ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?

|
Google Oneindia Kannada News

Recommended Video

Manohar Parrikar : ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು? | Oneindia Kannada

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ತಮ್ಮ 63ನೇ ವರ್ಷದಲ್ಲಿ (13 ಮಾರ್ಚ್ 1955- 17 ಮಾರ್ಚ್ 2019) ಭಾನುವಾರ ನಿಧನರಾಗಿದ್ದಾರೆ. ಕಳೆದ ವರ್ಷ ಮೇದೋಜ್ಜೀರಕ ಗ್ರಂಥಿ ಸಮಸ್ಯೆಗಾಗಿ ಚಿಕಿತ್ಸೆ ಪಡೆದಿದ್ದ ಅವರು, ಕೆಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದರು. ಭಾನುವಾರ ರಾತ್ರಿ ಮುಖ್ಯಮಂತ್ರಿ ಕಚೇರಿಯಿಂದ ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂಬ ಟ್ವೀಟ್ ಬಂದಿತ್ತು.

ಆ ಟ್ವೀಟ್ ಬಂದ ಒಂದು-ಒಂದೂವರೆ ಗಂಟೆಯೊಳಗೆ ಅವರ ನಿಧನ ವಾರ್ತೆ ಹೊರಬಿದ್ದಿದೆ. ಪರಿಕರ್ ನಿಧನಕ್ಕೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಗೋವಾದ ಜನರಿಗಾಗಿ ಮನೋಹರ್ ಪರಿಕರ್ ಅವರು ಸಲ್ಲಿಸಿದ ಸೇವೆ ಮರೆಯಲು ಸಾಧ್ಯವೇ ಇಲ್ಲ ಎಂದು ಸ್ಮರಿಸಿದ್ದಾರೆ.

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ನಿಧನಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ನಿಧನ

ಇನ್ನು ಸೋಮವಾರದಂದು ಬೆಳಗ್ಗೆ ಹನ್ನೊಂದು ಗಂಟೆಗೆ ಕೇಂದ್ರ ಸಂಪುಟದಿಂದ ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರ ಸಂತಾಪ ಸಭೆ ಕರೆಯಲಾಗಿದೆ. ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ, ಮನೋಹರ್ ಪರಿಕರ್ ಅವರ ಸಾವಿನ ವಾರ್ತೆಯಿಂದ ಬಹಳ ದುಃಖವಾಗಿದೆ. ಕ್ಯಾನ್ಸರ್ ಜತೆಗಿನ ಹೋರಾಟದ ಹೊರತಾಗಿಯೂ ಅವರೊಬ್ಬ ನಿಜವಾದ ಹೋರಾಟಗಾರ. ಜನರ ಸಲುವಾಗಿ ದಣಿವರಿಯದೆ ದುಡಿದವರು ಎಂದಿದ್ದಾರೆ.

ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ

ಮನೋಹರ್ ಪರಿಕರ್ ಜೀ ಸಾವಿನಿಂದ ಬಹಳ ದುಃಖವಾಗಿದೆ. ಈ ನಷ್ಟವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಆ ದೇವರು ನೀಡಲಿ ಎಂದಿದ್ದಾರೆ.

ಪಕ್ಷಾತೀತವಾಗಿ ಅಭಿಮಾನ, ಗೌರವ ಇತ್ತು

ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದ ವಿರುದ್ಧ ಹೋರಾಡುತ್ತಾ ಬಂದಿದ್ದ ಧೈರ್ಯಶಾಲಿ ಮನೋಹರ್ ಪರಿಕರ್ ಜೀ ಅವರ ಸಾವಿನ ಸುದ್ದಿ ಕೇಳಿ ಬಹಳ ದುಃಖ ಆಗಿದೆ. ಪಕ್ಷಾತೀತವಾಗಿ ಅವರ ಬಗ್ಗೆ ಗೌರವ, ಅಭಿಮಾನ ಇತ್ತು. ಗೋವಾದ ಮೆಚ್ಚಿನ ಮಗನಲ್ಲಿ ಅವರೂ ಒಬ್ಬರು. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ.

ತಾಳ್ಮೆಯಿಂದ ನಡೆದುಕೊಂಡರು

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀ ಸಾವಿನಿಂದ ದುಃಖವಾಗಿದೆ. ತಮ್ಮ ಕಾಯಿಲೆ ವಿರುದ್ಧ ತುಂಬ ತಾಳ್ಮೆಯಿಂದ ನಡೆದುಕೊಂಡರು. ಮನೋಹರ್ ಪರಿಕರ್ ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ.

ಸಜ್ಜನ-ಪ್ರಾಮಾಣಿಕ ವ್ಯಕ್ತಿ, ಉತ್ತಮ ಸ್ನೇಹಿತ

ಮನೋಹರ್ ಪರಿಕರ್ ಸಾವಿನಿಂದ ವಿಪರೀತ ದುಃಖವಾಗಿದೆ. ಅವರೊಬ್ಬ ಮಹಾನ್ ನಾಯಕ. ಸಜ್ಜನ- ಪ್ರಾಮಾಣಿಕ ವ್ಯಕ್ತಿ ಮತ್ತು ತುಂಬ ಒಳ್ಳೆ ಸ್ನೇಹಿತ. ದೇಶವು ಅವರನ್ನು ಸ್ಮರಿಸುತ್ತದೆ ಎಂದಿದ್ದಾರೆ.

English summary
Goa CM Manohar Parrikar demise: Who said what? Various party leaders reaction in twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X