ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಡ್ ಸಿಗದೆ, ಆಸ್ಪತ್ರೆ ಮುಂಭಾಗ ಕೊರೊನಾ ಸೋಂಕಿತೆ ಕಾರಿನಲ್ಲೇ ಸಾವು

|
Google Oneindia Kannada News

ನೊಯ್ಡಾ, ಮೇ 1: ಕೊರೊನಾ ಸೋಂಕಿತೆಯೊಬ್ಬರು ಆಸ್ಪತ್ರೆಯಲ್ಲಿ ಹಾಸಿಗೆ ಸಿಗದ ಕಾರಣ ಕಾರಿನಲ್ಲಿ ಕುಳಿತಲ್ಲೇ ಪ್ರಾಣಬಿಟ್ಟಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಕುಟುಂಬದವರು ಆಸ್ಪತ್ರೆಗೆ ಬಂದು ಬೆಡ್‌ಗಳ ಕುರಿತು ವಿಚಾರಿಸಿದ್ದಾರೆ ಆದರೆ ಬೆಡ್ ಲಭ್ಯವಿರದ ಕಾರಣ ಕೆಲ ಕಾಲ ಕಾದಿದ್ದಾರೆ. ಅಷ್ಟರೊಳಗೆ ಮಹಿಳೆ ಕಾರಿನಲ್ಲಿಯೇ ಅಸುನೀಗಿದ್ದು, ಮೂರು ಗಂಟೆಗಳ ಕಾಲ ಶವ ಕಾರಿನಲ್ಲೇ ಇತ್ತು ಎನ್ನಲಾಗಿದೆ.

ಕೊರೊನಾ ಸಕ್ರಿಯ ಪ್ರಕರಣ: ಆಂಧ್ರ, ತಮಿಳುನಾಡು, ತೆಲಂಗಾಣ ಹಿಂದಿಕ್ಕಿದ ಬೆಂಗಳೂರು ಕೊರೊನಾ ಸಕ್ರಿಯ ಪ್ರಕರಣ: ಆಂಧ್ರ, ತಮಿಳುನಾಡು, ತೆಲಂಗಾಣ ಹಿಂದಿಕ್ಕಿದ ಬೆಂಗಳೂರು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲನೇ ಅಲೆಗಿಂತ ಕೊರೊನಾ ಎರಡನೇ ಅಲೆ ತೀವ್ರತರದ ಪರಿಣಾವನ್ನುಂಟು ಮಾಡುತ್ತಿದೆ. ಹಾಗೆಯೇ ವಿವಿಧ ರಾಜ್ಯಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಮ್ಲಜನಕ, ವೆಂಟಿಲೇಟರ್ ಕೊರತೆ ಉಂಟಾಗಿದೆ.

Covid Positive Woman Dies Outside Noida Hospital, Body Lies In Car For 3 Hours

ಬಳಿಕ ಇದೀಗ ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗಿದೆ, ಅವರು ಒಬ್ಬರು ಮಕ್ಕಳು, ಪತಿಯನ್ನು ಅಗಲಿದ್ದಾರೆ. ಆಸ್ಪತ್ರೆ ಎದುರು ಆಕ್ಸಿಜನ್‌ಗಾಗಿ ಗಂಟೆಗಟ್ಟಲೆ ಕಾದಿದ್ದು, ಉಸಿರಾಟ ಸಮಸ್ಯೆಯಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ.

ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಾರ ರಾಜ್ಯದಲ್ಲಿ ಆಮ್ಲಜನಕ ಕೊರತೆ ಇಲ್ಲ. ಇಂತಹ ಘಟನೆಗಳು ರಾಜ್ಯದಲ್ಲಿ ಆಸ್ಪತ್ರೆಗಳು, ಹಾಸಿಗೆಗಳು, ಆಮ್ಲಜನಕ ಕೊರತೆ ಇರುವುದನ್ನು ತೋರಿಸುತ್ತದೆ. ಉತ್ತರ ಪ್ರದೇಶದಲ್ಲಿ ಹೊಸದಾಗಿ 34,372 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 212 ಮಂದಿ ಮೃತಪಟ್ಟಿದ್ದಾರೆ.

English summary
A 35-year-old Covid positive woman died in her car while waiting to be admitted in a hospital in Greater Noida. The victim’s body remained in the car for over three hours before it was taken for cremation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X