ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಆಮ್‌ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ ಉಚಿತ ವಿದ್ಯುತ್: ಕೇಜ್ರಿವಾಲ್

|
Google Oneindia Kannada News

ಪಣಜಿ, ಜುಲೈ 14: ಗೋವಾದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಮುಂಬರಲಿರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಸಾಧಿಸಿದರೆ 300 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರು. "ದೆಹಲಿಯ ಜನರು ಉಚಿತ ವಿದ್ಯುತ್ ಪಡೆಯಲು ಸಾಧ್ಯವಾದರೆ ಗೋವಾದ ಜನರಿಗೇಕೆ ಉಚಿತ ವಿದ್ಯುತ್ ನೀಡಬಾರದು' ಎಂದು ಪ್ರಶ್ನಿಸಿದರು.

ಪಂಜಾಬ್‌ನಲ್ಲಿ ಆಪ್‌ ಗೆದ್ದರೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಘೋಷಣೆಪಂಜಾಬ್‌ನಲ್ಲಿ ಆಪ್‌ ಗೆದ್ದರೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್: ಕೇಜ್ರಿವಾಲ್ ಘೋಷಣೆ

ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಿದರೆ ಪ್ರತಿ ಕುಟುಂಬಕ್ಕೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ, 40 ಸದಸ್ಯ ಬದಲ ಗೋವಾ ವಿಧಾನಸಭೆಗೆ 2022ರ ಫೆಬ್ರವರಿಯಲ್ಲಿ ಚುನಾವಣೆ ನಡೆಯಲಿದೆ.

300 Units Of Free Electricity To Each Family If AAP Comes To Power In Goa: Arvind Kejriwal

ಗೋವಾ ಬದಲಾವಣೆ ಬಯಸಿದೆ, ಜನರು ಸ್ವಚ್ಛ ರಾಜಕೀಯವನ್ನು ಬಯಸುತ್ತಿದ್ದಾರೆ ಎಂದರು. ಕಳೆದ ವರ್ಷ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಕೆಲ ನಾಯಕರು ಪಕ್ಷ ತೊರೆದು ಬಿಜೆಪಿ ಸೇರಿದ್ದರ ಬಗ್ಗೆ ಕೇಜ್ರಿವಾಲ್ ಖಂಡಿಸಿದರು.

ಪಕ್ಷ ಬದಲಿಸಿ ಈ ಶಾಸಕರು ಜನರ ಕೆಲಸವನ್ನು ಪೂರ್ಣಗೊಳಿಸಲು ತಾವು ಬಿಜೆಪಿಗೆ ಸೇರುತ್ತಿದ್ದೇವೆ ಎಂದು ಹೇಳಿದ್ದರು, ಆದರೆ, ಅವರು ಹೇಳಿಕೊಂಡಂತೆ ಜನರ ಕೆಲಸವನ್ನು ಮಾಡಿಲ್ಲ, ಹಣದ ಆಮಿಷದಿಂದ ಪಕ್ಷ ಬದಲಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ವಿದ್ಯುತ್ ಬಿಲ್‌ ಮನ್ನಾ ಮಾಡಲಾಗುತ್ತಿದೆ, ಗೋವಾದಲ್ಲಿ ಪವರ್ ಕಟ್ ಮಾಡುವುದಿಲ್ಲ, ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ ಎಂದರು.

English summary
Aam Aadmi Party (AAP) supremo and Delhi Chief Minister Arvind Kejriwal on Wednesday made four promises, all related to electricity, to the people of Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X