ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಯನ: ತಮ್ಮ ಆರೋಗ್ಯಕ್ಕಿಂತ ಪ್ರೀತಿಪಾತ್ರರ ಆರೋಗ್ಯದ ಮೇಲೆ ಜನರು ಚಿಂತಾಕ್ರಾಂತ!

|
Google Oneindia Kannada News

ಪಣಜಿ, ಮೇ 11: ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಹೆಚ್ಚಿನ ಜನರು ತಮ್ಮ ಆರೋಗ್ಯಕ್ಕಿಂತ, ತಮ್ಮ ಸಂಬಂಧಿ ಮತ್ತು ಆತ್ಮೀಯರ ಆರೋಗ್ಯದ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂಬ ಅಂಶ ಗೋವಾದ ಲೀಡಿಂಗ್ ಬಿಸಿನೆಸ್ ಸ್ಕೂಲ್ ಕೈಗೊಂಡ ಅಧ್ಯಯನದಲ್ಲಿ ತಿಳಿದುಬಂದಿದೆ.

Recommended Video

ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

ದೇಹದಲ್ಲಿ ಏನಾದರೂ ಕೊಂಚ ಬದಲಾವಣೆಯಾದರೂ, ಜನರು ಹೆಚ್ಚು ಜಾಗರೂಕತೆ ವಹಿಸುತ್ತಿದ್ದಾರೆ. ಸ್ವಲ್ಪ ಕೆಮ್ಮು ಮತ್ತು ಶೀತ ಕಾಣಿಸಿಕೊಂಡರೂ, ಜನರ 'ಕೊರೊನಾ' ಅಂತ ಬೆಚ್ಚಿಬೀಳುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.

ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು! ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು!

ಕೊರೊನಾ ವೈರಸ್ ನಿಂದ ಜನರಲ್ಲಿ ಉಂಟಾಗಿರುವ ಆತಂಕ ಮತ್ತು ನಡವಳಿಕೆ ಹಾಗೂ ಮಾನಸಿಕ ಪರಿಣಾಮಗಳ ಮೇಲೆ ಗೋವಾದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನ ಡಾ.ದಿವ್ಯಾ ಸಿಂಘಾಲ್ ಮತ್ತು ಪ್ರೊಫೆಸರ್ ಪದ್ಮನಾಭನ್ ವಿಜಯರಾಘವನ್ ಅಧ್ಯಯನ ಕೈಗೊಂಡಿದ್ದರು.

ಪ್ರೀತಿಪ್ರಾತರ ಆರೋಗ್ಯದ ಮೇಲೆ ಕಾಳಜಿ

ಪ್ರೀತಿಪ್ರಾತರ ಆರೋಗ್ಯದ ಮೇಲೆ ಕಾಳಜಿ

''ದೇಶದ ವಿವಿಧ ಭಾಗಗಳ ಒಟ್ಟು 231 ಜನ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ 82.25% ರಷ್ಟು ಮಂದಿ ತಮ್ಮ ಆರೋಗ್ಯಕ್ಕಿಂತ, ತಮ್ಮ ಆತ್ಮೀಯರ ಮತ್ತು ಪ್ರೀತಿಪಾತ್ರರ ಆರೋಗ್ಯದ ಬಗ್ಗೆಯೇ ಚಿಂತಾಕ್ರಾಂತರಾಗಿದ್ದಾರೆ. ಬಹುತೇಕರು ಕೋವಿಡ್-19 ರೋಗ ಲಕ್ಷಣ ಎಂದು ಶೀತ, ಕೆಮ್ಮು ಕಾಣಿಸಿಕೊಂಡರೂ ಜಾಗೃತರಾಗುತ್ತಿದ್ದಾರೆ'' ಎಂದು ಡಾ.ದಿವ್ಯಾ ಸಿಂಘಾಲ್ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬಿಜಿ

ಸೋಷಿಯಲ್ ಮೀಡಿಯಾದಲ್ಲಿ ಬಿಜಿ

''50% ಕ್ಕಿಂತ ಹೆಚ್ಚು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಆನ್ ಲೈನ್ ನಲ್ಲಿ ಸಿನಿಮಾಗಳನ್ನು ನೋಡುವುದರಲ್ಲಿ ಬಿಜಿಯಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ಸ್ನೇಹಿತರು ಮತ್ತು ಸಂಬಂಧಿಕರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ'' ಎಂಬ ಅಂಶಗಳು ಅಧ್ಯಯನದಲ್ಲಿ ಕಂಡುಬಂದಿದೆ.

ಕೊರೊನಾ ವೈರಸ್ ಲಸಿಕೆಯ ಡೇಟಾ ಹ್ಯಾಕ್: ಚೀನಾ ವಿರುದ್ಧ ಯುಎಸ್ ವಾರ್ನಿಂಗ್ಕೊರೊನಾ ವೈರಸ್ ಲಸಿಕೆಯ ಡೇಟಾ ಹ್ಯಾಕ್: ಚೀನಾ ವಿರುದ್ಧ ಯುಎಸ್ ವಾರ್ನಿಂಗ್

ಮಾನಸಿಕ ಖಿನ್ನತೆ ಯಾಕೆ.?

ಮಾನಸಿಕ ಖಿನ್ನತೆ ಯಾಕೆ.?

''ಮಾರಣಾಂತಿಕ ಕೋವಿಡ್-19 ಕುರಿತು ಫಾರ್ವರ್ಡ್ ಮಾಡಿದ ಸಂದೇಶಗಳನ್ನು ಓದುವುದರಿಂದ ಮಾನಸಿಕ ಖಿನ್ನತೆ ಉಂಟಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಬಗ್ಗೆ ಗಮನ ಹರಿಸುವುದಿಲ್ಲ'' ಎಂದು ಅಧ್ಯಯನಲ್ಲಿ ಪಾಲ್ಗೊಂಡ ಬಹುತೇಕ ಮಂದಿ ತಿಳಿಸಿದ್ದಾರೆ.

ದೈಹಿಕ ಚಟುವಟಿಕೆ ಇಲ್ಲ

ದೈಹಿಕ ಚಟುವಟಿಕೆ ಇಲ್ಲ

''ಅಧ್ಯಯನದಲ್ಲಿ ಪಾಲ್ಗೊಂಡ 41% ರಷ್ಟು ಮಂದಿ ಲಾಕ್ ಡೌನ್ ವೇಳೆಯಲ್ಲಿ ಯೋಗ, ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇನ್ನೂ 57% ರಷ್ಟು ಜನರು ಧ್ಯಾನದಂತಹ ಮನಸ್ಸು ಶಾಂತಗೊಳಿಸುವ ಯಾವುದೇ ಅಭ್ಯಾಸದಲ್ಲಿ ತೊಡಗಿಲ್ಲ'' ಎಂಬುದು ತಿಳಿದುಬಂದಿದೆ.

ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?ಓಹೋ.. ಕೊರೊನಾ ಕುರಿತ ಮಹತ್ವದ ಮಾಹಿತಿ ಮುಚ್ಚಿಡಲು WHOಗೆ ಕರೆ ಮಾಡಿದ್ರಾ ಚೀನಾ ಅಧ್ಯಕ್ಷ?

English summary
Most People are worried about the health of their dear ones than their own well being, says a Study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X