ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಚುನಾವಣೆ; ಕಣದಲ್ಲಿ ಐವರು ದಂಪತಿಗಳು!

|
Google Oneindia Kannada News

ಪಣಜಿ, ಜನವರಿ 27; ಗೋವಾ ವಿಧಾನಸಭೆ ಚುನಾವಣೆ ಫೆಬ್ರವರಿ 14ರಂದು ನಡೆಯಲಿದೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಜನವರಿ 28 ಕೊನೆಯ ದಿನವಾಗಿದೆ. ಚುನಾವಣಾ ಕಣದಲ್ಲಿ 5 ದಂಪತಿಗಳು ಕಣದಲ್ಲಿದ್ದು, ಯಾರು ಗೆಲುವು ಸಾಧಿಸುತ್ತಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಆಡಳಿತ ಪಕ್ಷ ಬಿಜೆಪಿ ಇಬ್ಬರು ದಂಪತಿಗಳಿಗೆ ಟಿಕೆಟ್ ನೀಡಿದೆ. ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಪತ್ನಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಮತ್ತು ಟಿಎಂಸಿ ತಲಾ ಒಬ್ಬರು ದಂಪತಿಗಳಿಗೆ ಟಿಕೆಟ್ ಕೊಟ್ಟಿದೆ.

ಗೋವಾ; ಕಲಂಗುಟ್ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಗೋವಾ; ಕಲಂಗುಟ್ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು?

ಬಿಜೆಪಿ ನಾಯಕ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ವಾಲ್ಪೊಯ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರ ಪತ್ನಿ ದೇವಿಯ ಪೊರಿಯಮ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಅಚ್ಚರಿಯ ವಿಷಯ ಎಂದರೆ ಕ್ಷೇತ್ರದ ಹಾಲಿ ಶಾಸಕರು ಆಕೆಯ ಮಾವ ಪ್ರತಾಪ್‌ ಸಿಂಹ ರಾಣೆ. ಈ ಬಾರಿಯ ಚುನಾವಣೆಗೂ ಅವರು ಕಾಂಗ್ರೆಸ್ ಅಭ್ಯರ್ಥಿ.

ಗೋವಾ; ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ ಮಾಜಿ ಸಚಿವ ಗೋವಾ; ಕಾಂಗ್ರೆಸ್ ತೊರೆದು ಎನ್‌ಸಿಪಿ ಸೇರಿದ ಮಾಜಿ ಸಚಿವ

Five Couples Will Contesting In Goa Assembly Elections

ಇನ್ನು ಗೋವಾದ ರಾಜಧಾನಿ ಪಣಜಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅಟನಸಿಯೋ ಮೊನ್ನೆರ್ರೇಟ್. ಅವರ ಪತ್ನಿ ಜೆನಿಫರ್‌ಗೆ ತಲೈಗಾವ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಕ್ಕಿದೆ. ಪಣಜಿಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಗೋವಾ: ಟಿಎಂಸಿ ಸೇಡಿನ ರಾಜಕೀಯ, ಕಾಂಗ್ರೆಸ್, ಜಿಎಫ್‌ಪಿ ಟಾರ್ಗೆಟ್! ಗೋವಾ: ಟಿಎಂಸಿ ಸೇಡಿನ ರಾಜಕೀಯ, ಕಾಂಗ್ರೆಸ್, ಜಿಎಫ್‌ಪಿ ಟಾರ್ಗೆಟ್!

2019ರಲ್ಲಿ ಮನೋಹರ್ ಪರಿಕ್ಕರ್ ನಿಧನದ ಬಳಿಕ ನಡೆದ ಪಣಜಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಟನಸಿಯೋ ಮೊನ್ನೆರ್ರೇಟ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಬಳಿಕ ಅವರು ಬಿಜೆಪಿ ಸೇರಿದ್ದಾರೆ. ಆದರೆ ಜೆನಿಫರ್‌ಗೆ ತಲೈಗಾವ್ ಕ್ಷೇತ್ರದಲ್ಲಿ 2017ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದಿದ್ದರು.

2019ರಲ್ಲಿ ದಂಪತಿಗಳಿಬ್ಬರು ಇತರ ಎಂಟು ಕಾಂಗ್ರೆಸ್ ಶಾಸಕರ ಜೊತೆ ಬಿಜೆಪಿ ಸೇರಿದ್ದರು. ಬಿಜೆಪಿ ಪಣಜಿಯಲ್ಲಿ ಹಾಲಿ ಶಾಸಕರಾದ ಅಟನಸಿಯೋ ಮೊನ್ನೆರ್ರೇಟ್‌ಗೆ ಟಿಕೆಟ್ ನೀಡಿದೆ. ಇದರಿಂದಾಗಿ ಉತ್ಪಲ್ ಪರಿಕ್ಕರ್‌ಗೆ ಟಿಕೆಟ್ ಕೈ ತಪ್ಪಿತು. ಅವರು ಬಿಜೆಪಿ ಬಿಟ್ಟು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.

ಗೋವಾದ ಉಪ ಮುಖ್ಯಮಂತ್ರಿ ಚಂದ್ರಕಾಂತ್‌ ಕವಳೇಕರ್ ಮತ್ತು ಅವರ ಪತ್ನಿ ಸಾವಿತ್ರಿ ಕವಳೇಕರ್ ಸಹ ಚುನಾವಣಾ ಕಣದಲ್ಲಿರುವ ದಂಪತಿಗಳು. ಚಂದ್ರಕಾಂತ್ ಕವಳೇಕರ್ ಕ್ಯೂಪೆಮ್ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಆದರೆ ಸಾವಿತ್ರಿ ಕವಳೇಕರ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಯಿತು.

ಸಾಂಗ್ಯೂಮ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬಳಿಕ ಗೋವಾ ಮಹಿಳಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಾವಿತ್ರಿ ಕವಳೇಕರ್ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2017ರ ಚುನಾವಣೆಯಲ್ಲಿಯೂ ಪತಿ ಪತ್ನಿ ಚುನಾವಣಾ ಕಣಕ್ಕಿಳಿದಿದ್ದರು. ಚಂದ್ರಕಾಂತ್ ಕವಳೇಕರ್ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಗೆದ್ದಿದ್ದರು ಬಳಿಕ ಬಿಜೆಪಿ ಸೇರಿದ್ದರು. ಸಾವಿತ್ರಿ ಕವಳೇಕರ್ ಸೋಲು ಕಂಡಿದ್ದರು.

ಇನ್ನು ಕಾಂಗ್ರೆಸ್ ಪಕ್ಷದಿಂದ ಮಿಚೆಲ್ ಲೋಬೊ ಕಲಂಗುಟ್‌ನಿಂದ ಅಭ್ಯರ್ಥಿ. ಅವರ ಪತ್ನಿ ಡೆಲಿಲಾ ಸಿಯೋಲಿಮ್ ಕ್ಷೇತ್ರದಿಂದ ಈ ಬಾರಿಯ ಚುನಾವಣಾ ಕಣಕ್ಕಿಳಿದಿದ್ದಾರೆ. ಪ್ರಮೋದ್ ಸಾವಂತ್ ಸಂಪುಟದಲ್ಲಿ ಸಚಿವರಾಗಿದ್ದ ಮಿಚೆಲ್ ಲೋಬೊ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ.

ಇನ್ನು ಗೋವಾ ಚುನಾವಣೆಗೆ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಟಿಎಂಸಿ ಅಲ್ಡೋನಾ ಕ್ಷೇತ್ರದಿಂದ ಕಿರಣ್ ಕಂಡೋಲ್ಕರ್‌ಗೆ ಟಿಕೆಟ್ ನೀಡಿದೆ. ಅವರ ಪತ್ನಿ ಕವಿತಾ ಟಿವಿಮ್ ಕ್ಷೇತ್ರದಿಂದ ಚುನಾವಣೆಗೆ ಎದುರಿಸುತ್ತಿದ್ದಾರೆ.

ಫೆಬ್ರವರಿ 14ರಂದು ಚುನಾವಣೆ ನಡೆದರೂ ಫಲಿತಾಂಶ ಪ್ರಕಟವಾಗುವುದು ಮಾರ್ಚ್ 10ರಂದು. ಅಲ್ಲಿಯ ತನಕ ಯಾವ ದಂಪತಿಗಳು ಗೆಲುವು ಸಾಧಿಸಲಿದ್ದಾರೆ? ಎಂಬ ಲೆಕ್ಕಾಚಾರ ನಡೆಯಲಿದೆ.

English summary
Five couples will be testing their electoral luck in February Goa assembly elections. Result will be announced on March 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X