• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಯುರ್ವೇದ ವೈದ್ಯ ಪ್ರಮೋದ್ ಈಗ ಗೋವಾ ಮುಖ್ಯಮಂತ್ರಿ

|

ಪಣಜಿ, ಮಾರ್ಚ್ 19: ಪುಟ್ಟ ರಾಜ್ಯ ಗೋವಾದ 11ನೇ ಮುಖ್ಯಮಂತ್ರಿಯಾಗಿ ಮಂಗಳವಾರ ಮಧ್ಯರಾತ್ರಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮೋದ್ ಸಾವಂತ್, ರಾಜ್ಯ ಸರ್ಕಾರದಲ್ಲಿ ಒಮ್ಮೆಯೂ ಸಚಿವರಾದವರಲ್ಲ. ಸಚಿವರಾಗದೆಯೇ ಮುಖ್ಯಮಂತ್ರಿ ಗಾದಿಯಲ್ಲಿ ಕೂರುವ ಅವಕಾಶ ಅವರಿಗೆ ಲಭಿಸಿದೆ.

ವಿಶೇಷವೆಂದರೆ 2000ನೇ ಇಸವಿಯಲ್ಲಿ ಮನೋಹರ್ ಪರಿಕ್ಕರ್ ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದಾಗಲೂ ರಾಜ್ಯ ಸಂಪುಟದಲ್ಲಿ ಸಚಿವರಾದ ಅನುಭವ ಹೊಂದಿರಲಿಲ್ಲ.

ಮಧ್ಯರಾತ್ರಿ ಪ್ರಮಾಣ ವಚನ ಸ್ವೀಕರಿಸಿದ ಗೋವಾ ಸಿಎಂ ಪ್ರಮೋದ್ ಸಾವಂತ್

45 ವರ್ಷದ ಸಾವಂತ್ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಗಣಗಾ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ ಔಷಧ ವಿಷಯದಲ್ಲಿ ಪದವಿ ಪಡೆದವರು. ಕೆಲವು ಸಮಯ ಗೋವಾದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಜತೆಗೆ ಪುಣೆಯ ತಿಲಕ್ ಮಹಾರಾಷ್ಟ್ರ ವಿದ್ಯಪೀಠದಲ್ಲಿ ಸಾಮಾಜಿಕ ಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು.

ಮೂಲತಃ ಮರಾಠಿಗರಾದ ಸಾವಂತ್, 2012 ಮತ್ತು 2017ರಲ್ಲಿ ಸಾಂಕ್ವೆಲಿಮ್ ವಿಧಾನಸಭೆ ಕ್ಷೇತ್ರದಿಂದ ಗೋವಾ ವಿಧಾನಸಭೆಗೆ ಆಯ್ಕೆಯಾಗಿದ್ದರು. 2017ರಲ್ಲಿ ಗೋವಾ ವಿಧಾನಸಭೆಯ ಸ್ಪೀಕರ್ ಆಗಿ ನೇಮಕವಾದರು.

ಆರಂಭದಿಂದಲೂ ಆರೆಸ್ಸೆಸ್ ಒಡನಾಟ ಇಟ್ಟುಕೊಂಡಿದ್ದ ಸಾವಂತ್, ಬಿಜೆಪಿಯ ಯುವ ಬ್ರಿಗೇಡ್ ಸೇರಿದಂತೆ ಪಕ್ಷದ ವಿವಿಧ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಪರಿಕ್ಕರ್ ಅವರ ಆಪ್ತರ ವಲಯದಲ್ಲಿದ್ದ ಯುವ ಮುಖಂಡರಲ್ಲಿ ಸಾವಂತ್ ಒಬ್ಬರು.

ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್

ಸಾವಂತ್ ಅವರ ಪತ್ನಿ ಸುಲಕ್ಷಣ ಪ್ರಸ್ತುತ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷೆಯಾಗಿದ್ದಾರೆ. ಅವರ ಮಗಳು ಆರನೇ ತರಗತಿ ಓದುತ್ತಿದ್ದಾರೆ.

ಉತ್ತರ ಗೋವಾದ ಗಣಿಗಾರಿಕೆಯ ಪ್ರದೇಶದಲ್ಲಿ ಸಾವಂತ್ ಅವರ ಸಾಂಕ್ವೆಲಿಮ್ ಕ್ಷೇತ್ರವಿದೆ. ಇಲ್ಲಿನ ಗಣಿಗಳನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ನಿಷೇಧಿಸಿತ್ತು. ಕೇಂದ್ರ ಸರ್ಕಾರ ಅವರುಗಳನ್ನು ಪುನಃ ಆರಂಭಿಸುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಭಾಗಗಳಲ್ಲಿ ಬಿಜೆಪಿಯ ಪ್ರಭಾವಳಿ ಇತ್ತೀಚಿನ ದಿನಗಳಲ್ಲಿ ಕೊಂಚ ಮಸುಕಾಗಿದೆ.

ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕರ್ ಜೀವನದ ಹೆಜ್ಜೆ ಗುರುತುಗಳು

ಸಾವಂತ್ ಅವರು ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೂ, ಅವರ ಹೆಸರು ಹಲವು ತಿಂಗಳಿನಿಂದ ಚಾಲ್ತಿಯಲ್ಲಿತ್ತು. ಅಕ್ಟೋಬರ್‌ನಲ್ಲಿ ಸಾವಂತ್ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನಾಗಪುರದಲ್ಲಿ ಭೇಟಿ ಮಾಡಿ ಮುಖ್ಯಮಂತ್ರಿ ಗಾದಿಗೆ ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಮತ್ತು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ಹೆಸರು ಪೈಪೋಟಿಯಲ್ಲಿದ್ದರೂ, ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ಏಕೈಕ ಬಿಜೆಪಿ ಶಾಸಕನಾಗಿರುವ ಸಾವಂತ್ ಅವರಿಗೆ ಮಣೆ ಹಾಕಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Newly appointed Chief Minister of Goa Pramod Sawant was a Ayurveda Practitioner. He was elected from Sanquelim constituency twice and never served as a minister in the state cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more