• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋ ಗೋ ಗೋವಾ..ಕೊಂಕಣ್ ರೈಲ್ವೆ, ವಿಮಾನ ಸಂಚಾರ ಶುರು

|

ಪಣಜಿ, ಮೇ 31: ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ಡೌನ್ ವಿಧಿಸುತ್ತಿದ್ದ ದಿನಗಳು ದೂರಾಗಿದ್ದು, ಈಗ ಅನ್ ಲಾಕ್ ಸರದಿ ಶುರುವಾಗಿದೆ. ಆನ್ ಲಾಕ್ 1.0 ಜಾರಿಗೆ ತರಲು ಹಲವು ರಾಜ್ಯಗಳಂತೆ ಗೋವಾ ಕೂಡಾ ಸಜ್ಜಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಗೋವಾ ಜೂನ್ ತಿಂಗಳಿನಲ್ಲಿ ಪ್ರವಾಸಿಗರಿಗೆ ಬಾಗಿಲು ತೆರೆಯುತ್ತಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಜೂನ್ 1 ರಿಂದ ಪ್ರವಾಸಿಗರು ರೈಲು, ವಿಮಾನಗಳ ಮೂಲಕ ಗೋವಾಕ್ಕೆ ಆಗಮಿಸಬಹುದಾಗಿದೆ. ದೆಹಲಿ ಹಾಗೂ ಮುಂಬೈನಿಂದ ಕೊಂಕಣ್ ರೈಲ್ವೆ ಗೋವಾದ ಮಡಗಾಂವ್ ಸ್ಟೇಷನ್ ತಲುಪಲಿದೆ ಎಂದು ಕೊಂಕಣ್ ರೈಲ್ವೆ ವಕ್ತಾರ ಬಾಬಬ್ ಘಾಟ್ಗೆ ಹೇಳಿದ್ದಾರೆ.

ಗೋವಾ ಬೀಚಿನಲ್ಲಿ ಮದ್ಯ ಸೇವನೆಗೆ ನಿಷೇಧ, ಪ್ರವಾಸಿಗರಿಂದ ಸ್ವಾಗತ!

ಜೊತೆಗೆ ಜೂನ್ 1ರಿಂದ ದೆಹಲಿ-ವಾಸ್ಕೋ ಗೋವಾ ಎಕ್ಸ್ ಪ್ರೆಸ್, ಮಂಗಲ್ ಎಕ್ಸ್ ಪ್ರೆಸ್ (ನವದೆಹಲಿ ಯಿಂದ ಎರ್ನಾಕುಲಂ), ನೇತ್ರಾವತಿ ಎಕ್ಸ್ ಪ್ರೆಸ್ (ಎಲ್ ಟಿಟಿ ಮುಂಬೈನಿಂದ ತಿರುವನಂತಪುರಂ, ದುರಂತೋ ಎಕ್ಸ್ ಪ್ರೆಸ್ (ನಿಜಾಮುದ್ದೀನ್ ನಿಂದ ಎರ್ನಾಕುಲಂ) ಕೂಡಾ ಸಂಚರಿಸಲಿದೆ.

ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರವಾಸಿಗರನ್ನು ಸರ್ವರೀತಿಯಿಂದ ಪರೀಕ್ಷಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ. ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ(ಐಸಿಎಂಆರ್ ಪ್ರಮಾಣಿಕೃತ ಲ್ಯಾಬಿನಿಂದ) ಹೊಂದಿರಬೇಕು.

ದೇಶಾದ್ಯಂತ ಇನ್ನೂ 15 ದಿನಗಳು ಲಾಕ್‌ಡೌನ್‌: ಗೋವಾ ಸಿಎಂ

ದುಬೈನಿಂದ ಗೋವಾಕ್ಕೆ ವಿಮಾನ, ಶ್ರೀಲಂಕಾದಿಂದ ವಿಮಾನ ಸೋಮವಾರದಂದು ಪಣಜಿ ತಲುಪಲಿದೆ. ಕೊಲಂಬೋದಲ್ಲಿದ್ದ ಗೋವಾ ಮೂಲದವರು ಮೂರು ಬಾರಿ ತವರಿಗೆ ಮರಳಲು ಯತ್ನಿಸಿ ವಿಫಲರಾಗಿದ್ದರು. ಈಗ ಪ ಸರಿ ಸುಮಾರು 800 ಕ್ಕೂ ಅಧಿಕ ಗೋವನ್ಸ್ ಹಡಗಿನ ಮೂಲಕ ಗೋವಾ ತಲುಪುತ್ತಿದ್ದಾರೆ ಎಂದು ಗೋವಾ ಸೀಮನ್ ಸಂಘದ ಅಧ್ಯಕ್ಷ ಡಿಕ್ಸನ್ ವಾಜ್ ಹೇಳಿದ್ದಾರೆ.

English summary
Trains and flights are expecte to arrive in Goa in large numbers from June 1 as the fift phase of the coronavirus-induced lockdown brings with it greater rolling back of restrictions, officials said o Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X