ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಬಿಜೆಪಿ ಸರ್ಕಾರ ಸೇಫ್: ಬಹುಮತ ಸಾಬೀತು ಪಡಿಸಿದ ಸಾವಂತ್

|
Google Oneindia Kannada News

ಪಣಜಿ, ಮಾರ್ಚ್ 20: ಗೋವಾದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿಯಾಗಿದ್ದು, ಮೊದಲ ಪರೀಕ್ಷೆಯಲ್ಲಿ ನೂತನ ಸಿಎಂ ಪ್ರಮೋದ್ ಸಾವಂತ್ ಉತ್ತೀರ್ಣರಾಗಿದ್ದಾರೆ.

ಒಟ್ಟು 20 ಶಾಸಕರು ಪ್ರಮೋದ್ ಸಾವಂತ್ ಪರ ಮತ ಚಲಾಯಿಸಿದ ಕಾರಣ ಅವರು ಬಹುಮತ ಸಾಬೀತುಪಡಿಸಿದರು.

ಗೋವಾದಲ್ಲಿ ಇಂದು ವಿಶ್ವಾಸಮತ ಯಾಚನೆ, 5-ಸ್ಟಾರ್ ಹೊಟೆಲ್ ನಲ್ಲಿ ಶಾಸಕರು!ಗೋವಾದಲ್ಲಿ ಇಂದು ವಿಶ್ವಾಸಮತ ಯಾಚನೆ, 5-ಸ್ಟಾರ್ ಹೊಟೆಲ್ ನಲ್ಲಿ ಶಾಸಕರು!

ಇಂದು ವಿಶ್ವಾಸಮತದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಲ್ಲಾ ಶಾಸಕರನ್ನೂ ಗೋವಾದ ಫೈವ್ ಸ್ಟಾರ್ ಹೊಟೆಲ್ ವೊಂದಕ್ಕೆ ಕಳಿಸಿತ್ತು. ಒಟ್ಟು 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾ ಸದ್ಯಕ್ಕೆ 36 ಸದಸ್ಯ ಬಲ ಹೊಂದಿದೆ. ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಮತ್ತು ಬಿಜೆಪಿ ಶಾಸಕ ಫ್ರಾನ್ಸಿಸ್ ಡಿಸೋಜಾ ನಿಧನದಿಂದ ಹಾಗೂ ಕಾಂಗ್ರೆಸ್ ನ ಇಬ್ಬರು ಶಾಸಕರಾದ ಸುಭಾಶ್ ಶಿರೋಡ್ಕರ್ ಮತ್ತು ದಯಾನಂದ್ ಸೊಪ್ಟೆ ಅವರ ರಾಜೀನಾಮೆಯಿಂದ ನಾಲ್ಕು ಸ್ಥಾನಗಳು ತೆರವಾಗಿವೆ.

Goa Chief Minister Pramod Sawant wins floor test

ಒಟ್ಟು 36 ಸದಸ್ಯ ಬಲದ ಗೋವಾ ವಿಧಾನಸಭೆಗೆ ಅಗತ್ಯವಿರುವ ಬಹುಮತ 19. ಬಿಜೆಪಿ ಪರ 20 ಶಾಸಕರು ಮತ ಚಲಾಯಿಸಿದ್ದರಿಂದ ಸಾವಂತ್ ಸರ್ಕಾರ ಬಹುಮತ ಸಾಬೀತುಪಡಿಸಿದೆ.

ಬಿಜೆಪಿಯ 11, ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ, ಗೋವಾ ಫಾರ್ವರ್ಡ್ ಪಾರ್ಟಿಯಿಂದ ತಲಾ 3, ಮತ್ತು ಇತರ ಮೂವರೊಂದಿಗೆ ಸೇರಿ 20 ಸದಸ್ಯ ಬಲವನ್ನು ಹಾಲಿ ಗೋವಾ ಸರ್ಕಾರ ಹೊಂದಿದೆ.

English summary
Goa Chief Minister Pramod Sawant wins floor test after 20 MLAs voted in his favor in the state assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X