• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಟ್ಟುಹಬ್ಬದ ದಿನ ನಗ್ನವಾಗಿ ಓಡಿದ್ದ ನಟ ಮಿಲಿಂದ್ ಸೋಮನ್ ವಿರುದ್ಧ FIR

|

ಪಣಜಿ, ನವೆಂಬರ್ 07: ಹುಟ್ಟುಹಬ್ಬದ ದಿನ ಗೋವಾ ಬೀಚ್‌ನಲ್ಲಿ ನಗ್ನವಾಗಿ ಓಡಿದ್ದ ನಟ, ಮಾಡೆಲ್ ಮಿಲಿಂದ್ ಸೋಮನ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗೋವಾದ ಬೀಚ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಶೂಟಿಂಗ್ ಮಾಡಿದ ನಟಿ ಪೂನಂ ಪಾಂಡೆಬಂಧನ ಪ್ರಕರಣ ಟ್ವಿಟ್ಟರ್‌ನಲ್ಲಿ ಹೊಸದೊಂದು ಚರ್ಚೆಗೆ ಕಾರಣವಾಗಿದೆ.

ಗೋವಾ ಬೀಚ್‌ನಲ್ಲಿ ಅಶ್ಲೀಲ ಚಿತ್ರೀಕರಣ: ನಟಿ ಪೂನಂ ಪಾಂಡೆ ಬಂಧನ

ಪುರುಷರಿಗೊಂದು, ಮಹಿಳೆಯರಿಗೊಂದು ನ್ಯಾಯ ಏಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.ಇದಕ್ಕೆಲ್ಲಾ ಕಾರಣವಾಗಿರುವುದು ಮಾಡೆಲ್ ಮಿಲಿಂದ್ ಸೋಮನ್ ಹುಟ್ಟುಹಬ್ಬದಂದು ಗೋವಾ ಬೀಚ್‌ನಲ್ಲಿ ಪೂರ್ಣ ನಗ್ನರಾಗಿ ಓಡಿದ್ದು, ಅರೆನಗ್ನ ಸ್ಥಿತಿಯಲ್ಲಿದ್ದ ಪೂನಂರನ್ನು ಪೊಲೀಸರು ಬಂಧಿಸಿದ್ದಾರೆ.

ಆದರೆ ಪೂರ್ಣ ನಗ್ನರಾಗಿ ಗೋವಾ ಬೀಚ್‌ನಲ್ಲಿ ಓಡಿದ ಅದರ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡ ಮಿಲಿಂದ್ ಬಗ್ಗೆ ಹೊಗಳಿಕೆ ಕೇಳಿಬಂದಿದೆ.ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಿಲಿಂದ್ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾನಕೋಣದಲ್ಲಿ ಕಿಡಿ ಹಚ್ಚಿಸಿತು ಪೂನಂ ಪಾಂಡೆ ಅರೆಬೆತ್ತಲೆ ವಿಡಿಯೋ ಚಿತ್ರೀಕರಣ

ಮಿಲಿಂದ್ ಸೋಮನ್ ಕ್ಯಾಮರಾ ಮುಂದೆ ನಗ್ನರಾಗಿರುವುದು ಇದೇ ಮೊದಲೇನು ಅಲ್ಲ.

1990 ರಲ್ಲಿ ಮಿಲಿಂದ್ ಸೋಮನ್ ಜಾಹಿರಾತಿಗೋಸ್ಕರ ಮಾಜಿ ಮಿಸ್ ಇಂಡಿಯಾ ಮಧು ಸಾಪ್ರೆ ಜೊತೆ ನಗ್ನರಾಗಿ ಪೋಸ್ ಕೊಟ್ಟಿದ್ದರು.

ಫೋರ್ ಮೋರ್ ಶಾಟ್ಸ್ ಪ್ಲೀಸ್ ಎಂಬ ವೆಬ್ ಸೀರೀಸ್ ನಲ್ಲಿ ಮಿಲಿಂದ್ ಸೋಮನ್ ನಟಿಸಿದ್ದರು.

English summary
Actor and model Milind Soman was booked by Goa Police on Friday for obscenity and publishing and transmitting obscene material in electronic form.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X