ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಕಾರ್ಖಾನೆ ಉದ್ಘಾಟಿಸಿದ ಮೋದಿ

By Mahesh
|
Google Oneindia Kannada News

Recommended Video

ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಕಾರ್ಖಾನೆ ಉದ್ಘಾಟಿಸಿದ ಮೋದಿ | Oneindia Kannada

ನೋಯ್ಡಾ, ಜುಲೈ 09: ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಕಾರ್ಖಾನೆಯನ್ನು ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜುಯಿ ಇನ್ ಅವರು ಉದ್ಘಾಟಿಸಿದರು.

ನೋಯ್ಡಾದಲ್ಲಿರುವ ಸ್ಯಾಮ್ ಸಂಗ್ ನ ಮೊಬೈಲ್ ಫೋನ್ ಕಾರ್ಖಾನೆಯಲ್ಲಿ ಒಂದು ತಿಂಗಳಿಗೆ ಒಂದು ಕೋಟಿಗೂ ಅಧಿಕ ಮೊಬೈಲ್ ಹ್ಯಾಂಡ್ ಸೆಟ್ ಗಳು ಉತ್ಪಾದನೆಗೊಳ್ಳಲಿವೆ. ಇಲ್ಲಿ ಉತ್ಪಾದನೆಯಾಗುವ ಮೊಬೈಲ್ ಫೋನ್ ಗಳ ಪೈಕಿ ಶೇ 70ರಷ್ಟು ದೇಶಿ ಮಾರುಕಟ್ಟೆಯಲ್ಲಿ ಬಳಕೆಯಾಗಲಿದೆ.

ಭಾರತದಲ್ಲಿ 40 ಕೊಟಿ ಮಂದಿ ಸ್ಮಾರ್ಟ್ ಫೋನ್, 32 ಕೋಟಿ ಮಂದಿ ಬ್ರ್ಯಾಡ್ ಬ್ಯಾಂಡ್ ಬಳಸುತ್ತಿದ್ದಾರೆ. ಸುಮಾರು 35 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸ್ಯಾಮ್​​ಸಂಗ್ ಎಲೆಕ್ಟ್ರಾನಿಕ್ಸ್, ಮೊಬೈಲ್ ಫ್ಯಾಕ್ಟರಿ ವಿಶ್ವದ ಅತಿ ದೊಡ್ಡ ಮೊಬೈಲ್ ಫ್ಯಾಕ್ಟರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 2020 ರ ವೇಳೆಗೆ ಪ್ರತಿ ತಿಂಗಳಿಗೆ 10 ಮಿಲಿಯನ್ ಯುನಿಟ್​ಗಳಷ್ಟು ಮೊಬೈಲ್​ಗಳು ಈ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿವೆ.

PM Modi Opens Worlds Largest mobilephone Factory Noida

ನೋಯ್ಡಾದ ಸೆಕ್ಟರ್ 81 ರಲ್ಲಿ 1990 ರಲ್ಲಿ ಸ್ಯಾಮ್​ ಸಂಗ್ ಎಲೆಕ್ಟ್ರಾನಿಕ್ಸ್ ಉಪಕರಣಗಳ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿತ್ತು. ಬಳಿಕ 1997 ರಲ್ಲಿ ಸ್ಯಾಮ್ ಸಂಗ್ ಟಿವಿ ಉತ್ಪಾದನೆಯನ್ನೂ ಪ್ರಾರಂಭಿಸಲಾಯಿತು. ಈಗಿರುವ ಮೊಬೈಲ್ ಉತ್ಪಾದನಾ ಘಟಕವನ್ನು 2005 ರಲ್ಲಿ ಪ್ರಾರಂಭಿಸಲಾಗಿದ್ದು, ಮತ್ತಷ್ಟು ಅಭಿವೃದ್ಧಿಗೊಳಿಸಲಾಗಿದೆ.

English summary
The world's biggest mobile factory was launched in Noida near Delhi on Monday by Prime Minister Narendra Modi and South Korean President Moon Jae. The unit will manufacture one crore phones a month, 70 per cent of which will be earmarked for domestic usage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X