ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದ ಅತಿದ್ದೊಡ್ಡ ಗೋಮಾಂಸ ಮಾರುಕಟ್ಟೆ ಓಪನ್

By ಕಾರವಾರ ಪ್ರತಿನಿಧಿ
|
Google Oneindia Kannada News

ಪಣಜಿ, ಡಿಸೆಂಬರ್ 24: ಗೋವಾದ ಅತಿದೊಡ್ಡ ಗೋಮಾಂಸ ಮಾರುಕಟ್ಟೆಯಾದ ಮರ್ಗೋವಾದಲ್ಲಿ ಗೋಮಾಂಸದ ಸ್ಟಾಲ್‌ಗಳು ಮಂಗಳವಾರ ಸಾಕಷ್ಟು ಮಾಂಸದ ಲಭ್ಯತೆಯೊಂದಿಗೆ ಪುನರರಾಂಭಗೊಂಡಿವೆ. ಗೋಮಾಂಸದ ಬೆಲೆಯಲ್ಲಿಯೂ ಯಾವುದೇ ಹೆಚ್ಚಳವಾಗಿಲ್ಲ.

ಕರ್ನಾಟಕದ ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಯಾದ ಬಳಿಕ ಗೋವಾ ಗೋಮಾಂಸ ವ್ಯಾಪಾರದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅಲ್ಲದೇ, ಕಳೆದ ಒಂದು ವಾರಗಳಿಂದ ಮಾಂಸ ಮಾರುಕಟ್ಟೆ ಮುಚ್ಚಿದ್ದವು. ಈಗ ಕ್ರಿಸ್‌ಮಸ್ ಹಬ್ಬ ಸಮೀಪಿಸಿದ್ದು, ಈ ಸಂದರ್ಭದಲ್ಲಿ ಕ್ಯಾಥೊಲಿಕ್ ಸಮುದಾಯಕ್ಕೆ ಹಬ್ಬದ ಅಡುಗೆಗೆ ಗೋಮಾಂಸ ಅಗತ್ಯವಾಗಿದೆ.

ಗೋಹತ್ಯೆ ನಿಷೇಧ ಕಾಯ್ದೆ; ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆಗಳು ಗೋಹತ್ಯೆ ನಿಷೇಧ ಕಾಯ್ದೆ; ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನೆಗಳು

ಮಂಗಳವಾರದಿಂದ ಮಾರುಕಟ್ಟೆ ಪುನರಾರಂಭವಾಗಿದೆ. ಸದ್ಯ ಲಭ್ಯವಿರುವ ಮಾಂಸವನ್ನು ಎಷ್ಟು ಸಮಯದವರೆಗೆ ಪೂರೈಸಬಹುದು ಹಾಗೂ ಕ್ರಿಸ್‌ಮಸ್‌ವರೆಗೆ ಇದು ಲಭ್ಯವಾಗುತ್ತದೆಯೇ? ಎಂಬ ಬಗ್ಗೆ ಗೋಮಾಂಸ ವ್ಯಾಪಾರಿಗಳಲ್ಲಿಯೇ ಸಂಶಯವಿದೆ.

ಕರ್ನಾಟಕದ ಗೋಹತ್ಯೆ ನಿಷೇಧ ಮಸೂದೆಗೆ ಗೋವಾದ ವಿರೋಧ! ಕರ್ನಾಟಕದ ಗೋಹತ್ಯೆ ನಿಷೇಧ ಮಸೂದೆಗೆ ಗೋವಾದ ವಿರೋಧ!

Beef Market At Margao Reopen With Limited Stocks

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮರ್ಗೋವಾ ಎಸ್‌ಜಿಪಿಡಿಎ ಮಾರುಕಟ್ಟೆಯ ಮಾಂಸ ಮಾರಾಟಗಾರ ಸದ್ದಾಂ ಹುಸೇನ್ ಅಸ್ಲಂ ಬೆಪಾರಿ, "ನಾವು ಬೆಳಗಾವಿಯಿಂದ ಸದ್ಯ ಇಲ್ಲಿಗೆ ಮಾರಾಟ ಮಾಡಲು ಮಾಂಸ ತಂದಿದ್ದು, ಅವರು ತಮ್ಮಲ್ಲಿ ಲಭ್ಯವಿರುವ ಮಾಂಸವನ್ನು ಪೂರೈಕೆ ಮಾಡಿದ್ದಾರೆ. ಹೀಗಾಗಿ ಕ್ರಿಸ್‌ಮಸ್‌ಗೆ ಗೋಮಾಂಸ ಲಭ್ಯವಿರುತ್ತದೆಯೇ? ಎಂದು ಹೇಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ; ಬಿಜೆಪಿ ಟ್ವೀಟ್ ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ; ಬಿಜೆಪಿ ಟ್ವೀಟ್

ಎಸ್‌ಜಿಪಿಡಿಎ ಮಾರುಕಟ್ಟೆಯಲ್ಲಿ ಆರು ಗೋಮಾಂಸ ಮಳಿಗೆಗಳಲ್ಲಿ 5ರಲ್ಲಿ ಭಾರೀ ಜನಸಂದಣಿ ಕಂಡುಬಂದಿದೆ. 'ಭೆಂಡಿ' ಕತ್ತರಿಸಿದ ಗೋಮಾಂಸ ಕೆಜಿಗೆ 350 ರೂ.ಗೆ ಮಾರಾಟವಾಗುತ್ತಿದ್ದರೆ, ಅಡಿ ಕತ್ತರಿಸಿದ ಗೋಮಾಂಸ ಪ್ರತಿ ಕೆಜಿಗೆ 400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಪ್ರತಿ ಕೆಜಿಗೆ 380 ರೂ. ಇತ್ತು.

ಕೋಳಿಯ ಬೆಲೆ ಹೆಚ್ಚಿಸಲಾಗಿದ್ದು, ಈ ಮೊದಲು ಕೆಜಿಗೆ 140 ರೂ.ಗೆ ಲಭ್ಯವಾಗುತ್ತಿದ್ದ ಕೋಳಿ ಮಾಂಸ ಈಗ ಕೆ.ಜಿ 150 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಹಂದಿಮಾಂಸದ ಬೆಲೆಯೂ ಹೆಚ್ಚಾಗಿದೆ. ಈ ಹಿಂದೆ ಕೆ.ಜಿ.ಗೆ 380 ರೂ.ಗೆ ಮಾರಾಟವಾಗುತ್ತಿದ್ದ ಮಾಂಸ ಈಗ ಕೆ.ಜಿ.ಗೆ 400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ಕೆಜಿಗೆ 350 ರೂ. ಇತ್ತು.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಗೋವಾದಲ್ಲಿ ಸಾಕಷ್ಟು ಆಡುಗಳು ಇಲ್ಲದಿರುವುದರಿಂದ ಅದನ್ನೂ ಬೆಳಗಾವಿಯಿಂದ ತರಿಸಿಕೊಳ್ಳಲಾಗುತ್ತಿದ್ದು, ಎಸ್‌ಜಿಪಿಡಿಎ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 800 ರೂ.ನಂತೆ ದರ ಹೊಂದಿದೆ.

English summary
Beef market in Goa Margao reopen with limited stocks. In the time of Christians festival market open for public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X