ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಹಾಯಕರೊಂದಿಗೆ ಸೋನಾಲಿ ತಂಗಿದ್ದ ಗೋವಾ ಹೋಟೆಲ್‌ನಲ್ಲಿ ಸಿಬಿಐ ತಂಡ ಶೋಧ

|
Google Oneindia Kannada News

ಪಣಜಿ ಸೆಪ್ಟೆಂಬರ್ 17: ಕಳೆದ ತಿಂಗಳು ಗೋವಾದಲ್ಲಿ ಹರಿಯಾಣದ ರಾಜಕಾರಣಿ ಸೋನಾಲಿ ಫೋಗಟ್ ಅವರ ನಿಗೂಢ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ತಂಡವು ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಬಿಜೆಪಿ ನಾಯಕಿ ಮತ್ತು ಅವರ ಪಿಎ ತಂಗಿದ್ದ ಹೋಟೆಲ್‌ನ ಕೊಠಡಿಗಳನ್ನು ಶೋಧಿಸಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮುನ್ನ ತನಿಖೆ ನಡೆಸುತ್ತಿದ್ದ ಗೋವಾ ಪೊಲೀಸರು, ತನಿಖೆಯ ಭಾಗವಾಗಿ ಹೋಟೆಲ್, ಗ್ರ್ಯಾಂಡ್ ಲಿಯೋನಿಯಲ್ಲಿನ ಕೊಠಡಿಗಳನ್ನು ಸೀಲ್ ಮಾಡಿದ್ದರು. ಈಗ ಸಿಬಿಐ ತಂಡ ದಾಖಲೆಗಳನ್ನು ಸಂಗ್ರಹಿಸುತ್ತದೆ. ಜೊತೆಗೆ ಸೋನಾಲಿ ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ಪರೀಕ್ಷಿಸಿದ ವೈದ್ಯರು ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಲಿದೆ.

ಹರಿಯಾಣದಲ್ಲಿರುವ ಸೋನಾಲಿ ಫೋಗಟ್ ಸಹೋದರರ ಹೇಳಿಕೆಯನ್ನು ಕೇಂದ್ರ ತನಿಖಾ ಸಂಸ್ಥೆ ಈಗಾಗಲೇ ತೆಗೆದುಕೊಂಡಿದೆ. "ಸಿಬಿಐ ತಂಡವು ನಮ್ಮ ಮನೆಗೆ ಬಂದು ನಮ್ಮ ಕುಟುಂಬದ ಹೇಳಿಕೆಯನ್ನು ದಾಖಲಿಸಿದೆ. ನಂತರ ಅವರು ನಮ್ಮ ಸಹೋದರನ ಮನೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ" ಎಂದು ಸೋನಾಲಿ ಫೋಗಟ್ ಅವರ ಸಹೋದರ ವತನ್ ಧಾಕಾ ಹೇಳಿದ್ದಾರೆ.

CBI team investigates in Goa hotel where Sonali stayed with assistant

ಸೋನಾಲಿ ಫೋಗಟ್ ಸಾವಿನ ಹಿಂದೆ ಪಿತೂರಿ ಇದೆ ಎಂದು ಆಕೆಯ ಕುಟುಂಬ ಈ ಹಿಂದೆ ಹೇಳಿಕೊಂಡಿತ್ತು ಮತ್ತು ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರತರಬಹುದು ಎಂದು ಹೇಳಿತ್ತು. ಕುಟುಂಬದ ಒತ್ತಾಯದ ಮೇರೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಪತ್ರದಲ್ಲಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿದೆ.

CBI team investigates in Goa hotel where Sonali stayed with assistant

ಹರಿಯಾಣದ ಹಿಸಾರ್‌ನ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (43) ಕಳೆದ ತಿಂಗಳು ಗೋವಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದನ್ನು ಕೊಲೆ ಎಂದು ಆರೋಪಿಸಲಾಗುತ್ತಿದೆ. ಇಲ್ಲಿಯವರೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪುರುಷ ಸಹಾಯಕರಾದ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ.

English summary
Central Investigation Team probing the mysterious death of Haryana politician Sonali Phogat in Goa last month today searched the hotel rooms where the BJP leader and her PA were staying to collect evidence related to the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X