ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ, ಎನ್‌ಸಿಪಿ ಮೈತ್ರಿ ಘೋಷಣೆ

|
Google Oneindia Kannada News

ಪಣಜಿ, ಜನವರಿ 19: 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾ ರಾಜ್ಯದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ಭಾರತೀಯ ಜನತಾ ಪಕ್ಷ ಆಡಳಿತ ನಡೆಸುತ್ತಿದ್ದು, ಈ ಚುನಾವಣೆಯ ಮೂಲಕ ಎನ್‌ಸಿಪಿ ಮತ್ತು ಶಿವಸೇನೆ ಗೋವಾಕ್ಕೆ ಎಂಟ್ರಿ ಕೊಟ್ಟಿವೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಶಿವಸೇನೆ ಗೋವಾ ವಿಧಾನಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಬುಧವಾರ ಘೋಷಿಸಿವೆ.

ಗೋವಾದಲ್ಲಿ ಮೈತ್ರಿಗಾಗಿ ಕಾಂಗ್ರೆಸ್ ಜೊತೆಗಿನ ಮಾತುಕತೆ ಕುರಿತು ಮಾತನಾಡಿದ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, "ಎನ್‌ಸಿಪಿ ಯಾವಾಗಲೂ ಜಾತ್ಯತೀತ ಚಿಂತನೆಯ ಸಮಾನ ಮನಸ್ಕ ಪಕ್ಷಗಳನ್ನು ಬೆಂಬಲಿಸುತ್ತದೆ. ಈ ಸಿದ್ಧಾಂತವನ್ನು ಅನುಸರಿಸಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆಯೊಂದಿಗೆ ಎಂವಿಎ ಸರ್ಕಾರವನ್ನು ರಚಿಸಲಾಯಿತು, ಅದು ಸುಗಮವಾಗಿ ಸಾಗುತ್ತಿದೆ. ಗೋವಾದಲ್ಲಿಯೂ ಅದೇ ಬೇಕಿತ್ತು,'' ಎಂದರು.

Goa Assembly Elections: Shiv Sena Announces Alliance With NCP

"ಎನ್‌ಸಿಪಿ ಮತ್ತು ಶಿವಸೇನೆ ಜಂಟಿಯಾಗಿ ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಲಿವೆ. ನಾವು ಕಾಂಗ್ರೆಸ್‌ ಜೊತೆ ಜಂಟಿಯಾಗಿ ಸ್ಪರ್ಧಿಸುವ ಪ್ರಸ್ತಾಪವನ್ನು ಮಾಡಿದ್ದೆವು. ಆದರೆ ವ್ಯರ್ಥವಾಯಿತು. ಅವರು ಹೌದು ಅಥವಾ ಇಲ್ಲ ಎಂದು ಹೇಳಲಿಲ್ಲ. ಗೋವಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಬಹುದು ಎಂದು ಕಾಂಗ್ರೆಸ್ ಭಾವಿಸಿದೆ. ಕಾಂಗ್ರೆಸ್ ಎನ್‌ಸಿಪಿಗೆ ಸಾಕಷ್ಟು ಗೌರವವನ್ನು ನೀಡಲಿಲ್ಲ ಎಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದರು.

"ಸಂಜಯ್ ರಾವುತ್ ಮತ್ತು ಸಿಎಂ ಉದ್ಧವ್ ಠಾಕ್ರೆ ಕೂಡ ಕಾಂಗ್ರೆಸ್‌ನೊಂದಿಗೆ ವ್ಯರ್ಥವಾಗಿ ಮಾತನಾಡಿದ್ದಾರೆ. ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು ಎಂದು ನಾವು ಭಾವಿಸಿದ್ದೇವೆ, ಎಂದು ಪಟೇಲ್ ತಿಳಿಸಿದರು.

ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಪ್ರಕಾರ, ಎನ್‌ಸಿಪಿ-ಶಿವಸೇನೆ ಮೈತ್ರಿಯು ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದು ಕಿಂಗ್ ಮೇಕರ್ ಆಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಿವಸೇನೆ ಸಂಸದ ಸಂಜಯ್ ರಾವುತ್ ಸಹ ಈ ಮೈತ್ರಿಯನ್ನು ಖಚಿತಪಡಿಸಿದ್ದಾರೆ.

"ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸಬಹುದು ಎಂದು ಭಾವಿಸಿದರೆ, ನಾನು ಅವರಿಗೆ ಶುಭ ಹಾರೈಸುತ್ತೇನೆ. ನಾವು ಯಾವುದೇ ಸ್ಥಾನಗಳಲ್ಲಿ ಸ್ಪರ್ಧಿಸಿದರೂ, ಅವುಗಳಲ್ಲಿ ಹಲವು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಮತ್ತು ನಮ್ಮ ಬೆಂಬಲವಿಲ್ಲದೆ ಸರ್ಕಾರ ರಚನೆಯಾಗದಂತೆ ನೋಡಿಕೊಳ್ಳುತ್ತೇವೆ,'' ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ವಿಶ್ವಾಸ ವ್ಯಕ್ತಪಡಿಸಿದರು.

ಗೋವಾ ಚುನಾವಣೆಯ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ ಮತ್ತು ನಂತರ ಇತರ ಪಟ್ಟಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ಗೋವಾದ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ರಾವುತ್, "ಗೋವಾದ ಪರಿಸ್ಥಿತಿ 'ಆಯಾ ರಾಮ್ ಗಯಾ ರಾಮ್' ಎಂಬಂತಿದೆ. ಹರ್ಯಾಣಕ್ಕೆ ರಚಿಸಲಾದ ಈ ಪದವು ಈಗ ಗೋವಾವನ್ನು ಸಂಕೇತಿಸುತ್ತದೆ. ಯಾರು ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ,'' ಎಂದು ಹೇಳಿದರು.

ಫೆಬ್ರವರಿ 14ರಂದು ಮತದಾನ
40 ಸದಸ್ಯ ಬಲದ ಗೋವಾ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜನವರಿ 21ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಮಾಡಲು ಜನವರಿ 28 ಕೊನೆಯ ದಿನವಾಗಿದೆ. ಜನವರಿ 31 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಗೊಳ್ಳಲಿದೆ.

English summary
The Nationalist Congress Party (NCP) and Shiv Sena on Wednesday announced their alliance for the Goa assembly elections together.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X