ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಉತ್ಪಲ್ ಪರಿಕ್ಕರ್ ಪಡೆದ ಮತಗಳು ಎಷ್ಟು?

|
Google Oneindia Kannada News

ಪಣಜಿ, ಮಾರ್ಚ್ 11; ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಪಣಜಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 716 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಪಣಜಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಟಾನ್ಸಿಯೋ ಮಾನ್ಸೆರೇಟ್ 6,787 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಹಾಲಿ ಶಾಸಕರಾಗಿದ್ದ ಅವರು ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಉತ್ಪಲ್ ಪರಿಕ್ಕರ್ 6071 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದಾರೆ.

ಗೋವಾ ಅಂತಿಮ ಫಲಿತಾಂಶ; ಬಿಜೆಪಿಗೆ ಪಕ್ಷೇತರರ ಬೆಂಬಲ ಗೋವಾ ಅಂತಿಮ ಫಲಿತಾಂಶ; ಬಿಜೆಪಿಗೆ ಪಕ್ಷೇತರರ ಬೆಂಬಲ

ಉತ್ಪಲ್ ಪರಿಕ್ಕರ್ ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕುರಿತು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೋವಾ ಚುನಾವಣೆ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಕ್ಷೇತ್ರದ ಟಿಕೆಟ್‌ ಕೈ ತಪ್ಪಿತು.

ಗೋವಾ ಫಲಿತಾಂಶ; ಪಕ್ಷವಾರು ಸೀಟು, ಮತಗಳಿಕೆ ಅಂಕಿ-ಅಂಶಗೋವಾ ಫಲಿತಾಂಶ; ಪಕ್ಷವಾರು ಸೀಟು, ಮತಗಳಿಕೆ ಅಂಕಿ-ಅಂಶ

ಬಿಜೆಪಿ ಬೇರೆ ಎರಡು ಕ್ಷೇತ್ರದಲ್ಲಿ ಟಿಕೆಟ್ ನೀಡುವ ಆಯ್ಕೆಯನ್ನು ಉತ್ಪಲ್ ಪರಿಕ್ಕರ್‌ಗೆ ನೀಡಿತ್ತು. ಆದರೆ ಅದನ್ನು ನಿರಾಕರಿಸಿದ ಅವರು ಬಿಜೆಪಿ ಬಿಟ್ಟರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದರು. ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿದು ಸೋಲು ಕಂಡರು.

ಗೋವಾ ಚುನಾವಣೆ; ಎಎಪಿ ಸಿಎಂ ಅಭ್ಯರ್ಥಿಗೆ 4,098 ಮತಗಳು! ಗೋವಾ ಚುನಾವಣೆ; ಎಎಪಿ ಸಿಎಂ ಅಭ್ಯರ್ಥಿಗೆ 4,098 ಮತಗಳು!

ಯಾರಿಗೆ ಎಷ್ಟು ಮತಗಳು?

ಯಾರಿಗೆ ಎಷ್ಟು ಮತಗಳು?

ಪಣಜಿ ಕ್ಷೇತ್ರದಲ್ಲಿ ಬಿಜೆಪಿಯ ಅಟಾನ್ಸಿಯೋ ಮಾನ್ಸೆರೇಟ್ 6,787. ಕಾಂಗ್ರೆಸ್‌ನ ಎಲ್ವಿಸ್ ಗೋಮ್ಸ್ 3175. ಉತ್ಪಲ್ ಪರಿಕ್ಕರ್ 6071. ಎಎಪಿಯ ವಾಲ್ಮೀಕಿ ದತ್ತ ನಾಯಕ್ 777, ಆರ್‌ಜಿಪಿಯ ರಾಜೇಶ್ ವಿನಾಯಕ್ ರೇಡ್ಕರ್ 359 ಮತಗಳನ್ನು ಪಡೆದಿದ್ದಾರೆ. 173 ನೋಟಾ ಮತಗಳು ಚಲಾವಣೆಯಾಗಿವೆ.

ಉತ್ಪಲ್ ಪರಿಕ್ಕರ್‌ 5857 ಇವಿಎಂ ಮತಗಳು, 214 ಅಂಚೆ ಮತಗಳನ್ನು ಪಡೆದಿದ್ದಾರೆ. ತಂದೆ ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಬೇಕು ಎಂಬ ಉತ್ಪಲ್ ನಿರೀಕ್ಷೆ ಹುಸಿಯಾಗಿದೆ.

ವಿವಿಧ ಪಕ್ಷಗಳ ಬೆಂಬಲ

ವಿವಿಧ ಪಕ್ಷಗಳ ಬೆಂಬಲ

ಬಿಜೆಪಿ ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ನಿರಾಕರಿಸಿದ ಬಳಿಕ ಎಎಪಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿತು. ಪಣಜಿಯಿಂದಲೇ ಟಿಕೆಟ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿಯೇ ಉಳಿದರು. ಎನ್‌ಸಿಪಿ ಮತ್ತು ಶಿವಸೇನೆ ಗೋವಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡವು. ಪಣಜಿ ಕ್ಷೇತ್ರದ ಅಭ್ಯರ್ಥಿಯನ್ನು ವಾಪಸ್ ಪಡೆದು ಉತ್ಪಲ್ ಪರಿಕ್ಕರ್‌ಗೆ ಬೆಂಬಲ ನೀಡಿದರು. ಆದರೆ ಉತ್ಪಲ್ ಪರಿಕ್ಕರ್ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.

ಉಪ ಚುನಾವಣೆಯಲ್ಲಿಯೂ ಟಿಕೆಟ್ ಸಿಗಲಿಲ್ಲ

ಉಪ ಚುನಾವಣೆಯಲ್ಲಿಯೂ ಟಿಕೆಟ್ ಸಿಗಲಿಲ್ಲ

ಪಣಜಿ ಕ್ಷೇತ್ರದ ಶಾಸಕರಾಗಿದ್ದ ಮನೋಹರ್ ಪರಿಕ್ಕರ್ 2019ರಲ್ಲಿ ನಿಧನ ಹೊಂದಿದರು. ಆಗ ಎದುರಾದ ಉಪ ಚುನಾವಣೆಯಲ್ಲಿ ಬಿಜೆಪಿ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆಗಲೂ ಟಿಕೆಟ್ ಸಿಗಲಿಲ್ಲ, ಕ್ಷೇತ್ರ ಬಿಜೆಪಿ ಕೈ ತಪ್ಪಿತು. ಕಾಂಗ್ರೆಸ್‌ನ ಅಟಾನ್ಸಿಯೋ ಮಾನ್ಸೆರೇಟ್‌ ಗೆಲುವು ಸಾಧಿಸಿದರು. ಚುನಾವಣೆ ಬಳಿಕ ಅವರು ಬಿಜೆಪಿ ಸೇರಿದರು. ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿದ ಬಿಜೆಪಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆದಿದೆ.

ಪರಿಕ್ಕರ್ ಇಲ್ಲದ ಚುನಾವಣೆ

ಪರಿಕ್ಕರ್ ಇಲ್ಲದ ಚುನಾವಣೆ

ಗೋವಾದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಪ್ರಮುಖ ನಾಯಕರಲ್ಲಿ ಮನೋಹರ್ ಪರಿಕ್ಕರ್ ಸಹ ಒಬ್ಬರು. ಅವರ ನಿಧನದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಪಡೆಯುವ ಮೂಲಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್‌ಗೆ 1 ಸ್ಥಾನ ಬೇಕಾಗಿತ್ತು.

ಕಾಂಗ್ರೆಸ್ 11, ಎಎಪಿ 2, ಎಂಜಿಪಿ 2, ಗೋವಾ ಫಾರ್ವರ್ಡ್ ಪಾರ್ಟಿ 1, ಆರ್‌ಜಿಪಿ 1 ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೂವರು ಪಕ್ಷೇತರರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದು, ಬಿಜೆಪಿ ಸರ್ಕಾರ ರಚನೆಯಾಗಲಿದೆ.

English summary
Goa Election Result 2022; Utpal Parrikar has lost from the Panaji seat by around 716 votes against BJP's Atanasio Monserrate. He had contested as independent candidate after BJP not issued ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X