ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾತ್ರೋ ರಾತ್ರಿ ಗೋವಾ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ

|
Google Oneindia Kannada News

ಪಣಜಿ, ಮಾರ್ಚ್ 27: ಗೋವಾ ರಾಜಕೀಯದಲ್ಲಿ ರಾತ್ರೋ ರಾತ್ರಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ(ಎಂಜಿಪಿ)ವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಂಜಿಪಿಯ ಮನೋಹರ್ ಅಜಗಾಂವ್ಕರ್ ಮತ್ತು ದೀಪಕ್ ಪಾವಸ್ಕರ್ ಅವರು ಗೋವಾ ವಿಧಾನಸಭೆ ಸ್ಪೀಕರ್ ಮೈಕಲ್ ಲೊಬೊ ಅವರಿಗೆ ತಡರಾತ್ರಿ 1:45 ರ ಸುಮಾರಿಗೆ ಪತ್ರವೊಂದನ್ನು ನೀಡಿ, ಬಿಜೆಪಿಯೊಂದಿಗೆ ಎಂಜಿಪಿಯನ್ನು ವಿಲೀನಗೊಳಿಸುವಂತೆ ಮನವಿ ಮಾಡಿದ್ದರು.

ಗೋವಾದಲ್ಲಿ ಇಂದು ವಿಶ್ವಾಸಮತ ಯಾಚನೆ, 5-ಸ್ಟಾರ್ ಹೊಟೆಲ್ ನಲ್ಲಿ ಶಾಸಕರು!ಗೋವಾದಲ್ಲಿ ಇಂದು ವಿಶ್ವಾಸಮತ ಯಾಚನೆ, 5-ಸ್ಟಾರ್ ಹೊಟೆಲ್ ನಲ್ಲಿ ಶಾಸಕರು!

ಸ್ಪೀಕರ್ ಅವರು ಅದಕ್ಕೆ ಸಮ್ಮತಿ ಸೂಚಿಸಿದ್ದು, ಇದೀಗ ಅದಕ್ಕೆ ಬಿಜೆಪಿ ಬಲ 14(36) ಕ್ಕೇರಿದೆ. ಇದರೊಟ್ಟಿಗೆ ನಡೆದ ಸದ್ಯದ ಬೆಳವಣಿಗೆ ಎಂದರೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಉಪಮುಖ್ಯಮಂತ್ರಿ ಸ್ಥಾನದಿಂದ ಸುದಿನ್ ದವಾಲಿಕರ್ ಅವರನ್ನು ಕೆಳಗಿಳಿಸಿದ್ದಾರೆ.

Goa: 2 MGP MLAs join BJP, now partys strength is 14

ಎಂಜಿಪಿಯ ಮೂವರು ಶಾಸಕರಲ್ಲಿ ಇಬ್ಬರು ಪತ್ರಕ್ಕೆ ಸಹಿ ಮಾಡಿದ್ದರೆ, ಹಾಲಿ ಉಪಮುಖ್ಯಮಂತ್ರಿ ಸುದಿನ್ ದವಾಲಿಕರ್ ಅವರು ಮಾತ್ರ ಪತ್ರಕ್ಕೆ ಸಹಿಮಾಡಲೊಲ್ಲೆ ಎಂದ್ದಾರೆ.

ಬಹುಮತ ಸಾಬೀತು ಪಡಿಸುವ ವೇಳೆ ಗೋವಾ ಮುಖ್ಯಮಂತ್ರಿ ಕಣ್ಣೀರಿಟ್ಟಿದ್ದೇಕೆ?ಬಹುಮತ ಸಾಬೀತು ಪಡಿಸುವ ವೇಳೆ ಗೋವಾ ಮುಖ್ಯಮಂತ್ರಿ ಕಣ್ಣೀರಿಟ್ಟಿದ್ದೇಕೆ?

ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಅವರು ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ನಿಧನರಾದ ನಂತರ ಅವರ ಅಂತ್ಯಕ್ರಿಯೆಯ ದಿನ ರಾತ್ರಿಯೇ ಬಿಜೆಪಿ ವಿಧಾನಸಭೆ ಸ್ಪೀಕರ್ ಆಗಿದ್ದ ಡಾ.ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿತ್ತು.

English summary
Two of the three MGP MLAs in Goa early Wednesday merged their party's legislative wing with the BJP, which now has 14 legislators in the 36-member state assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X