ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಗ್ಯಾಂಗ್‌ ರೇಪ್‌ ಪ್ರಕರಣ: 'ಹೆಣ್ಣು ಮಕ್ಕಳನ್ನು ರಾತ್ರಿ ಹೊರಗೆ ಕಳುಹಿಸಿದ್ದೇಕೆ' ಎಂದ ಸಿಎಂ

|
Google Oneindia Kannada News

ಪಣಜಿ, ಜು.29: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕಡಲತೀರವೊಂದರಲ್ಲಿ ಇಬ್ಬರು ಅಪ್ರಾಪ್ತೆಯರ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ನೀಡಿದ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

''ಮಕ್ಕಳು ತಡರಾತ್ರಿವರೆಗೆ ಬೀಚ್‌ನಲ್ಲಿ ಏಕೆ ಇರಬೇಕು ಎಂಬುವುದನ್ನು ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳು ಪೋಷಕರು ಹೇಳಿದ್ದನ್ನು ಕೇಳುವುದಿಲ್ಲ ಎಂಬ ಕಾರಣಕ್ಕೆ ನಾವು ಎಲ್ಲಾ ಹೊಣೆಯನ್ನು ಸರ್ಕಾರ ಹಾಗೂ ಪೊಲೀಸರ ಮೇಲೆ ಹಾಕಲಾಗುವುದಿಲ್ಲ,'' ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಸದನದಲ್ಲಿ ಹೇಳಿದ್ದಾರೆ.

'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ

ಅತ್ಯಾಚಾರಿಗಳ ವಿರುದ್ದ ಮಾತನಾಡಬೇಕಾದ ಮುಖ್ಯಮಂತ್ರಿಗಳು ತಡರಾತ್ರಿಯಲ್ಲಿ ಮಕ್ಕಳನ್ನು ಹೊರಗೆ ಕಳುಹಿಸಿದ್ದೇಕೆ ಎಂದು ಪೋಷಕರೇ ಅತ್ಯಾಚಾರಕ್ಕೆ ಹೊಣೆ ಎಂಬಂತೆ ಮಾತನಾಡಿರುವುದು ವಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Goa beach gang rape: Why minors out so late at night asks CM Sawant

''ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು. ವಿಶೇಷವಾಗಿ ಅಪ್ರಾಪ್ತರನ್ನು ರಾತ್ರಿ ವೇಳೆ ಹೊರಗೆ ಕಳುಹಿಸಬಾರದು,'' ಎಂದು ಕೂಡಾ ಗೃಹ ಖಾತೆಯನ್ನೂ ಹೊಂದಿರುವ ಸಾವಂತ್ ಅವರು ಸಲಹೆ ನೀಡಿದ್ದರು.

"ನಾವು ಪೊಲೀಸರನ್ನು ದೂಷಿಸುತ್ತೇವೆ. ಆದರೆ ಪಾರ್ಟಿಗಾಗಿ ಬೀಚ್‌ಗೆ ಹೋದ 10 ಯುವಕರಲ್ಲಿ ನಾಲ್ವರು ಇಡೀ ರಾತ್ರಿ ಬೀಚ್‌ನಲ್ಲಿಯೇ ಇದ್ದರು. ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು. ಹದಿಹರೆಯದವರು, ವಿಶೇಷವಾಗಿ ಅಪ್ರಾಪ್ತ ವಯಸ್ಕರು, ಕಡಲತೀರಗಳಲ್ಲಿ ರಾತ್ರಿಗಳನ್ನು ಕಳೆಯಬಾರದು,"ಎಂದು ಹೇಳಿದರು.

ಟಿಎಂಸಿ ಬೆಂಬಲಿಗರಿಂದ ಅತ್ಯಾಚಾರ ಆರೋಪ: ಸುಪ್ರೀಂ ಮೆಟ್ಟಿಲೇರಿದ ಇಬ್ಬರು ಮಹಿಳೆಯರುಟಿಎಂಸಿ ಬೆಂಬಲಿಗರಿಂದ ಅತ್ಯಾಚಾರ ಆರೋಪ: ಸುಪ್ರೀಂ ಮೆಟ್ಟಿಲೇರಿದ ಇಬ್ಬರು ಮಹಿಳೆಯರು

ಈ ಹೇಳಿಕೆಗಳು ವಿರೋಧ ಪಕ್ಷದ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಕೆಲವರು ಸಾವಂತ್‌ ರಾಜೀನಾಮೆಗೆ ಒತ್ತಾಯಿಸಿದರು. ''ಬಿಜೆಪಿ ಆಳ್ವಿಕೆಯಲ್ಲಿ ಗೋವಾ ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗಿದೆ,'' ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಮುಖಂಡ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಟ್ವೀಟ್ ಮಾಡಿ, "ಮುಖ್ಯಮಂತ್ರಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು, ಅಂತಹ ಬುದ್ಧಿವಂತಿಕೆಗಾಗಿ," ಎಂದು ಆಗ್ರಹಿಸಿದ್ದಾರೆ.

ಗೋವಾ ಕಾಂಗ್ರೆಸ್ ವಕ್ತಾರ ಆಲ್ಟೋನ್ ಡಿ ಕೋಸ್ಟಾ ಮಾತನಾಡಿ, "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾತ್ರಿಯಲ್ಲಿ ತಿರುಗಾಡುವಾಗ ನಾವು ಯಾಕೆ ಭಯಪಡಬೇಕು? ಅಪರಾಧಿಗಳು ಜೈಲಿನಲ್ಲಿರಬೇಕು ಮತ್ತು ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ಸುತ್ತಾಡಬೇಕು," ಎಂದು ಅಭಿಪ್ರಾಯಿಸಿದ್ದಾರೆ.

ಶಿವಸೇನೆ ಮುಖಂಡ ಮತ್ತು ರಾಜ್ಯಸಭಾ ಸಂಸದ ಪ್ರಿಯಾಂಕಾ ಚತುರ್ವೇದಿ, "ಅನಾರೋಗ್ಯ ಮತ್ತು ಲಜ್ಜೆಗೆಟ್ಟು ಜವಾಬ್ದಾರಿಯನ್ನು ತ್ಯಜಿಸುವುದು," ಎಂದು ಟ್ವೀಟ್‌ ಮಾಡಿದ್ದಾರೆ. " 14 ವರ್ಷ ವಯಸ್ಸಿನವರು ಇಡೀ ರಾತ್ರಿ ಕಡಲತೀರದಲ್ಲಿದ್ದಾಗ, ಪೋಷಕರು ಆತ್ಮಾವಲೋಕನ ಮಾಡಬೇಕಾಗಿದೆ ಎಂದು ಗೋವಾ ಬೀಚ್‌ನಲ್ಲಿ ಅತ್ಯಾಚಾರ ಕುರಿತು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ. ಇದು ಗೋವಾವನ್ನು ಸುರಕ್ಷಿತವಾಗಿರಿಸುವ ಜವಾಬ್ದಾರಿಯಿಂದ ಅನಾರೋಗ್ಯ ಮತ್ತು ನಿರ್ಲಜ್ಜವಾಗಿ ಕಳಚಿಕೊಳ್ಳುವುದು," ಎಂದು ಹೇಳಿದ್ದಾರೆ.

ಮುಂದಿನ ವಾರ ಚುನಾವಣೆಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಿಸಿರುವ ಗೋವಾ ಫಾರ್ವರ್ಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ, ಮುಖ್ಯಮಂತ್ರಿಯವರ ಹೇಳಿಕೆಯನ್ನು "ಅಸಹ್ಯಕರ" ಎಂದು ಕರೆದರು. "ನಾಗರಿಕರ ಸುರಕ್ಷತೆಯು ಪೊಲೀಸ್ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅದನ್ನು ಒದಗಿಸಲು ಸಾಧ್ಯವಾಗದಿದ್ದರೆ, ಮುಖ್ಯಮಂತ್ರಿಗೆ ಈ ಹುದ್ದೆಯಲ್ಲಿ ಇರಲು ಹಕ್ಕಿಲ್ಲ," ಎಂದಿದ್ದಾರೆ.

"ಗೋವಾ ಮುಖ್ಯಮಂತ್ರಿ ತಮ್ಮ ಮಕ್ಕಳನ್ನು ರಾತ್ರಿಯಲ್ಲಿ ಹೊರಗೆ ಹೋಗಲು ಅನುಮತಿಸಿದ್ದಕ್ಕಾಗಿ ಪೋಷಕರನ್ನು ದೂಷಿಸುತ್ತಿರುವುದು ಆಘಾತಕಾರಿ. ಇದು ಸುರಕ್ಷಿತವಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ಭದ್ರತೆಯನ್ನು ರಾಜ್ಯ ಸರ್ಕಾರವು ನಮಗೆ ಖಾತ್ರಿಪಡಿಸದಿದ್ದರೆ, ಯಾರು ಮಾಡಬಹುದು? ಗೋವಾಕ್ಕೆ ಒಂದು ಮಹಿಳೆಯರಿಗೆ ಸುರಕ್ಷಿತವಾಗಿರುವ ಇತಿಹಾಸವಿದೆ. ಬಿಜೆಪಿ ಆಡಳಿತದಲ್ಲಿ ಆ ಟ್ಯಾಗ್ ಕಳೆದುಹೋಗುತ್ತಿದೆ," ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ ಟ್ವೀಟ್ ಮಾಡಿದ್ದಾರೆ.

ಒಬ್ಬ ಸರ್ಕಾರಿ ನೌಕರ ಸೇರಿ ನಾಲ್ಕು ಪುರುಷರು ಪೊಲೀಸರೆಂದು ಹೇಳಿ ಹುಡುಗರನ್ನು ಥಳಿಸಿದ ನಂತರ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಬೆನೌಲಿಮ್ ಬೀಚ್ ನಲ್ಲಿ ಈ ದಾಳಿ ನಡೆದಿದೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬುಧವಾರ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಒಬ್ಬ ಶಾಸಕರು "ಪ್ರಭಾವಿ ವ್ಯಕ್ತಿ" ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಂತ್ರಿಯೊಬ್ಬರು ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಮತ್ತೊಬ್ಬರು ಆರೋಪಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Goa chief minister Pramod Sawant asked parents to be more ''responsible'' and not allow their children to remain out till late in the night while speaking on a gangrape incident of two minor girls on a beach.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X