ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಈಗ ಕೊರೊನಾ ಮುಕ್ತ ರಾಜ್ಯವಲ್ಲ; 13 ಸಕ್ರಿಯ ಕೇಸ್‌

|
Google Oneindia Kannada News

ಪಣಜಿ, ಮೇ 17 : ದೆಹಲಿಯಿಂದ ಗೋವಾಕ್ಕೆ ತೆರಳಿದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಮೇ 13ರ ಬಳಿಕ ರಾಜ್ಯದಲ್ಲಿ 16 ಪ್ರಕರಣ ದಾಖಲಾಗಿದೆ. ಮೊದಲು ಗೋವಾ ರಾಜ್ಯ ಕೊರೊನಾ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು.

ದೆಹಲಿ-ತಿರುವನಂತಪುರಂ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಗೋವಾಕ್ಕೆ ಆಗಮಿಸಿದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ.

ಗೋವಾ, ಮಣಿಪುರದ ಬಳಿಕ ಮತ್ತೊಂದು ರಾಜ್ಯ ಕೊರೊನಾ ಮುಕ್ತಗೋವಾ, ಮಣಿಪುರದ ಬಳಿಕ ಮತ್ತೊಂದು ರಾಜ್ಯ ಕೊರೊನಾ ಮುಕ್ತ

ಏಪ್ರಿಲ್ ತಿಂಗಳಿನಲ್ಲಿ ಗೋವಾ ರಾಜ್ಯವನ್ನು ಕೊರೊನಾ ಮುಕ್ತ ಎಂದು ಘೋಷಣೆ ಮಾಡಲಾಗಿತ್ತು. ಆದ್ದರಿಂದ, ಕೇಂದ್ರ ಗೃಹ ಸಚಿವಾಲಯ ರಾಜ್ಯವನ್ನು ಹಸಿರು ವಲಯ ಎಂದು ಪಟ್ಟಿಗೆ ಸೇರಿಸಿತ್ತು.

ಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತ ಗೋವಾ ಬಳಿಕ ದೇಶದ ಮತ್ತೊಂದು ರಾಜ್ಯ ಕೊರೊನಾ ಮುಕ್ತ

A Woman Travelled To Goa Tested Positive For Covid 19

ಆದರೆ, ಶನಿವಾರ ದೆಹಲಿಯಿಂದ ಆಗಮಿಸಿದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಗೋವಾ ರಾಜ್ಯದಲ್ಲಿ ಮೇ 13ರ ಬಳಿಕ 16 ಪ್ರಕರಣ ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗುಜರಾತ್ ನಿಂದ ಬಂದಿದ್ದ ಹರಪನಹಳ್ಳಿ ವ್ಯಕ್ತಿಯಲ್ಲಿ ಕೊರೊನಾಗುಜರಾತ್ ನಿಂದ ಬಂದಿದ್ದ ಹರಪನಹಳ್ಳಿ ವ್ಯಕ್ತಿಯಲ್ಲಿ ಕೊರೊನಾ

ಗೋವಾ ರಾಜ್ಯದಲ್ಲಿ ಪ್ರಸ್ತುತ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 20. ಇವುಗಳಲ್ಲಿ 13 ಸಕ್ರಿಯ ಪ್ರಕರಣಗಳಿವೆ. ಬೇರೆ ರಾಜ್ಯದಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಲಾಗುತ್ತಿದೆ.

ದೆಹಲಿಯಲ್ಲಿ 9333 ಕೊರೊನಾ ಪ್ರಕರಣಗಳು ದಾಖಲಾಗಿವೆ. 129 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ದೆಹಲಿಯಿಂದ ಪಣಜಿಗೆ ಬಂದ ಮಹಿಳೆಗೆ ಕೊರೊನಾ ಕಾಣಿಸಿಕೊಂಡಿದೆ.

ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 3ನೇ ಹಂತದ ಲಾಕ್ ಡೌನ್ ಸೋಮವಾರ ಅಂತ್ಯಗೊಳ್ಳಲಿದ್ದು, 4ನೇ ಹಂತದ ಲಾಕ್ ಡೌನ್ ಜಾರಿಗೆ ಬರಲಿದೆ.

English summary
A woman who travelled to Goa in Delhi-Thiruvananthapuram Rajdhani train on May 16, 2020 has tested positive for Coronavirus. Goa was earlier declared a green zone. But reported 16 cases since May 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X