• search
 • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋವಾ ಗಡಿಗಳು ಓಪನ್; ಇನ್ನು ಗೋವಾಗೆ ಹೋಗಲು ಯಾವುದೇ ನಿರ್ಬಂಧವಿಲ್ಲ

|

ಗೋವಾ, ಆಗಸ್ಟ್ 31: ಸೆಪ್ಟೆಂಬರ್ 1ರಿಂದ ಗೋವಾ ರಾಜ್ಯದ ಎಲ್ಲಾ ಗಡಿಗಳನ್ನು ಮುಕ್ತಗೊಳಿಸಲಾಗುತ್ತಿದೆ. ನೆರೆ ರಾಜ್ಯಗಳ ನಾಗರಿಕರು ಗೋವಾಕ್ಕೆ ಬರಲು ಸಾಧ್ಯವಾಗಲಿದ್ದು, ಹಲವು ದಿನಗಳಿಂದ ಗೋವಾದಲ್ಲಿ ಸಿಲುಕಿಕೊಂಡಿರುವ ಅನೇಕ ವಿದೇಶಿಯರು ತವರಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

   Goaದಲ್ಲಿ20 ರುಪಾಯಿಗೆ ಸಿಗ್ತಿದೆ ಬಿಯರ್ | Oneindia Kannada

   ಗೋವಾಕ್ಕೆ ಬಂದು ಹೋಗುವ ನೆರೆ ರಾಜ್ಯದ ಯಾರನ್ನೂ ನಾವು ತಡೆದಿಲ್ಲ. ಆದರೆ ಕೊರೊನಾದ ಭಯ ಮತ್ತು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೇರಿದ್ದ ಕಾರಣ ಗಡಿಗಳನ್ನು ಮುಚ್ಚಲಾಗಿತ್ತು. ಈಗ ಕೇಂದ್ರ ಸರ್ಕಾರವು ನಿಷೇಧವನ್ನು ತೆಗೆದು ಹಾಕಿದ್ದು, ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಸಿಲುಕಿಕೊಂಡವರು ತಮ್ಮ ತವರಿಗೆ ಮರಳಲು, ಕೆಲಸಕ್ಕಾಗಿ ಗೋವಾಕ್ಕೆ ಬಂದವರಿಗೆ ಮರಳಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಗೃಹ‌ ಸಚಿವಾಲಯ

   ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಗೃಹ‌ ಸಚಿವಾಲಯ

   'ಅನ್ ಲಾಕ್- 3'ಯಲ್ಲಿ ಕೇಂದ್ರ ಮಾರ್ಗಸೂಚಿಗಳ ಅಡಿಯಲ್ಲಿ ಅಂತರ ರಾಜ್ಯ ಅಥವಾ ರಾಜ್ಯದೊಳಗಿನ ಯಾವುದೇ ಜನರು ಅಥವಾ ಸರಕುಗಳ ಪ್ರಯಾಣಕ್ಕೆ ನಿರ್ಬಂಧಗಳಿಲ್ಲ. ಕೂಡಲೇ ಈ ನಿರ್ಬಂಧ ಸಡಿಲಗೊಳಿಸಿ ವ್ಯಕ್ತಿಗಳು ಅಥವಾ ಸರಕುಗಳ ಚಲನೆಗೆ ಪ್ರತ್ಯೇಕ ಅನುಮತಿ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ ಎಂದು ಹೇಳಿದ್ದ ಕೇಂದ್ರ ಗೃಹ ಸಚಿವಾಲಯ, ಅಂತರ್ ರಾಜ್ಯ ಪ್ರಯಾಣ ನಿರ್ಬಂಧ ಕುರಿತಂತೆ ಗೋವಾ ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿತ್ತು.

   ಇನ್ನು ಗೋವಾಗೆ ಹೋಗಲು ಯಾವುದೇ ನಿರ್ಬಂಧವಿಲ್ಲ

    ಗೋವಾಗೆ ಹೋಗಲು ಅನುಮತಿ ಅಗತ್ಯವಿಲ್ಲ

   ಗೋವಾಗೆ ಹೋಗಲು ಅನುಮತಿ ಅಗತ್ಯವಿಲ್ಲ

   ಅದಲ್ಲದೇ, ಶನಿವಾರ ‘ಅನ್ ಲಾಕ್- 4' ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ, ವ್ಯಕ್ತಿಗಳು ಮತ್ತು ಸರಕುಗಳ ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಇಂತಹ ಪ್ರಯಾಣಗಳಿಗೆ ಪ್ರತ್ಯೇಕ ಅನುಮತಿ/ ಅನುಮೋದನೆ/ ಇ-ಪರ್ಮಿಟ್ ಅಗತ್ಯವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿತ್ತು.

    ಗಡಿಯಲ್ಲಿ ಪ್ರತಿಭಟನೆ ನಡೆದಿತ್ತು

   ಗಡಿಯಲ್ಲಿ ಪ್ರತಿಭಟನೆ ನಡೆದಿತ್ತು

   ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯ ಪ್ರವೇಶಿಸಬೇಕೆಂಬ ಗೋವಾದ ಮಾರ್ಗಸೂಚಿ ವಿರೋಧಿಸಿ ಗಡಿ ಮಾಜಾಳಿಯಲ್ಲಿ ವಿವಿಧ ಸಂಘಟನೆಗಳಿಂದ ಇತ್ತೀಚೆಗೆ ಪ್ರತಿಭಟನೆ ನಡೆದಿತ್ತು.

   ಕೊರೊನಾ ಭೀತಿಯಲ್ಲೂ ಪ್ರವಾಸೋದ್ಯಮ ಪುನರಾರಂಭಿಸಿದ ಗೋವಾ

   ವಾಟಾಳ್ ಪಕ್ಷ, ಕರ್ನಾಟಕ ರಕ್ಷಣಾ ವೇದಿಕೆ, ಟ್ಯಾಕ್ಸಿ ಯೂನಿಯನ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ- ಗೋವಾ ಗಡಿಯಲ್ಲಿ ಕಾರ್ಯಕರ್ತರು, ಕೇಂದ್ರದ ನಿಯಮ ವಿರೋಧಿಸಿ ಗಡಿ ಬಂದ್ ಮಾಡಿರುವ ಗೋವಾ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸೆಪ್ಟೆಂಬರ್ 1ರಿಂದ ಗಡಿಯನ್ನು ಮುಕ್ತವಾಗಿ ತೆರೆಯದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.

    ಕರ್ನಾಟಕದ ಜನತೆಗೆ ಸಮಸ್ಯೆಯಾಗಿತ್ತು

   ಕರ್ನಾಟಕದ ಜನತೆಗೆ ಸಮಸ್ಯೆಯಾಗಿತ್ತು

   ಸೆಪ್ಟೆಂಬರ್ 1 ರಿಂದ ಕರ್ನಾಟಕದ ಜನತೆಗೆ ಗೋವಾ ಪ್ರವೇಶಕ್ಕೆ ಇರುವ ನಿಯಮಾವಳಿಗಳನ್ನು ಸಡಿಲಿಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರೊಂದಿಗೆ ಇತ್ತೀಚಿಗೆ ನಡೆಸಿದ್ದ ಮಾತುಕತೆಯಲ್ಲಿ ಭರವಸೆ ನೀಡಿದ್ದರು. ಗಡಿಯಲ್ಲಿ ಮುಕ್ತ ಪ್ರವೇಶ ಇಲ್ಲದಿರುವುದರಿಂದ ಕರ್ನಾಟಕದ ಜನತೆಗೆ ಭಾರೀ ಸಮಸ್ಯೆ ಆಗುತ್ತಿದೆ ಎಂಬುದನ್ನು ಶಾಸಕಿ ಮನವರಿಕೆ ಮಾಡಿಕೊಟ್ಟಿದ್ದರು.

   English summary
   Goa government decided to open all its border from september 1. There is no any restriction to enter goa
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X