ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಚೇತರಿಸಿಕೊಂಡ ಯುವತಿ ಕೊಟ್ಟ ಸಲಹೆ ಏನು?

|
Google Oneindia Kannada News

ಗ್ರೇಟರ್ ನೋಯ್ಡಾ, ಮಾರ್ಚ್ 26: ಇಪ್ಪತ್ತೆರಡು ವರ್ಷದ ಯುವತಿ, ಇಪ್ಪತ್ತೇಳು ವರ್ಷದ ಯುವಕ ಕೊರೊನಾದಿಂದ ಚೇತರಿಸಿಕೊಂಡಿದ್ದು, ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಇನ್ನೇನು ಡಿಸ್ ಚಾರ್ಜ್ ಆಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯುವತಿಯು ಜಾರ್ಖಂಡ್ ಮೂಲದ ವಿದ್ಯಾರ್ಥಿನಿ.

ಜಾರ್ಜಿಯಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ಯುವಕ ನೋಯ್ದಾ ಸೆಕ್ಟರ್ 41ರಲ್ಲಿ ಎಂಜಿನಿಯರ್. ಫ್ರಾನ್ಸ್ ನಿಂದ ನೋಯ್ಡಾಗೆ ಹಿಂತಿರುಗಿದ ಯುವತಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಕೊರೊನಾ ವ್ಯಾಪಿಸುತ್ತಿದ್ದರಿಂದ ಆ ಯುವತಿ ಓದುತ್ತಿದ್ದ ಕಾಲೇಜಿನಲ್ಲಿ ರಜಾ ನೀಡಲಾಗಿತ್ತು. ಭಾರತಕ್ಕೆ ಹಿಂತಿರುಗುವ ಮೊದಲು ಆಕೆ ಫ್ರಾನ್ಸ್ ಗೆ ಪ್ರವಾಸಕ್ಕಾಗಿ ತೆರಳಿದ್ದರು.

"ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಬಹಳ ಶ್ರಮ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಗಂಡಸರು, ಹೆಂಗಸರಿಗೆ ಪ್ರತ್ಯೇಕ ಬಾತ್ ರೂಮ್ ಇಲ್ಲ. ಈಗಿರುವ ಬಾತ್ ರೂಮ್ ಸ್ಥಿತಿ ಕೂಡ ಚೆನ್ನಾಗಿಲ್ಲ. ನೀರಿನ ಪೈಪ್ ಸೋರಿಕೆ ಆಗುತ್ತಿದೆ" ಎಂದು ಆಕೆ ಹೇಳಿದ್ದಾರೆ.

What Suggestion Given By Woman, Who Recovered From Corona?

"ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಿದ್ದು ಕೊನೆ ಕ್ಷಣದಲ್ಲಿ. ಆ ಕಾರಣಕ್ಕೆ ಕೆಲವು ಸೌಲಭ್ಯಗಳನ್ನು ಒದಗಿಸಲು ಆಗಿಲ್ಲ. ಆದರೆ ಎಲ್ಲವನ್ನೂ ಸರಿಪಡಿಸುತ್ತೇವೆ" ಎಂದು ಇಲ್ಲಿನ ಮುಖ್ಯಸ್ಥರು ತಿಳಿಸಿದ್ದಾರೆ. ಇಬ್ಬರಿಗೆ ಕೊರೊನಾ ನೆಗೆಟಿವ್ ಆಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವ ಅವರು, ಈ ಸೋಂಕು ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಮುಖ್ಯ ಎಂದಿದ್ದಾರೆ.

ಕೊರೊನಾ ಬಂದವರು ಹೆದರಬಾರದು. ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನು ನಂಬಬೇಕು. ಅವರು ಅನುಸರಿಸುವ ಚಿಕಿತ್ಸಾ ವಿಧಾನವನ್ನು ನಂಬಬೇಕು ಎಂದು ಕೊರೊನಾದಿಂದ ಚೇತರಿಸಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿನಿ ಹೇಳಿದ್ದಾರೆ.

English summary
Here is the suggestion given by 22 year old medical student, after recovered from Corona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X