ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಕಟ್ಟಡಗಳ ನಡುವೆ ಸಿಲುಕಿ ನೇತಾಡುತ್ತಿತ್ತು ನಾಪತ್ತೆಯಾಗಿದ್ದವಳ ಶವ

|
Google Oneindia Kannada News

ನೋಯ್ಡಾ, ಜುಲೈ 3: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದವಳ ಶವ ಎರಡು ಕಟ್ಟಡಗಳ ಮಧ್ಯೆ ನೇತಾಡುತ್ತಿರುವುದು ಕಂಡು ಬಂದ ಘಟನೆ ನೋಯ್ಡಾ ದಲ್ಲಿ ನಡೆದಿದೆ.

19 ವರ್ಷ ಮಹಿಳೆಯ ಮೃತದೇಹವು 120 ಅಡಿ ಎತ್ತರದ ಎರಡು ಕಟ್ಟಡಗಳ ನಡುವೆ ಸಿಲುಕಿಕೊಂಡಿತ್ತು, ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಕೇವಲ 1.5 ಅಡಿಯಷ್ಟು ಮಾತ್ರ ಅಂತರವಿದೆ. ಇದನ್ನು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಗನ ಜೊತೆ ಏಳನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ ಮಗನ ಜೊತೆ ಏಳನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ

ನೋಯ್ಡಾದ ಆಮ್ರಪಾಲಿ ಸಿಲಿಕಾನ್ ಸೊಸೈಟಿಯ ನೊಯ್ಡಾ ಸೆಕ್ಟರ್ 76ರಲ್ಲಿ ನಡೆದಿದೆ.ಎನ್‌ಡಿಆರ್‌ಎಫ್ ತಂಡವು ಶವವನ್ನು ಕೆಳಗಿಳಿಸಲು ಹರಸಾಹಸಪಡುತ್ತಿದೆ. ಮಹಿಳೆಯು ಬಿಹಾರ ಮೂಲದವರಾಗಿದ್ದು ಅದೇ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಜೂನ್ 28ರಿಂದ ಆಕೆ ಕಾಣೆಯಾಗಿದ್ದಳು.

Woman found dead and her body stuck between Two buildings

ಇಂದು ಹರ್ಯಾಣದಿಂದ ದಂಪತಿ ಬಂದ ಬಳಿಕ ಅವರಿಗೆ ಈ ವಿಷಯ ಕೇಳಿ ಶಾಕ್ ಆಗಿದೆ. ಅವರು ಗುರುತಿಸಿದ ಬಳಿಕವೇ ಅವಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಳಗಿನ ಜಾವದಿಂದಲೇ 35 ಮಂದಿಯ ಎನ್‌ಆರ್‌ಎಫ್ ತಂಡ ಕೆಲಸ ಮಾಡುತ್ತಿದೆ. ಸ್ವಲ್ಪ ಗೋಡೆಯನ್ನು ಕೊರೆದು ಶವವನ್ನು ಹೊರತೆಗೆಯಲಾಗಿದೆ.

English summary
Woman found dead and her body stuck between Two buildings in Noida, The body of a woman was found stuck 120 feet above the ground in a 1.5-foot space between the Two buildings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X