ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ವಿವಾದ: ಕೇಂದ್ರ ಸಚಿವರಿಗೆ ಸೆಡ್ಡು ಹೊಡೆದ ಗೋವಾ ಬಿಜೆಪಿ ಸಿಎಂ

|
Google Oneindia Kannada News

ಪಣಜಿ, ಜನವರಿ 01: ಮಹದಾಯಿ ವಿಚಾರದಲ್ಲಿ ಕರ್ನಾಟಕದ ಪರವಾಗಿರುವ ಕಾನೂನಿನ ಬಗ್ಗೆ ಮಾತನಾಡಿದ ತಮ್ಮದೇ ಪಕ್ಷದ ಹಿರಿಯ ಸಚಿವರ ವಿರುದ್ಧ ಗೋವಾ ಬಿಜೆಪಿ ಸಿಎಂ ಕಿಡಿ ಕಾರಿದ್ದಾರೆ.

ಕೇಂದ್ರ ಸಚಿವ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಇತ್ತೀಚಿಗಷ್ಟೆ ಮಹದಾಯಿ ವಿಚಾರದ ಕುರಿತಂತೆ ಕರ್ನಾಟಕದ ಪರವಾಗಿರುವ ಕಾನೂನೊಂದರ ಬಗ್ಗೆ ಪತ್ರ ಬರೆದಿದ್ದರು. ಕರ್ನಾಟಕವು ಕಳಸಾ-ಬಂಡೂರಿ ಯೋಜನೆ ಪ್ರಾರಂಭಿಸಲು ಪರಿಸರ ಇಲಾಖೆ ಅಡ್ಡಿಯಿಲ್ಲ ಎಂದಿದ್ದರು.

ಮಹದಾಯಿ; ಬಿಜೆಪಿಯಿಂದ ಕರ್ನಾಟಕಕ್ಕೆ ಇದೆಂತಾ ಮೋಸ?ಮಹದಾಯಿ; ಬಿಜೆಪಿಯಿಂದ ಕರ್ನಾಟಕಕ್ಕೆ ಇದೆಂತಾ ಮೋಸ?

ಆದರೆ ಇದರಿಂದ ಬೇಸರಗೊಂಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, 'ಮಹದಾಯಿ ವಿವಾದದ ಕುರಿತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆಗೆ ಕಿಮ್ಮತ್ತಿಲ್ಲ' ಎಂದಿದ್ದಾರೆ.

Central Ministers Statement Is Not Worthy: Goa CM Pramod Savanth

ತಮ್ಮದೇ ಪಕ್ಷದ ರಾಷ್ಟ್ರ ನಾಯಕರ ವಿರುದ್ಧ ಟೀಕೆ ಮಾಡಿರುವ ಪ್ರಮೋದ್ ಸಾವಂತ್, 'ಪ್ರಕರಣವು ಸುಪ್ರೀಂಕೋರ್ಟ್‌ ನಲ್ಲಿ ಇದೆ ಹಾಗಾಗಿ ಜಾವಡೇಕರ್ ಅವರು ಹೇಳಿರುವ ಮಾತುಗಳಿಗೆ ಕಿಮ್ಮತ್ತಿಲ್ಲ, ಪ್ರಕರಣದ ತೀರ್ಮಾನ ಸುಪ್ರೀಂಕೋರ್ಟ್‌ನಲ್ಲಿ ಆಗುತ್ತದೆ' ಎಂದಿದ್ದಾರೆ.

ಕಳಸಾ-ಬಂಡೂರಿ ಯೋಜನೆಗೆ ಪರಿಸರ ಸಚಿವಾಲಯದ ಅನುಮತಿ ಅಗತ್ಯವಿಲ್ಲ ಎಂದು ಕಳೆದ ವಾರ ಜಾವಡೇಕರ್ ಹೇಳಿಕೆ ನೀಡಿದ್ದರು. 'ಮಹದಾಯಿ ವಿವಾದದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದರೂ ಈ ನದಿಯ ಕೆಲ ಪ್ರಮಾಣದ ನೀರನ್ನುತಿರುಗಿಸಲಾಗಿದೆ ಎಂಬ ಅಂಶವನ್ನು ಅವರು ಒಪ್ಪಿಕೊಂಡರು. ಈ ವಿವಾದದಲ್ಲಿ ನಮ್ಮ ಸ್ಷಷ್ಟ ನಿಲುವನ್ನು ಈಗಾಗಲೇ ಸುಪ್ರೀಂಕೋರ್ಟ್ ತಿಳಿಸಿದ್ದೇವೆ' ಎಂದು ಗೋವಾ ಸಿಎಂ ಹೇಳಿದ್ದಾರೆ.

ಮಹದಾಯಿಗೆ ಇಲ್ಲ ತಡೆ: ರಾಜ್ಯಕ್ಕೆ ಕೇಂದ್ರ ಸಚಿವ ಪತ್ರಮಹದಾಯಿಗೆ ಇಲ್ಲ ತಡೆ: ರಾಜ್ಯಕ್ಕೆ ಕೇಂದ್ರ ಸಚಿವ ಪತ್ರ

'ಕೇಂದ್ರ ಪರಿಸರ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಗೆ ಪತ್ರಗಳ ಮುಖೇನ ಈ ವಿಷಯವನ್ನು ನಾವು ಸ್ಪಷ್ಟಪಡಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.

English summary
Central minister Praash Javdekar statement about Kalasa-Banduri is worthless said Goa CM Pramod Savanth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X