• search
  • Live TV
ನೋಯ್ಡಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಿಂಕ್ಸ್ ಮಾಡಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ವ್ಯಕ್ತಿ ಶವವಾಗಿ ಪತ್ತೆ

|

ನೊಯ್ಡಾ, ಅಕ್ಟೋಬರ್ 13: ಮದ್ಯಪಾನ ಮಾಡಿ, ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ.

ಮೃತರನ್ನು ಸುಂದರ್ ಪಂಡಿತ್ ಎಂದು ಗುರುತಿಸಲಾಗಿದೆ. ಕುಟುಂಬದವರು ಯಾವುದೇ ದೂರು ನೀಡಿಲ್ಲ. ಮದ್ಯಪಾನ ಮಾಡಿ ಕಾರಿನಲ್ಲಿ ಮಲಗಿದ್ದು, ಕಾರಿ ಕಿಟಕಿಯೆಲ್ಲವೂ ಮುಚ್ಚಿತ್ತು, ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ ಸೇವಿಸಿರುವ ಕಾರಣ ಸಾವಿಗೀಡಾಡಿದ್ದಾರೆ.

ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ

ಸುಂದರ್ ಪಂಡಿತ್ ಬರೋಲಾ ಪ್ರದೇಶದಲ್ಲಿ ವಾಸವಿದ್ದಾರೆ. ಸೆಕ್ಟರ್ 107ಅಲ್ಲಿ ಮತ್ತೊಂದು ಮನೆಯಿದೆ. ಅಲ್ಲಿಗೆ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಹೋಗುತ್ತಿದ್ದರು.

ಅವರು ಯಾವಾಗಲೂ ಮದ್ಯಪಾನ ಮಾಡುತ್ತಿದ್ದ, ಬೇಸ್‌ಮೆಂಟ್‌ ಅಲ್ಲಿ ಕಾರು ಪಾರ್ಕ ಮಾಡಿ, ಮನೆಗೆ ಹೋಗಲಾಗದ ಸ್ಥಿತಿಯಲ್ಲಿದ್ದ ಕಾರಣ ಅಲ್ಲಿಯೇ ಮಲಗಿದ್ದರು.

ಮರುದಿನ ಬೆಳಗ್ಗೆ ಬೇಸ್‌ಮೆಂಟ್‌ಲ್ಲಿ ಕಾರು ಇದ್ದಿದ್ದನ್ನು ಗಮನಿಸಿದ ಅವರ ಸಹೋದರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಲ್ಲಿಯವರೆಗೆ ಅವರು ಮೃತಪಟ್ಟಿದ್ದರು.

ಬಳಿಕ ಕುಟುಂಬದವರು ಅವರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ,ಕುಟುಂಬದವರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

English summary
A man, who appeared to have fallen asleep in his car under the influence of alcohol with the AC on, was found dead in his vehicle, the police said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X