವಣೆಯಲ್ಲಿ ಗೋವಾ ಫಾರ್ವರ್ಡ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತ್ತು, ಪಕ್ಷಕ್ಕೆ 3 ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಗೋವಾ ಫಾರ್ವರ್ಡ್‌ ಪಕ್ಷ 1 ಸ್ಥಾನದಲ್ಲಿ ಜಯಗಳಿಸಿದೆ.

ಸಂಜೆ 5.39ರ ಹೊತ್ತಿಗೆ ಫಲಿತಾಂಶ; ಬಿಜೆಪಿ 20, ಕಾಂಗ್ರೆಸ್ 10 (1 ಲೀಡ್), ಎಎಪಿ 2, ಆರ್‌ಜಿಪಿ 1, ಗೋವಾ ಫಾರ್ವರ್ಡ್‌ ಪಕ್ಷ 1, ಎಂಜಿಪಿ 2, ಪಕ್ಷೇತರರು 3 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

Recommended Video

ರಾಹುಲ್ ಗಾಂಧಿ ಆತ್ಮಾವಲೋಕನ ಮಾದಕೊಂಡಿದ್ದು ಹೀಗೆ! | Oneindia Kannada

English summary
We accept the verdict of the people of Goa. In several constituencies we lost with very small margins said Congress leader P. Chidambaram after Goa assembly elections result 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X