• search
  • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

48 ವರ್ಷದ ಬ್ರಿಟಿಷ್ ಪ್ರವಾಸಿ ಮೇಲೆ ಗೋವಾದಲ್ಲಿ ಅತ್ಯಾಚಾರ

|

ಪಣಜಿ (ಗೋವಾ), ಡಿಸೆಂಬರ್ 20: 48 ವರ್ಷದ ಬ್ರಿಟಿಷ್ ಪ್ರವಾಸಿ ಮೇಲೆ ಗುರುವಾರ ಅಪರಿಚಿತನಿಂದ ಅತ್ಯಾಚಾರ ನಡೆದಿದೆ. ಬೆಳಗ್ಗೆ ನಾಲ್ಕು ಗಂಟೆ ವೇಳೆಗೆ ಗೋವಾದ ಕಡಲ ಕಿನಾರೆ ಬಳಿ ನಡೆದು ಹೋಗುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಜಿಯಿಂದ ನೂರು ಕಿ.ಮೀ. ದೂರದಲ್ಲಿರುವ ಕನಕೋನದಲ್ಲಿ ಅತ್ಯಾಚಾರ ನಡೆದಿದ್ದು, ಆಕೆಯ ಬಳಿಯಿಂದ ಬೆಲೆ ಬಾಳುವ ವಸ್ತುಗಳನ್ನು ದುಷ್ಕರ್ಮಿ ಕಸಿದುಕೊಂಡು ಹೋಗಿದ್ದಾನೆ. ಕನಕೋನ ರೈಲು ನಿಲ್ದಾಣದಿಂದ ಕಡಲ ತೀರದ ಕಡೆಗೆ ಮಹಿಳೆ ನಡೆದು ಹೋಗುತ್ತಿದ್ದರು. ಆ ವೇಳೆ ಅಪರಿಚಿತ ವ್ಯಕ್ತಿಯು ಆಕೆಯನ್ನು ರಸ್ತೆಯ ಕಡೆಗೆ ಎಳೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ, ತಮ್ಮನನ್ನು ಕೊಲ್ಲುವುದಾಗಿ ಹೇಳಿ ಬೆದರಿಸಿ ಬಾಲಕಿ ಮೇಲೆ ಅತ್ಯಾಚಾರ

ಕನಕೋನದಿಂದ ಉತ್ತರ ಗೋವಾದಲ್ಲಿನ ಥಿವಿಂಗೆ ತೆರಳಲು ರೈಲು ನಿಲ್ದಾಣಕ್ಕೆ ಆಕೆ ಹೋಗುತ್ತಿದ್ದರು. ಆದರೆ ಯಾವಾಗ ರೈಲು ತಡವಾಗುತ್ತದೆ ಎಂದು ಗೊತ್ತಾಯಿತೀ ಪಲೋಲೆಮ್ ಸಮುದ್ರ ತೀರದಲ್ಲಿ ತಾವು ಉಳಿದುಕೊಂಡಿದ್ದ ಸ್ಥಳಕ್ಕೆ ವಾಪಸಾಗಲು ನಿರ್ಧರಿಸಿದ್ದರು.

ಒಂಟಿಯಾಗಿ ನಡೆದು ಬರುತ್ತಿದ್ದ ಮಹಿಳೆಯನ್ನು ಗೋಧಿ ಬೆಳೆಯುವ ಗದ್ದೆ ಕಡೆಗೆ ನೂಕಿದ ದುಷ್ಕರ್ಮಿ, ಆಕೆ ಕಣ್ಣಿಗೆ ಬಲವಾಗಿ ಹೊಡೆದಿದ್ದಾನೆ. ಆಗ ಕೆಲ ಸಮಯ ಆಕೆಗೆ ದೃಷ್ಟಿ ಮಂಜಾಗಿದೆ. ನಂತರ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನ ಸಾರಾಂಶವನ್ನು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ : ಅತ್ಯಾಚಾರ ಪ್ರಕರಣದ ತೀರ್ಪು 16 ದಿನದಲ್ಲಿ ಪ್ರಕಟ

ಕೃತ್ಯ ಎಸಗಿದ ನಂತರ ಮಹಿಳೆಯ ಮೂರು ಬ್ಯಾಗ್ ಗಳು, ಬೆಲೆ ಬಾಳುವ ವಸ್ತುಗಳನ್ನು ಸಹ ಆತ ಹೊತ್ತೊಯ್ದಿದ್ದಾನೆ. ಆ ಪ್ರದೇಶದಲ್ಲಿ ಕೆಲವು ಶಂಕಿತರ ವಿಚಾರಣೆ ಮಾಡಲಾಗಿದೆ.

ಆ ಮಹಿಳೆಯು ಕಳೆದ ಹತ್ತು ವರ್ಷಗಳಲ್ಲಿ ಹಲವು ಬಾರಿಗೆ ಗೋವಾಗೆ ಭೇಟಿ ನೀಡಿದ್ದಾರೆ. ದಕ್ಷಿಣ ಗೋವಾದ ಕನಕೋನಾ ಹೆಸರಾಂತ ಪ್ರವಾಸಿ ತಾಣ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 48-year-old British woman tourist was allegedly raped by an unidentified man while she was walking towards a beach in Goa early in the morning today, a police official said. She was also robbed of her belongings by the man who fled from the area after committing the crime, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more