ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲೀಮರೂ ಕೈ ಜೋಡಿಸಿ

|
Google Oneindia Kannada News

ನೋಯ್ಡಾ, ನವೆಂಬರ್.10: ರಾಮ ಮಂದಿರ ವಿವಾದಕ್ಕೆ ಸುಪ್ರೀಂಕೋರ್ಟ್ ಇತಿಶ್ರೀ ಹಾಡಿದೆ. ವಿವಾದಿತ ಭೂಮಿ ಹಿಂದೂಗಳಿಗೆ ಸೇರಿದ್ದು, ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕೋರ್ಟ್ ಅನುಮತಿ ನೀಡಿದೆ. ಈಗ ರಾಮ ಮಂದಿರ ನಿರ್ಮಾಣದ ಹೊಣೆಯನ್ನು ಟ್ರಸ್ಟ್ ಗೆ ವಹಿಸಿದ್ದು, ಮುಸ್ಲೀಮರು ಸಹ ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಿ ಎಂದು ಮೊಘಲ್ ವಂಶಸ್ಥರು ಮನವಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಶಾಂತಿ-ಸೌಹಾರ್ದತೆ ಸಂಕೇತ ಎಂದು ಇಡೀ ದೇಶವೇ ಪ್ರಶಂಸೆ ವ್ಯಕ್ತಪಡಿಸಿದೆ. ಇದರ ಮಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ರೂಪುರೇಷೆ ಸಿದ್ಧವಾಗುತ್ತಿದೆ. ಈಗ ಭಾರತೀಯರು ಸೌಹಾರ್ದತೆಯನ್ನು ವಿಶ್ವಕ್ಕೆ ಸಾರಿ ಹೇಳುವ ದಿನ ಸನ್ನಿಹಿತವಾಗಿದೆ.

ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಏಕಾಏಕಿ ಪ್ರಕಟಿಸಲು ಕಾರಣವೇನು?
ರಾಮ ಮಂದಿರ ನಿರ್ಮಾಣದಲ್ಲಿ ಮುಸ್ಲಿಮರು ಕೂಡಾ ಕೈ ಜೋಡಿಸಬೇಕು ಎಂದು ಮೊಘಲ್ ವಂಶದ ಪ್ರಿನ್ಸ್, ಯಾಕುಬ್ ಹಬೀಬುದ್ದೀನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೋಯ್ಡಾದಲ್ಲಿ ಮಾತನಾಡಿದ ಅವರು, ಅಯೋಧ್ಯಾ ಪ್ರಕರಣವೇ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.

Muslims Also Joints With Hindus For Build The Ram Mandir

ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಯಾಕೂಬ್, ರಾಮ ಮಂದಿರ ನಿರ್ಮಾಣಕ್ಕೆ ಹಿಂದೂ-ಮುಸ್ಲಿಂರು ಒಂದಾಗಿ ಬರಬೇಕು ಎಂದಿದ್ದಾರೆ. ದೇಶದಲ್ಲಿನ ಭಾವೈಕ್ಯತೆಯನ್ನು ವಿಶ್ವಕ್ಕೆ ಸಾರಿ ಹೇಳಬೇಕು ಎಂದು ಪ್ರಿನ್ಸ್ ಯಾಕೂಬ್ ಹಬೀಬುದ್ದೀನ್ ತಿಳಿಸಿದ್ದಾರೆ.

English summary
Ayodhya Verdict: Mogal Prince Request To Muslims, Join Hands With Hindus For Build Ram Mandir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X