ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ, ಕಲಂಗುಟ್‌ನಿಂದ ಮೈಕಲ್ ಲೋಬೋ ಸ್ಪರ್ಧೆ

|
Google Oneindia Kannada News

ಪಣಜಿ, ಜನವರಿ 18: ಮುಂಬರುವ ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಒಂಭತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು (ಮಂಗಳವಾರ) ಬಿಡುಗಡೆ ಮಾಡಿದೆ. ಬಿಜೆಪಿಯ ಮಾಜಿ ಸಚಿವ ಮೈಕಲ್ ಲೋಬೋ ಅವರು ಕಲಂಗುಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದಲ್ಲಿ ಸಚಿವರಾಗಿದ್ದ ಮೈಕೆಲ್ ಲೋಬೋ ಅವರು ಗೋವಾ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸುವ ಒಂದು ವಾರದ ಮೊದಲು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.

ಉತ್ತರ ಗೋವಾದ ಪ್ರಬಲ ನಾಯಕ ಮೈಕೆಲ್ ಲೋಬೋ, ಬಿಜೆಪಿ ನೇತೃತ್ವದ ಗೋವಾ ಸರ್ಕಾರದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ತ್ಯಾಜ್ಯ ನಿರ್ವಹಣೆಯ ಸಚಿವರಾಗಿದ್ದರು. ಕಾಂಗ್ರೆಸ್ ಸೇರುವ ವೇಳೆ ಮೈಕೆಲ್ ಲೋಬೋ, "ಬಿಜೆಪಿ ಸಾಮಾನ್ಯ ಜನರ ಪಕ್ಷವಲ್ಲ ಎಂದು ಮತದಾರರು ನನಗೆ ಹೇಳಿದ್ದಾರೆ. ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪರಂಪರೆಯನ್ನು ಬಿಜೆಪಿ ಮರೆತು ಹೋಗಿದೆ,'' ಎಂದು ಟೀಕಿಸಿದ್ದರು.

Goa Election 2022: Congress Releases Candidates 2nd list, Michael Lobo Contest From Kalangute

ಕಾಂಗ್ರೆಸ್ ಸಾಮಾನ್ಯ ಜನರಿಗಾಗಿ ಕೆಲಸ ಮಾಡುತ್ತಿದೆ. 25ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು. ಅವರ ಪತ್ನಿ ದೆಲಿಲಾ, ಪರ್ರಾದ ಸರಪಂಚ್ ಕೂಡ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ.

ಕಾಂಗ್ರೆಸ್‌ನ ಎರಡನೇ ಪಟ್ಟಿಯಲ್ಲಿ ಹೆಸರಿಸಲಾದ ಇತರ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:

* ಮೇಘಶಾಯಮ್ ರಾವುತ್- ಬಿಚೋಲಿಂ
* ಅಮಾನ್ ಲೊಟ್ಲಿಕರ್- ಟಿವಿಂ
* ವಿಕಾಸ್ ಪ್ರಭುದೇಸಾಯಿ- ಪೊರ್ವೊರಿಂ
* ಆಂಥೋನಿ ಎಲ್ ಫೆರ್ನಾಂಡಿಸ್- ಸೇಂಟ್ ಆಂಡ್ರೆ
* ಧರ್ಮೇಶ್ ಸಗ್ಲಾನಿ- ಸಂಕ್ವೆಲಿಂ
* ಲವು ಮಾಮ್ಲೇಕರ್- ಮರ್ಕೈಮ್
* ಪ್ರಸಾದ್ ಗಾಂವ್ಕರ್- ಸಾಂಗೇಮ್
* ಜನಾರ್ದನ ಭಂಡಾರಿ- ಕೆನಕೋನ

Goa Election 2022: Congress Releases Candidates 2nd list, Michael Lobo Contest From Kalangute

ಫೆಬ್ರವರಿ 14ರಂದು ಚುನಾವಣೆ
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ, ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಈಗ ಬಿಜೆಪಿಯೇ ಅಧಿಕಾರದಲ್ಲಿದ್ದು, ಮತ್ತೆ ಪಕ್ಷ ಅಧಿಕಾರ ಪಡೆಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ.

2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. 13 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿತ್ತು. ಗೋವಾ ಫಾರ್ವರ್ಡ್‌ ಪಕ್ಷ, ಪಕ್ಷೇತರ ಶಾಸಕರ ಬಲದಿಂದ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿತ್ತು. 17 ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾದರೂ ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು.

ಈ ಬಾರಿಯ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಗೋವಾ ಪ್ರಾದೇಶಿಕ ಪಕ್ಷಗಳ ಜೊತೆಗೆ ಎಎಪಿ ಮತ್ತು ಟಿಎಂಸಿ ಮೊದಲ ಬಾರಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ.

English summary
The Congress has today released its second list of nine candidates for the upcoming Goa Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X