ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ, ವಿಚಾರಣೆಗೆ ಆದೇಶ
ಪಣಜಿ, ಸೆಪ್ಟೆಂಬರ್ 27: ಬಿಜೆಪಿ ಶಾಸಕರು ಸಾಲು-ಸಾಲಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ನಿನ್ನೆ ಗೋವಾದಲ್ಲಿ ಆಗಿದೆ.
ಗೋವಾದ ಮಾಜಿ ಮಂತ್ರಿ, ಹಾಲಿ ಬಿಜೆಪಿ ಶಾಸಕ ಅಂಟಾನಾಶಿಯೊ ಮೊನ್ಸೆರಾಟ್ಟೆ ಮಾಡಿದ್ದಾರೆನ್ನಲಾದ ಅತ್ಯಾಚಾರ ಪ್ರಕರಣದ ವಿಚಾರಣೆ ಅಕ್ಟೋಬರ್ 17 ರಿಂದ ಪ್ರಾರಂಭವಾಗಲಿದೆ.
ಉ.ಪ್ರ. ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದ ಮಹಿಳೆಯ ಬಂಧನ
ಅಪ್ರಾಪ್ತ ಬಾಲಕಿಯ ಮೇಲೆ ಶಾಸಕ ಅಂಟಾನಾಶಿಯೊ ಮೊನ್ಸೆರಾಟ್ಟೆ ಅವರ 2016 ರಲ್ಲಿ ಅತ್ಯಾಚಾರ ನಡೆಸಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಆದರೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲವೆಂದು ಶಾಸಕ ಅಂಟಾನಾಶಿಯೋ ಮೊನ್ಸೆರಾಟ್ಟೆ ಹೇಳಿದ್ದು, ಪ್ರಕರಣದಿಂದ ವಿಮುಕ್ತಿ ಕೇಳಿದ್ದರು.
ಇದರ ಬಗ್ಗೆ ವಿಚಾರಣೆ ನಡೆಸಿದ ಸೆಶನ್ಸ್ ನ್ಯಾಯಾಲಯ ಶಾಸಕ ಅಂಟಾನಾಶಿಯೊ ಮೊನ್ಸೆರಾಟ್ಟೆ ಆರೋಪಿಯಾಗಿದ್ದು, ಅವರ ವಿಚಾರಣೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 17 ರಿಂದ ವಿಚಾರಣೆ ಪ್ರಾರಂಭವಾಗಲಿದೆ.
2016 ರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಶಾಸಕ ಅಂಟಾನಾಶಿಯೊ ಮೊನ್ಸೆರಾಟ್ಟೆ ಮತ್ತು ಆತನ ಸಹವರ್ತಿ ರೋಸಿ ಫೆರ್ರೊ ಅವರುಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡ ಬಿಜೆಪಿ ಮುಖಂಡ
'ತನ್ನನ್ನು 50 ಲಕ್ಷ ರೂಪಾಯಿಗೆ ಖರೀದಿಸಿ, ಮತ್ತು ಬರಿಸುವಂತೆ ಮಾಡಿ ಅತ್ಯಾಚಾರ ಎಸಗಿ, ಲೈಂಗಿಕ ದೌರ್ಜನ್ಯ ಮಾಡಿ ಥಳಿಸಿದ್ದಾರೆ' ಎಂದು ಅತ್ಯಾಚಾರ ಸಂತ್ರಸ್ಥೆಯು ಈ ಹಿಂದೆಯೇ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಳು. ಆದರೆ ಸಂತ್ರಸ್ಥೆಯ ಹೇಳಿಕೆಯು ಅನುಮಾನದಿಂದ ಕೂಡಿದೆ ಎಂಬ ಕಾರಣಕ್ಕೆ ಶಾಸಕ ಅಂಟಾನಾಶಿಯೊ ಮೊನ್ಸೆರಾಟ್ಟೆ ಹಾಗೂ ಆತನ ಸಹವರ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಮಾಜಿ ಕೇಂದ್ರ ಸಚಿವ ಬಂಧನ
2018 ರ ಉಪಚುನಾವಣೆಯಲ್ಲಿ ಅಂಟಾನಾಶಿಯೊ ಮೊನ್ಸೆರಾಟ್ಟೆ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು, ಆಗ ಕೆಲವು ದಿನಗಳ ಕಾಲ ಅತ್ಯಾಚಾರ ಸಂತ್ರಸ್ಥೆ ನಾಪತ್ತೆಯಾಗಿದ್ದರು. ಇದು ಭಾರಿ ವಿವಾದ ಎಬ್ಬಿಸಿತ್ತು. ಉಪಚುನಾವಣೆ ಮುಗಿದ ನಂತರ ಆಕೆ ಪತ್ತೆಯಾದಳು.