ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ನಿಧನ

|
Google Oneindia Kannada News

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ತಮ್ಮ ಅರವತ್ಮೂರನೇ ವರ್ಷದಲ್ಲಿ (13 ಮಾರ್ಚ್ 1955- 17 ಮಾರ್ಚ್ 2019) ಭಾನುವಾರ ನಿಧನರಾಗಿದ್ದಾರೆ.

ಮನೋಹರ್ ಪರಿಕರ್ ಜನಿಸಿದ್ದು ಡಿಸೆಂಬರ್ 13ನೆ ತಾರೀಕು, 1955ರಲ್ಲಿ, ಗೋವಾದ ಮಾಪುಸದಲ್ಲಿ. ಮಾರ್ಗೋವಾದ ಲಯೋಲಾ ಪ್ರೌಢಶಾಲೆಯಲ್ಲಿ ಮರಾಠಿಯಲ್ಲಿ ವಿದ್ಯಾಭ್ಯಾಸ ಮಾಡಿದ ಪರಿಕರ್, ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್ ನಲ್ಲಿ 1978ರಲ್ಲಿ ಪದವಿ ಪಡೆದರು. ಐಐಟಿಯಲ್ಲಿ ವಿದ್ಯಾಭ್ಯಾಸ ಮಾಡಿ, ಭಾರತದ ರಾಜ್ಯವೊಂದಕ್ಕೆ ಶಾಸಕರಾಗಿ ಆಯ್ಕೆಯಾದ ಮೊದಲ ವ್ಯಕ್ತಿ ಮನೋಹರ್ ಪರಿಕರ್.

ಮನೋಹರ್ ನಿಧನ ನಂತರವೂ ಗೋವಾದಲ್ಲಿ ಬಿಜೆಪಿ ಸರ್ಕಾರ ಸ್ಥಿರಮನೋಹರ್ ನಿಧನ ನಂತರವೂ ಗೋವಾದಲ್ಲಿ ಬಿಜೆಪಿ ಸರ್ಕಾರ ಸ್ಥಿರ

ಬಹಳ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸೇರಿದವರು ಮನೋಹರ್ ಪರಿಕರ್ ಮತ್ತು ಮುಖ್ಯ ಶಿಕ್ಷಕ್ ಕೂಡ ಆಗಿದ್ದರು. ಐಐಟಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ಮೇಲೆ ಮಾಪುಸದಲ್ಲಿ ಆರೆಸ್ಸೆಸ್ ಕೆಲಸಗಳನ್ನು ಮತ್ತೆ ಆರಂಭಿಸಿದ್ದರು. ಜತೆಗೆ ವ್ಯಾಪಾರವೊಂದನ್ನು ನಡೆಸುತ್ತಾ, ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಸಂಘ್ ಚಾಲಕ್ ಆದರು.

Manohar Parrikar

ಆರೆಸ್ಸೆಸ್ ನ ಉತ್ತರ ಗೋವಾ ಘಟಕದಲ್ಲಿ ಸಕ್ರಿಯರಾಗಿದ್ದು, ರಾಮ ಜನ್ಮ ಭೂಮಿ ಚಳವಳಿ ನಡೆದಾಗ ಸಂಘಟನೆಯ ಪ್ರಮುಖ ಜವಾಬ್ದಾರಿ ವಹಿಸಿದ್ದರು. ಅ ನಂತರ ಬಿಜೆಪಿಗೆ ಬಂದ ಅವರಿಗೆ ತಮ್ಮ ಆರೆಸ್ಸೆಸ್ ಹಿನ್ನೆಲೆ ಬಗ್ಗೆ ಸದಾ ಒಂದು ಹೆಮ್ಮೆ ಇತ್ತು. ತಾನು ಶಿಸ್ತು, ಪ್ರಗತಿಪರ ರಾಷ್ಟ್ರೀಯ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿ ಕಲಿತಿದ್ದು ಆರೆಸ್ಸೆಸ್ ನಲ್ಲಿ ಎಂಬ ಭಾವ ಅವರಲ್ಲಿತ್ತು.

ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?

ಅವರು ಮೊದಲ ಬಾರಿಗೆ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದದ್ದು 1994ರಲ್ಲಿ. ಆಗ ಅವರಿಗೆ ಮೂವತ್ತೆಂಟು, ಮೂವತ್ತೊಂಬತ್ತು ವರ್ಷ ವಯಸ್ಸು. 1999ರ ಜೂನ್ ನಿಂದ ನವೆಂಬರ್ ತನಕ ಗೋವಾದ ವಿಪಕ್ಷ ನಾಯಕರಾಗಿದ್ದರು. ಮನೋಹರ್ ಪರಿಕರ್ ಮೊದಲ ಬಾರಿಗೆ ಗೋವಾದ ಮುಖ್ಯಮಂತ್ರಿ ಆಗಿದ್ದು ಅಕ್ಟೋಬರ್ 24ರಂದು 2000ನೇ ಇಸವಿಯಲ್ಲಿ.

ಮೈಯಲ್ಲಿ ಅನಾರೋಗ್ಯ, ಮೂಗಿಗೆ ನಳಿಗೆ... ಕರ್ತವ್ಯಪ್ರಜ್ಞೆ ಬತ್ತಿಲ್ಲ!ಮೈಯಲ್ಲಿ ಅನಾರೋಗ್ಯ, ಮೂಗಿಗೆ ನಳಿಗೆ... ಕರ್ತವ್ಯಪ್ರಜ್ಞೆ ಬತ್ತಿಲ್ಲ!

ಆದರೆ, ಫೆಬ್ರವರಿ 27ರ 2002ರಂದು ಅವರ ಅಧಿಕಾರಾವಧಿ ಕೊನೆಯಾಯಿತು. ಜೂನ್ 2002ರಲ್ಲಿ ಅವರು ಮತ್ತೊಂದು ಅವಧಿಗೆ ಮುಖ್ಯಮಂತ್ರಿಗೆ ಪುನರಾಯ್ಕೆ ಆದರು. ಜನವರಿ 29, 2005ರಲ್ಲಿ ಪರಿಕರ್ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿಯಿತು. ಆ ನಂತರ ಕಾಂಗ್ರೆಸ್ಸಿನ ಪ್ರತಾಪ್ ಸಿಂಗ್ ರಾಣೆ ಮುಖ್ಯಮಂತ್ರಿ ಆದರು.

2007ರಲ್ಲಿ ದಿಗಂಬರ್ ಕಾಮತ್ ನೇತೃತ್ವದ ಕಾಂಗ್ರೆಸ್ ಪಕ್ಷವು ಮನೋಹರ್ ಪರಿಕರ್ ಮುಂದಾಳತ್ವದ ಬಿಜೆಪಿಯನ್ನು ಸೋಲಿಸಿ, ಅಧಿಕಾರ ಹಿಡಿಯಿತು. ಆದರೆ 2012ರಲ್ಲಿ ಮತ್ತೆ ಮನೋಹರ್ ಪರಿಕರ್ ಬಿಜೆಪಿಯನ್ನು ಗೆಲ್ಲಿಸಲು ಸಫಲರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಗೋವಾದ ಎರಡೂ ಸ್ಥಾನ ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಯಿತು. ಆ ಮೂಲಕ ಪರಿಕರ್ ಮತ್ತಷ್ಟು ಪ್ರಬಲರಾದರು.

2014ರಲ್ಲಿ ಪ್ರಧಾನಿ ಮೋದಿ ಅವರೇ ಮನೋಹರ್ ಪರಿಕರ್ ಅವರನ್ನು ರಕ್ಷಣಾ ಖಾತೆ ನಿರ್ವಹಿಸಲು ಕರೆಸಿಕೊಂಡರು. ಅರುಣ್ ಜೇಟ್ಲಿ ಅವರಿಂದ ಆ ಹುದ್ದೆ ವಹಿಸಿಕೊಂಡ ಪರಿಕರ್, ಸಮರ್ಥವಾಗಿ ಜವಾಬ್ದಾರಿ ನಿರ್ವಹಿಸಿದ್ದರು. ರಕ್ಷಣಾ ಸಚಿವಾಲಯದಲ್ಲಿ ಹಿಂದಿನ ಸರಕಾರದಲ್ಲಿ ನಡೆದಿದ್ದ ಹಲವು ಹಗರಣ ಬಯಲಿಗೆ ಎಳೆದಿದ್ದರು. ಅವರು ಮತ್ತೆ ಗೋವಾ ಮುಖ್ಯಮಂತ್ರಿ ಆದರು. ದೀರ್ಘಾವಧಿ ಅನಾರೋಗ್ಯದಿಂದ ಬಳಲಿ, ಸಾವನ್ನಪ್ಪಿದ್ದಾರೆ.

ಮನೋಹರ್ ಪರಿಕರ್ ಗೆ ಹದಿನೆಂಟು ವರ್ಷದ ಹಿಂದೆಯೇ ಪತ್ನಿ ತೀರಿಕೊಂಡಿದ್ದರು. ಉತ್ಪಲ್ ಪರಿಕರ್, ಅಭಿಜಾತ್ ಪರಿಕರ್ ಎಂಬಿಬ್ಬರು ಮಕ್ಕಳಿದ್ದಾರೆ.

English summary
Goa CM Manohar Parrikar passes away on Sunday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X