ಗೋವಾ ಸಿಎಂ ಮನೋಹರ್ ಆರೋಗ್ಯ ಸ್ಥಿತಿ ಗಂಭೀರ
ಪಣಜಿ (ಗೋವಾ), ಮಾರ್ಚ್ 17: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಅವರ ಚಿಕಿತ್ಸೆಗಾಗಿ ತಮ್ಮ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಕಚೇರಿಯ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಮೇದೋಜ್ಜೀರಕ ಗ್ರಂಥಿ ಸಮಸ್ಯೆಯಿಂದ ಮನೋಹರ್ ಪರಿಕರ್ ಬಳಲುತ್ತಿದ್ದು, ಅದರಲ್ಲೂ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಗೋವಾದಲ್ಲಿ ಅಧಿಕಾರ ಸ್ಥಾಪಿಸಲು ಮುಂದಾದ ಕಾಂಗ್ರೆಸ್
ಕೆಲ ಸಮಯದ ಹಿಂದೆ ಅಮೆರಿಕದಲ್ಲಿ ಚಿಕಿತ್ಸೆ ಪಡೆದು, ಗೋವಾಕ್ಕೆ ಹಿಂತಿರುಗಿದ್ದರು ಮನೋಹರ್ ಪರಿಕರ್. ಮೂಗಿಗೆ ನಳಿಕೆ ಹಾಕಿಕೊಂಡೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಭಾನುವಾರ ರಾತ್ರಿ ಮುಖ್ಯಮಂತ್ರಿ ಕಚೇರಿಯ ಟ್ವಿಟ್ಟರ್ ಖಾತೆಯಿಂದ ಹೀಗೊಂದು ಟ್ವೀಟ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿಯೂ ಮನೋಹರ್ ಪರಿಕರ್ ಕಾರ್ಯ ನಿರ್ವಹಿಸಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಅವರ ಹೆಸರು ಪದೇಪದೇ ಚರ್ಚೆ ಆಗಿತ್ತು. ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮನೋಹರ್ ಪರಿಕರ್ ಅವರನ್ನು ಗೋವಾದಲ್ಲಿಯೇ ಭೇಟಿ ಮಾಡಿ, ಆರೋಗ್ಯ ವಿಚಾರಣೆ ನಡೆಸಿದ್ದರು.
Chief Minister @manoharparrikar's health condition is extremely critical. Doctors are trying their best.
— CMO Goa (@goacm) March 17, 2019
ಆ ನಂತರ ರಾಹುಲ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅದಕ್ಕೆ ಪರಿಕರ್ ತಕ್ಕ ಉತ್ತರ ನೀಡಿದ್ದರು.