ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾತು ಕೊಟ್ಟ ಸರ್ಕಾರ ಮಂಗಮಾಯ: ಜೇವರ್ ಏರ್‌ಪೋರ್ಟ್‌ಗೆ ಭೂಮಿ ಕೊಟ್ಟವರಿಗೆ ನೆಲೆಯಿಲ್ಲ!

|
Google Oneindia Kannada News

ನೋಯ್ಡಾ, ನವೆಂಬರ್ 24: ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜೆವಾರ್‌ನಲ್ಲಿ ʻನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣʼಕ್ಕೆ (ಎನ್‌ಐಎ) ಬುಧವಾರ ಮಧ್ಯಾಹ್ನ 1 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆದರೆ ರಾಜ್ಯದ ಐದನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಭೂಮಿ ನೀಡಿದ ರೈತರು ನೆತ್ತಿ ಮೇಲೆ ಸೂರು ಇಲ್ಲದೇ ಟೆಂಟ್ ಗಳಲ್ಲಿ ವಾಸಿಸುವಂತಾ ಸ್ಥಿತಿ ನಿರ್ಮಾಣವಾಗಿದೆ.

ಜೆವಾರ್ ವಿಮಾನ ನಿಲ್ದಾಣಕ್ಕಾಗಿ ರೈತರಿಂದ ಭೂಮಿ ಪಡೆದ ಸರ್ಕಾರವು ಕೊಟ್ಟ ಮಾತು ತಪ್ಪಿದೆ. 5,730 ಕೋಟಿ ರೂಪಾಯಿ ಯೋಜನೆಗೆ ಭೂಮಿ ನೀಡಿದ ರೈತರು, ಇಂದು 700 ಮೀಟರ್ ದೂರದಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿರುವ ಚಿತ್ರಣ ಕಂಡು ಬಂದಿದೆ.

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷತೆಗಳೇನು?ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷತೆಗಳೇನು?

ಕೆಲವರಿಗೆ ಸರ್ಕಾರದಿಂದ ಇನ್ನೂ ಮನೆ ನಿವೇಶನ ಸಿಗಲಿಲ್ಲ ಎನ್ನುತ್ತಿದ್ದರೆ, ಮತ್ತೆ ಕೆಲವರು ಇನ್ನೂ ಪರಿಹಾರದ ಹಣವೇ ಸಿಕ್ಕಿಲ್ಲ ಎನ್ನುತ್ತಿದ್ದಾರೆ. ವಿಮಾನ ನಿಲ್ದಾಣಕ್ಕಾಗಿ ತರಾತುರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಸ್ವತಃ ಸ್ಥಳೀಯ ಬಿಜೆಪಿ ಶಾಸಕರು ಒಪ್ಪಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕಾಗಿ ರೋಹಿ ಗ್ರಾಮದ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಈ ಪೈಕಿ ಇನ್ನೂ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಟೆಂಟ್‌ಗಳಲ್ಲಿ ವಾಸಿಸುತ್ತಿವೆ. ಜೆವಾರ್ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ಗ್ರಾಮಸ್ಥರ ಬದುಕಿನ ಸ್ಥಿತಿ ಹೇಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

Farmers Gave Their Land to Jewar Airport, But not Get Land for House from Govt

ಮೂರು ವರ್ಷಗಳಿಂದ ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸ:

ಜೆವಾರ್ ವಿಮಾನ ನಿಲ್ದಾಣಕ್ಕಾಗಿ ತಮ್ಮ ಭೂಮಿಯನ್ನು ನೀಡಿರುವ 45 ವರ್ಷದ ರೈತ ಓಂ ಪಾಲ್, ಕಳೆದ ಮೂರು ವರ್ಷಗಳಿಂದ ಪ್ಲಾಸ್ಟಿಕ್ ಟೆಂಟ್‌ನಲ್ಲಿ ವಾಸ ಮಾಡುತ್ತಿದ್ದಾರೆ. ನಗರದಲ್ಲಿ ಮನೆ ಕಟ್ಟಲು ಯಾವುದೇ ಪರಿಹಾರ ಅಥವಾ ಜಮೀನು ಸಿಕ್ಕಿಲ್ಲ ಎಂದು ಓಂಪಾಲ್ ಅಳಲು ತೋಡಿಕೊಂಡಿದ್ದಾರೆ. ನನ್ನ ಕಡತಗಳು ಮೂರು ವರ್ಷಗಳಿಂದ ಸರ್ಕಾರಿ ಕಚೇರಿಯಲ್ಲೇ ಕೊಳೆಯುತ್ತಿದ್ದು, ಎಲ್ಲವೂ ಅಧಿಕಾರಿಗಳ ಕೈಯಲ್ಲಿದೆ ಎಂದು ಓಂ ಪಾಲ್ ಹೇಳಿದ್ದಾರೆ.

ವಿದ್ಯುತ್, ನೀರು ಇಲ್ಲದೆಡೆ 15 ಕುಟುಂಬಗಳ ಜೀವನ:

ಸರ್ಕಾರದ ಒತ್ತಡದಿಂದಾಗಿ ರಾಮ್ ಸ್ವರೂಪ್ ಎಂಬುವವರು ತಮ್ಮ 90 ಮೀಟರ್ ಇಟ್ಟಿಗೆಯ ಮನೆಯನ್ನು ಖಾಲಿ ಮಾಡಿ ಕೊಟ್ಟಿದ್ದು, ಇಂದಿಗೂ ಕುಟಂಬ ಸಮೇತರಾಗಿ ಟೆಂಟ್‌ನಲ್ಲಿ ವಾಸಿಸುವಂತಾ ಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣ ಯೋಜನೆಗಾಗಿ ಮನೆಗಳನ್ನು ನೆಲಸಮಗೊಳಿಸಿದ ನಂತರ ಸಮೀಪದ ನಂಗ್ಲಶರೀಫ್ ಗ್ರಾಮದಲ್ಲಿ 15 ಕುಟುಂಬಗಳು ಟೆಂಟ್‌ಗಳಲ್ಲಿ ವಾಸಿಸುತ್ತಿವೆ. ಈ ಪ್ರದೇಶದಲ್ಲಿ ಕುಡಿಯುವುದಕ್ಕೆ ಅಲ್ಲ ಬಳಸುವುದಕ್ಕೂ ಸಹ ನೀರಿನ ವ್ಯವಸ್ಥೆಯಿಲ್ಲ, ವಿದ್ಯುತ್ ಸಂಪರ್ಕವೂ ಇಲ್ಲ.

ಪರಿಹಾರ ಸಿಕ್ಕರೂ, ಮನೆ ಸಿಕ್ಕಿಲ್ಲ:

ಮೈಕೊರೆಯುವ ಚಳಿಯ ನಡುವೆಯೂ ಮೂರು ವರ್ಷಗಳಿಂದ ತಮ್ಮ ಪತ್ನಿ ಹಾಗೂ ನಾಲ್ಕು ಚಿಕ್ಕ ಮಕ್ಕಳೊಂದಿಗೆ ಟೆಂಟ್‌ನಲ್ಲಿ ಬದುಕಬೇಕಾಗಿದೆ. ಸರ್ಕಾರ ಭರವಸೆ ನೀಡಿದಂತೆ ಪರಿಹಾರದ ಹಣವನ್ನೇನೋ ನೀಡಿದೆ, ಆದರೆ ಇದುವರೆಗೂ ನಿವೇಶನವನ್ನು ನೀಡಿಲ್ಲ ಎಂದು ಸ್ಥಳೀಯ ಹಸನ್ ಮೊಹಮ್ಮದ್ ಆರೋಪಿಸಿದ್ದಾರೆ. "ನಾವು 5.5 ಲಕ್ಷ ರೂಪಾಯಿ ಪರಿಹಾರದ ಹಣವನ್ನು ಪಡೆದಿದ್ದೇವೆ, ಆದರೆ ನನ್ನ ಪತ್ರಗಳು ಸರಿಯಾಗಿದ್ದರೂ ಭೂಮಿ ಅಥವಾ ಮನೆ ನಿರ್ಮಿಸಲು ಹಣವಿಲ್ಲ. "ಆದ್ದರಿಂದ ನಾವು ಇಲ್ಲಿ ವಾಸಿಸುತ್ತಿದ್ದೇವೆ. ಈ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು, ನಾನು ಎಲ್ಲಿಗೆ ಹೋಗಬೇಕು?," ಎಂದು ಪ್ರಶ್ನೆ ಮಾಡಿದ್ದಾರೆ.

ಭೂಸ್ವಾಧೀನದ ವಿರುದ್ಧ ಹೈಕೋರ್ಟ್ ಮೊರೆ:

ನೋಡ್ಯಾ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಡೆಸಿರುವ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಖೇಡಾ ದಯನಾಥಪುರದ ನಿವಾಸಿ ಅಜಯ್ ಪ್ರತಾಪ್ ಸಿಂಗ್, ಅಲಹಾಬಾದ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. "ನಮ್ಮ ಭೂಮಿಯನ್ನು ಗ್ರಾಮೀಣ ಪ್ರದೇಶ ಎಂದು ಘೋಷಿಸುವುದು, ಅವರು ನೀಡುವ ಕೃಷಿ ಭೂಮಿಯನ್ನು ನಗರ ಎಂದು ಘೋಷಿಸುವುದು ಎಂದಿಗೂ ಸಾಧ್ಯವಿಲ್ಲ. ನಾವು ಗ್ರಾಮೀಣ ಪ್ರದೇಶದವರು ನಿಜ, ಹಾಗಾಗಿಯೇ ನಮಗೆ ನಾಲ್ಕು ಪಟ್ಟು ಹೆಚ್ಚು ಪರಿಹಾರವನ್ನು ನೀಡಬೇಕು, ಆದರೆ ನಗರ ಎಂದು ಘೋಷಿಸುವುದರ ಮೂಲಕ ಅವರು ಎರಡು ಪಟ್ಟು ಹಣ ನೀಡಿದ್ದಾರೆ, ಎಂದು ಆರೋಪಿಸಲಾಗಿದೆ.

Recommended Video

ಹಲಾಲ್' ಮಾಂಸ ಅಂದರೆ ಏನು ? | Oneindia Kannada

English summary
Farmers Gave Their Land to Jewar Airport, But not Get Land for House from Govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X