• search
  • Live TV
ನೋಯ್ಡಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೈಂಗಿಕ ಕಿರುಕುಳ ಆರೋಪ, ಟಿವಿ ಚಾನೆಲ್ ಸಂಪಾದಕ ರಾಜೀನಾಮೆ

|

ನೋಯ್ಡಾ, ಜನವರಿ 25: ಸುದ್ದಿ ವಾಹಿನಿವೊಂದರ ಹಿರಿಯ ಸಂಪಾದಕರೊಬ್ಬರ ಮೇಲೆ ಇಬ್ಬರು ಮಹಿಳಾ ಪತ್ರಕರ್ತೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಆರೋಪ ಹೊತ್ತ ಸಂಪಾದಕರು ರಾಜೀನಾಮೆ ಸಲ್ಲಿಸಿರುವ ಘಟನೆ ನಡೆದಿದೆ.

ಟಿವಿ9 ಭಾರತ್ ವರ್ಷ್ ವಾಹಿನಿಯ ಹಿರಿಯ ಸಂಪಾದಕರ ಮೇಲೆ ಇಬ್ಬರು ಮಹಿಳಾ ಪತ್ರಕರ್ತೆಯರು ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದರು. ಈ ಕುರಿತಂತೆ ಆಂತರಿಕ ಸಮಿತಿಯಿಂದ ತನಿಖೆ ನಡೆಸಲಾಗಿದೆ.

ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲೆ ಕಿರುಕುಳ(ತಡೆ ಹಾಗೂ ಪರಿಹಾರ ಕಾಯ್ದೆ 2013ಯ ಅನ್ವಯ ಆಂತರಿಕ ಸಮಿತಿ(ಐಸಿಸಿ) ಆರೋಪಿಗೆ ನೋಟಿಸ್ ನೀಡಿದೆ. ತಕ್ಷಣವೇ ಈ ಕುರಿತಂತೆ ಕ್ರಮ ಕೈಗೊಂಡ ಮ್ಯಾನೇಜ್ಮೆಂಟ್ ಆರೋಪಿಗೆ ದೀರ್ಘಕಾಲದ ರಜೆ ನೀಡಿದೆ. ಈ ಬೆಳವಣಿಗೆ ನಂತರ ಆರೋಪಿತ ಸಂಪಾದಕ ತಕ್ಷಣವೇ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ತನಿಖೆ ಎದುರಿಸುತ್ತಿದ್ದಾರೆ. ಮ್ಯಾನೇಜ್ಮೆಂಟ್ ಕೂಡಾ ರಾಜೀನಾಮೆಯನ್ನು ಸ್ವೀಕರಿಸಿದೆ.

TV channel editor resigns after sexual harassment charges by 2 journalists

ಟಿವಿ9 ನೆಟ್ವರ್ಕ್ ನಲ್ಲಿ ಲೈಂಗಿಕ ಕಿರುಕುಳ ವಿರುದ್ಧ ಸೂಕ್ತ ನೀತಿ, ನಿಯಮ ರೂಪಿಸಲಾಗಿದೆ. ಮಹಿಳಾ ಸಿಬ್ಬಂದಿಯ ಸುರಕ್ಷತೆ ಹಾಗೂ ಸಮಾನತೆ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆ ನೀಡಿದೆ.

English summary
A senior editor of TV9Bharatvarsh resigned from the job following complaints of sexual harassment against him by two journalists, the news channel said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X