ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಹಲವು ಪದಾಧಿಕಾರಿಗಳನ್ನು ನೇಮಿಸಿದ ಕಾಂಗ್ರೆಸ್

|
Google Oneindia Kannada News

ಪಣಜಿ, ಡಿಸೆಂಬರ್ 05; ಮುಂಬರುವ ಗೋವಾ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಟು ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಹಲವಾರು ಬದಲಾವಣೆ ಮಾಡಿದೆ. 2022ರ ಫೆಬ್ರವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಹಿರಿಯ ಉಪಾಧ್ಯಕ್ಷ, 10 ಉಪಾಧ್ಯಕ್ಷರು ಮತ್ತು 19 ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಎಂ. ಕೆ. ಶೈಖ್ ನೂತನ ಹಿರಿಯ ಉಪಾಧ್ಯರಾಗಿದ್ದಾರೆ. ಮೂವರು ವಕ್ತಾರರನ್ನು ಸಹ ನೇಮಿಸಲಾಗಿದೆ.

ಗೋವಾ ಚುನಾವಣೆ; ಪ್ರತಿ ಬೂತ್‌ನಲ್ಲಿ 500 ಮತ ಬಿಜೆಪಿ ಗುರಿ! ಗೋವಾ ಚುನಾವಣೆ; ಪ್ರತಿ ಬೂತ್‌ನಲ್ಲಿ 500 ಮತ ಬಿಜೆಪಿ ಗುರಿ!

ರಾಜ್ಯದ ಕಾಂಗ್ರೆಸ್ ಘಟಕವನ್ನು ಅಧ್ಯಕ್ಷ ಗಿರೀಶ್ ಚೋಡಾನಕರ್ ಅವರೇ ಮುನ್ನಡೆಸಲಿದ್ದಾರೆ. ಉಳಿದಂತೆ 34 ಕಾರ್ಯದರ್ಶಿಗಳು, 21 ಕಾರ್ಯಕಾರಿ ಸಮಿತಿ ಸದಸ್ಯರು, 19 ವಿಶೇಷ ಆಹ್ವಾನಿತರನ್ನು ನೇಮಕ ಮಾಡಲಾಗಿದೆ.

ಗೋವಾ ಚುನಾವಣೆ; ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?ಗೋವಾ ಚುನಾವಣೆ; ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?

Goa Assembly Elections Congress Appointed Office Bearers

ಸ್ಕ್ರೀನಿಂಗ್ ಕಮಿಟಿ; ಗೋವಾ ವಿಧಾನಸಭೆಗೆ ಈಗಾಗಲೇ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ನೇಮಕ ಮಾಡಿದೆ. ರಜನಿ ಪಾಟೀಲ್ ಕಮಿಟಿ ಅಧ್ಯಕ್ಷರಾಗಿದ್ದು, ಹೈಬಿ ಈಡನ್ ಮತ್ತು ಧ್ರುವ ನಾರಾಯಣ್ ಸದಸ್ಯರಾಗಿದ್ದಾರೆ.

 ಗೋವಾ ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಎಎಪಿ ಸೇರ್ಪಡೆ ಗೋವಾ ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಎಎಪಿ ಸೇರ್ಪಡೆ

ಪದನಿಮಿತ್ತ ಸದಸ್ಯರಾಗಿ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್, ಪಿಸಿಸಿ ಅಧ್ಯಕ್ಷ ಗಿರೀಶ್ ಚೋಡಂಕರ್ ಮತ್ತು ಪ್ರತಿಪಕ್ಷ ನಾಯಕ ದಿಗಂಬರ್ ಕಾಮತ್ ಇದ್ದಾರೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಕ್ರೀನಿಂಗ್ ಕಮಿಟಿ ಪ್ರಮುಖ ಪಾತ್ರವಹಿಸುತ್ತದೆ.

ಪ್ರಚಾರ ಆರಂಭ; ಗೋವಾ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳು ತಯಾರಿ ಆರಂಭಿಸಿವೆ. ಚುನಾವಣೆ ದಿನಾಂಕ ಘೋಷಣೆಯಾಗಿಲ್ಲ ಆದರೆ ಚುನಾವಣಾ ಪ್ರಚಾರ ಕಾರ್ಯ ಆರಂಭವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ರಾಜ್ಯದಲ್ಲಿ ಸಂಚಾರ ನಡೆಸಿ ಪ್ರಚಾರ ಆರಂಭಿಸಿದ್ದಾರೆ.

ಬಿರುಸಿನಿಂದ ಪ್ರಚಾರವನ್ನು ಆರಂಭಿಸುವಂತೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನ ಹಿತೈಷಿಗಳು, ಬೆಂಬಲಿಗರ ಜೊತೆ ಸಭೆಗಳನ್ನು ಮಾಡುವಂತೆ ನಿರ್ದೇಶನಗಳನ್ನು ನೀಡಲಾಗಿದೆ.

2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸದಸ್ಯ ಬಲದ ವಿಧಾನಸಭೆಯಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಬಿಜೆಪಿ 13 ಸ್ಥಾನದಲ್ಲಿ ಮಾತ್ರ ಗೆದ್ದಿತ್ತು. ಆದರೆ ಮೈತ್ರಿ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆ ಮಾಡಿತ್ತು.

ಈ ಬಾರಿ ನಡೆಯುವ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ, ಕಾಂಗ್ರೆಸ್‌, ಗೋವಾದ ಸ್ಥಳೀಯ ಪಕ್ಷಗಳ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಮಾಡಿರುವ ಟಿಎಂಸಿ ಗೋವಾದಲ್ಲಿ 40 ಸ್ಥಾನಗಳಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿದೆ. ಎಎಪಿ ಸಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಅರವಿಂದ ಕೇಜ್ರಿವಾಲ್ ಭೇಟಿ; ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಶನಿವಾರ ಗೋವಾಕ್ಕೆ ಭೇಟಿ ನೀಡಿದ್ದರು. "ದೈವಿಕ ಶಕ್ತಿಗಳು ಒಂದಾಗುತ್ತಿವೆ. ಹೀಗಾಗಿ ಈ ಬಾರಿ ಏನೋ ಆಗಲಿದೆ" ಎಂದು ವಿಧಾನಸಭೆ ಚುನಾವಣೆ ಕುರಿತು ಅವರು ಮಾತನಾಡಿದರು.

ಗೋವಾ ಚುನಾವಣೆಯಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲಿದೆ. ಪಕ್ಷದ ಪ್ರಮುಖರಾದ ವಿಜಯ್ ಸರ್ದೇಸಾಯಿ ಈ ಕುರಿತು ಘೋಷಣೆ ಮಾಡಿದ್ದಾರೆ. ಅದಕ್ಕೂ ಮೊದಲು ಅವರು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದರು.

"ನನ್ನ ಸಹೋದ್ಯೋಗಿಗಳಾದ ಪ್ರಸಾದ್ ಗಾಂವ್ಕರ್ ಮತ್ತು ವಿನೋದ್ ಪಾಲ್ಯೇಕರ್ ಅವರ ಜೊತೆ ರಾಹುಲ್ ಗಾಂಧಿ ಭೇಟಿ ಮಾಡಿದೆ. ಬಿಜೆಪಿಯ ಸಂಪೂರ್ಣ ಭ್ರಷ್ಟ, ಅಸಮರ್ಥ, ಪ್ರಜಾಸತ್ಮಕವಲ್ಲದ ಆಡಳಿತಕೊನೆಗೊಳಿಸಲು ಪೂರ್ಣ ಹೃದಯದಿಂದ ಹೋರಾಡಲು ನಾವು ಒಪ್ಪಿಕೊಂಡಿದ್ದೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಗೋವಾ ಫಾರ್ವರ್ಡ್ ಪಾರ್ಟಿ ಕಳೆದ ತಿಂಗಳು ಟಿಎಂಸಿ ಜೊತೆ ಮೈತ್ರಿಗೆ ಮುಂದಾಗಿತ್ತು. ವಿಜಯ್ ಸರ್ದೇಸಾಯಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾಗಿದ್ದರು. ಆದರೆ ಈಗ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರ ಇನ್ನೂ ಅಂತಿಮಗೊಂಡಿಲ್ಲ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
Ahead of the Goa assembly elections Congress appointed office bearers at various levels. Senior vice president also appointed for state unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X