ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎಂಸಿ ಸೇರಿದ ಒಂದು ತಿಂಗಳೊಳಗೆ ಲೌರೆಂಕೊ ರಾಜೀನಾಮೆ: ಮತ್ತೆ ಕಾಂಗ್ರೆಸ್‌ಗೆ?

|
Google Oneindia Kannada News

ಪಣಜಿ, ಜನವರಿ 17: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಒಂದು ತಿಂಗಳ ನಂತರ ಗೋವಾದ ಮಾಜಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಟಿಎಂಸಿಯನ್ನು ತೊರೆದಿದ್ದಾರೆ. ಈ ಮೂಲಕ ಗೋವಾ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಇರುವಾಗ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಶಾಕ್‌ ನೀಡಿದ್ದಾರೆ.

ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಕರ್ಟೋರಿಮ್‌ನ ಶಾಸಕರಾಗಿದ್ದರು. ಗೋವಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷರಾಗಿದ್ದರು ಅವರು ಡಿಸೆಂಬರ್‌ನಲ್ಲಿ ಪಕ್ಷ ಮತ್ತು ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ತೊರೆಯುವ ನಿರ್ಧಾರವನ್ನು ತಿಳಿಸಲು ಬ್ಯಾನರ್ಜಿ ಅವರಿಗೆ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಪತ್ರವನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಕಳುಹಿಸಿದ್ದು, ಇದರಲ್ಲಿ ಯಾವುದೇ ಕಾರಣವನ್ನು ನೀಡಿಲ್ಲ.

'ಟಿಎಂಸಿ, ಎಎಪಿಯಿಂದ ಗೋವಾದಲ್ಲಿ ಬಿಜೆಪಿಯೇತರ ಮತ ವಿಭಜನೆ': ಪಿ ಚಿದಂಬರಂ'ಟಿಎಂಸಿ, ಎಎಪಿಯಿಂದ ಗೋವಾದಲ್ಲಿ ಬಿಜೆಪಿಯೇತರ ಮತ ವಿಭಜನೆ': ಪಿ ಚಿದಂಬರಂ

ಈ ಕ್ರಮವು ತಕ್ಷಣವೇ ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್ ನಾಯಕ ಮೈಕೆಲ್ ಲೋಬೋಗೂ ಕೂಡಾ ಕಾಂಗ್ರೆಸ್‌ಗೆ ಆಹ್ವಾನ ಸೇರ್ಪಡೆ ಆಗಲು ಪ್ರೇರಣೆ ನೀಡಿದಂತೆ ಕಂಡು ಬಂದಿದೆ. ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ರಾಜೀನಾಮೆಯನ್ನು ತೃಣಮೂಲ ಕಾಂಗ್ರೆಸ್ ಹೇಳಿಕೆಯಲ್ಲಿ ದೃಢಪಡಿಸಿದೆ.

Aleixo Reginaldo Lourenco Quits Within a Month of Joining TMC in Goa

ಪಕ್ಷದ ಗೋವಾ ಉಸ್ತುವಾರಿ ಮಹುವಾ ಮೊಯಿತ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, "ಎಐಟಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಪತ್ರವನ್ನು ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊರಿಂದ ಸ್ವೀಕಾರ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಬೇರೆಯವರನ್ನು ಆಹ್ವಾನ ಮಾಡಿದ್ದಂತೆ ನಾವು ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದೇವೆ. ಈಗ ಅವರು ಪಕ್ಷವನ್ನು ತೊರೆಯಲು ಬಯಸುತ್ತಾರೆ. ನಾವು ಅವರಿಗೆ ಶುಭ ಹಾರೈಕೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಮತ್ತೆ ಕಾಂಗ್ರೆಸ್‌ ಸೇರ್ಪಡೆ?

ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಟಿಎಂಸಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಾರೋ ಎಂಬ ಊಹಾಪೋಹಗಳು ಕೇಳಿಬಂದಿದೆ. ಲೌರೆಂಕೊ ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗಬಹುದು ಮತ್ತು ಕಾಂಗ್ರೆಸ್‌ಗೆ ಸೇರ್ಪಡೆ ಆಗಿ ಪಕ್ಷವು ಘೋಷಿಸಿದಂತೆ ಕರ್ಟೋರಿಮ್ ಸ್ಥಾನದಿಂದ ಸ್ಪರ್ಧಿಸಬಹುದು ಎಂದು ವರದಿಗಳು ಹೇಳುತ್ತವೆ. ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ಅವರ ನಿರ್ಗಮನದ ನಂತರ ಕರ್ಟೋರಿಮ್ ಸ್ಥಾನಕ್ಕೆ ಕಾಂಗ್ರೆಸ್ ಪರ್ಯಾಯ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಆದರೆ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ ರಾಜೀನಾಮೆಗೆ ಕಾಂಗ್ರೆಸ್‌ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ. ನಂಬಿಕೆ ದ್ರೋಹ ಮಾಡುವ ಜನರು ಪರಿಣಾಮಗಳನ್ನು ಎದುರಿಸುತ್ತಾರೆ. ಮತದಾರರು ಅವರಿಗೆ "ತಕ್ಕ ಪಾಠ" ಕಲಿಸುತ್ತಾರೆ ಎಂದು ಕಾಂಗ್ರೆಸ್‌ ಹೇಳಿತ್ತು. ಇನ್ನು ಈ ಹಿಂದೆ ಗೋವಾದ ಮಾಜಿ ಮುಖ್ಯಮಂತ್ರಿ ರವಿ ನಾಯ್ಕ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಾಗೆಯೇ ಮಾಜಿ ಸಿಎಂ ಲುಜಿನ್ಹೋ ಫಲೈರೊ ಕೂಡ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ್ದರು.

ಇನ್ನು ಶಾಸಕರುಗಳು ಪಕ್ಷವನ್ನು ತೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ, "ಶೇಕಡ ತೊಂಬತ್ತೊಂಬತ್ತು ರಷ್ಟು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‌ನಲ್ಲೇ ಉಳಿದಿದ್ದಾರೆ. ರೆಜಿನಾಲ್ಡೊ ಲೌರೆಂಕೊ ಟಿಎಂಸಿಗೆ ಪಕ್ಷಾಂತರ ಆಗಿದ್ದಕ್ಕೆ ನನಗೆ ಅಸಮಾಧಾನವಿಲ್ಲ. ಟಿಎಂಸಿ ನಮ್ಮ ಕೈಯಿಂದ ಸೋತ ಅಭ್ಯರ್ಥಿಯನ್ನು ತೆಗೆದುಕೊಂಡಿದೆ. ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಿದರೆ ಅವರು ಸೋತ ಅಭ್ಯರ್ಥಿಗಳಾಗಿಯೇ ಉಳಿಯುತ್ತಾರೆ," ಎಂದಿದ್ದರು.

Recommended Video

ಹೊಸ ನಾಯಕನ ಮುಂದೆ Kohli ಹೇಗಿರಬೇಕು ಎಂದ Kapil Dev | Oneindia Kannada

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಪಂಜಾಬ್, ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

English summary
Aleixo Reginaldo Lourenco Quits Within a Month of Joining TMC in Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X