• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, 6 ದಿನಕ್ಕೆ 6ಜನ ಪಿಎಂ : ಅಮಿತ್

|

ಪಣಜಿ, ಫೆಬ್ರವರಿ 10: ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲು ವಿಪಕ್ಷಗಳೆಲ್ಲ ಮಹಾಘಟಬಂದನ್ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಒಂದು ವೇಳೆ ಮಹಾಮೈತ್ರಿಕೂಟ ಗೆದ್ದು ಅಧಿಕಾರಕ್ಕೆ ಬಂದರೆ, ವಾರದ 6 ದಿನಕ್ಕೆ 6 ಪ್ರಧಾನಮಂತ್ರಿಗಳಿರುತ್ತಾರೆ. ಭಾನುವಾರ ದೇಶಕ್ಕೆ ಸಂಪೂರ್ಣ ರಜೆ ಕೊಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ಗೇಲಿ ಮಾಡಿದ್ದಾರೆ.

ಪಣಜಿಯಲ್ಲಿ ನಡೆದ 'ಅಟಲ್ ಬೂತ್ ಕಾರ್ಯಕರ್ತ' ಸಮ್ಮೇಳನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅಮಿತ್ ಶಾ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಕೋರಿದರು ಆಗೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಕೋಲ್ಕತಾವರೆಗಿನ ನುಸುಳುಕೋರರನ್ನು ಹೊರ ಹಾಕುವುದಾಗಿ ಹೇಳಿದರು.

"ಪರಿಕ್ಕರ್ ಕೆಳಗಿಳಿದರೆ ಗೋವಾ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ"

ರಾಷ್ಟ್ರೀಯ ನಾಗರಿಕರ ದಾಖಲಾತಿ(ಎನ್ಆರ್‌ಸಿ) ಒಳನುಸುಳುಕೋರರನ್ನು ಗುರುತಿಸುವ ಉದ್ದೇಶ ಹೊಂದಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ನಾನು ಕೇಳಬಯಸುತ್ತೇನೆ. ಎನ್ಆರ್‌ಸಿ ಕೆಲಸವನ್ನು ಗೋವಾದಲ್ಲಿ ನಡೆಸಬೇಕೆ? ಬೂತ್‌ ಮಟ್ಟದ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲವಿಗೆ ನೆರವಾಗಲಿದ್ದಾರೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಮಹಾಘಟಬಂದನ್ ಅಧಿಕಾರಕ್ಕೆ ಬಂದರೆ, ಸೋಮವಾರದಂದು ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ಎಚ್.ಡಿ. ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಎಂ.ಕೆ.ಸ್ಟಾಲಿನ್ ಮತ್ತು ಶರದ್ ಪವಾರ್ ಶನಿವಾರ ಪ್ರಧಾನಿಯಾಗಿರುತ್ತಾರೆ. ಭಾನುವಾರ ದೇಶಕ್ಕೆ ರಜೆ ಕೊಡುತ್ತಾರೆ ಎಂದು ಅಮಿತ್ ಶಾ ವಿವರಿಸಿದರು.

ದೀದಿಗೆ ಬಿಜೆಪಿ ಕಂಡರೆ ಭಯ: ಮಮತಾ ಬಗ್ಗೆ ಅಮಿತ್ ಶಾ ಲೇವಡಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಯಿಂದ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಬದಲಿಗೆ ದೇಶದ ಅತಿಹೆಚ್ಚು ಸ್ಥಾನಗಳನ್ನು ಹೊಂದಿರುವ ರಾಜ್ಯದಲ್ಲಿ ಬಿಜೆಪಿ ಸುಮಾರು 74 ಸ್ಥಾನ(80ರಲ್ಲಿ)ಗಳಲ್ಲಿ ವಿಜಯಿಯಾಗಲಿದೆ ಎಂದು ಹೇಳಿದರು.

ಕುಮಾರಸ್ವಾಮಿ ಸರ್ಕಾರ ಬೀಳಿಸಿ: ರಾಜ್ಯ ಬಿಜೆಪಿಗೆ ಅಮಿತ್ ಶಾ ಖಡಕ್ ಸೂಚನೆ?

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಕಂಡರೆ ಭಯ ಶುರುವಾಗಿದೆ. ಹೀಗಾಗಿ, ಬಿಜೆಪಿ ಸಮಾವೇಶಕ್ಕೆ ಅನುಮತಿ ನೀಡಿಲ್ಲ ಎಂದು ಗುಪ್ತಚರ ಇಲಾಖೆಯಿಂದ ಮಾಹಿತಿ ಸಿಕ್ಕಿದೆ ಎಂದರು.

English summary
Taking a swipe at the opposition parties' proposed "grand alliance", BJP president Amit Shah said if it wins the Lok Sabha polls, every leader of the coalition would take turn to be prime minister for a day on six days of a week and the "country would be on holiday on Sunday".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X