ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಎಎಪಿ ಸಿಎಂ ಅಭ್ಯರ್ಥಿಗೆ 4,098 ಮತಗಳು!

|
Google Oneindia Kannada News

ಪಣಜಿ, ಮಾರ್ಚ್ 10; ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಎಎಪಿ ಪಕ್ಷ ಪಂಜಾಬ್‌ನಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಗೋವಾದಲ್ಲಿ ಪಕ್ಷದ ಇಬ್ಬರು ಶಾಸಕರು ಗೆಲುವು ಸಾಧಿಸಿದ್ದಾರೆ. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಗುರುವಾರ ಗೋವಾ ರಾಜ್ಯದ ಚುನಾವಣೆ ಮತ ಎಣಿಕೆ ನಡೆಯಿತು. ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ. ಆದರೆ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚನೆ ಮಾಡಲಿದೆ.

ಗೋವಾ ಚುನಾವಣೆ; ಜನರ ತೀರ್ಪು ಒಪ್ಪಿಕೊಂಡ ಕಾಂಗ್ರೆಸ್ ನಾಯಕರು ಗೋವಾ ಚುನಾವಣೆ; ಜನರ ತೀರ್ಪು ಒಪ್ಪಿಕೊಂಡ ಕಾಂಗ್ರೆಸ್ ನಾಯಕರು

ಗೋವಾ ವಿಧಾನಸಭೆ ಚುನಾವಣೆಗೆ ಎಎಪಿ ಸಹ 40 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ವಕೀಲರಾದ ಅಮಿತ್ ಪಾಲೇಕರ್‌ರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಹ ರಾಜ್ಯಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದರು.

ಗೋವಾ ಚುನಾವಣೆ; ಪತಿ, ಪತ್ನಿ ಇಬ್ಬರೂ ಶಾಸಕರಾಗಿ ಆಯ್ಕೆ! ಗೋವಾ ಚುನಾವಣೆ; ಪತಿ, ಪತ್ನಿ ಇಬ್ಬರೂ ಶಾಸಕರಾಗಿ ಆಯ್ಕೆ!

Goa assembly election

ಅಮಿತ್ ಕಾಲೇಕರ್ ಸೆ. ಕ್ರೂಜ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಕ್ಷೇತ್ರದ ಹಾಲಿ ಶಾಸಕರಾಗಿದ್ದವರು ಬಿಜೆಪಿಯ ಆಂಟೊನಿಯೋ ಫರ್ನಾಂಡೀಸ್. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ರುಡಾಲ್ಫ್ ಫರ್ನಾಂಡೀಸ್ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿದ್ದಾರೆ.

ಗೋವಾ; ಬಿಜೆಪಿಗೆ ಬೆಂಬಲ ಘೋಷಿಸಿದ ಮೂವರು ಪಕ್ಷೇತರರು! ಗೋವಾ; ಬಿಜೆಪಿಗೆ ಬೆಂಬಲ ಘೋಷಿಸಿದ ಮೂವರು ಪಕ್ಷೇತರರು!

ಫೆಬ್ರವರಿ 14ರಂದು ನಡೆದ ಚುನಾವಣೆಯಲ್ಲಿ ಆಂಟೊನಿಯೋ ಫರ್ನಾಂಡೀಸ್ 6,377 ಮತಗಳನ್ನು ಪಡೆದಿದ್ದಾರೆ. ರುಡಾಲ್ಫ್ ಫರ್ನಾಂಡೀಸ್ 8,841 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್ 4,098 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಉತ್ತರ ಗೋವಾ ಫಲಿತಾಂಶ; ಇನ್ನು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಗೋವಾ ಭಾಗದ 19 ಸೀಟುಗಳ ಪೈಕಿ 10 ಸೀಟುಗಳಲ್ಲಿ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್ ಪಕ್ಷ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎಂಜಿಪಿ, ಆರ್‌ಜಿಪಿ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್‌ 10 ಕ್ಷೇತ್ರಗಳಲ್ಲಿ ಜಯಗಳಿಸಿದ್ದು (1 ಕ್ಷೇತ್ರದಲ್ಲಿ) ಮುನ್ನಡೆಯಲ್ಲಿದೆ. ಎಎಪಿ 2, ಗೋವಾ ಫಾರ್ವರ್ಡ್ ಪಕ್ಷ 1, ಎಂಜಿಪಿ 2, ಆರ್‌ಜಿಪಿ 1 ಮತ್ತು ಪಕ್ಷೇತರರು 3 ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

English summary
Goa assembly election results 2022; Aam Aadmi Party chief ministerial candidate Amit Palekar got 4098 votes. BJP candidate Antonio Fernandes get 6,377 votes and Congress candidate won the seat with 8,841 votes. Amit Palekar got 4,098 votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X