ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾತಕಿ ಅಬು ಸಲೇಂ ಹಣವನ್ನು ಹೂಡಿಕೆ ಮಾಡಿದ್ದ ವ್ಯಕ್ತಿಯ ಬಂಧನ

|
Google Oneindia Kannada News

ನೊಯ್ಡಾ, ಜುಲೈ 16: ಕುಖ್ಯಾತ ಪಾತಕಿ ಅಬು ಸಲೇಂನ ಅಕ್ರಮ ಆಸ್ತಿಗಳ ವಹಿವಾಟು ನೋಡುಕೊಳ್ಳುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಟ್‌ ಫೋರ್ಸ್‌ ಬಂಧಿಸಿದೆ.

Recommended Video

ಕೋಟಿ ಬೆಲೆಯ ಕಾರುಗಳನ್ನು ಬಿಟ್ಟು ಟ್ರ್ಯಾಕ್ಟರ್ ಏರಿದ ಡಿ ಬಾಸ್.

ಅಬು ಸಲೇಂ ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದ ಅಪರಾಧಿಯಾಗಿದ್ದ. ಬಂಧಿತನನ್ನು ಗಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಕುಖ್ಯಾತ ಗ್ಯಾಂಗ್​ಸ್ಟರ್​ ಖಾನ್ ಮುಬಾರಕ್​ನ ಆಪ್ತ ಕೂಡ ಆಗಿದ್ದ. ಗಜೇಂದ್ರ ಸಿಂಗ್​ನ್ನು ಎಸ್​ಟಿಎಫ್​ ತಂಡ ಮುಂಬೈನಲ್ಲಿ ಬುಧವಾರ ತಡರಾತ್ರಿ ಬಂಧಿಸಿದೆ.

ಅಬು ಸಲೇಂ ಮದುವೆಗೆ ಪೆರೋಲ್ ನಿರಾಕರಿಸಿದ ಬಾಂಬೆ ಹೈಕೋರ್ಟ್ಅಬು ಸಲೇಂ ಮದುವೆಗೆ ಪೆರೋಲ್ ನಿರಾಕರಿಸಿದ ಬಾಂಬೆ ಹೈಕೋರ್ಟ್

ಈತ ದೆಹಲಿಯ ಎನ್​ಸಿಟಿ ಪ್ರದೇಶದಲ್ಲಿ ಅಬು ಸಲೇಂನ ಅಕ್ರಮ ಆಸ್ತಿಗಳ ವಹಿವಾಟು ನೋಡಿಕೊಳ್ಳುತ್ತಿದ್ದ ಎಂದು ಎಎಸ್​ಪಿ ರಾಜಕುಮಾರ್ ಮಿಶ್ರಾ ತಿಳಿಸಿದ್ದಾರೆ.

Close Aide Of Don Abu Salem Arrested In Noida

2014ರಲ್ಲಿ ಈತ ದೆಹಲಿ ಮೂಲ ವ್ಯಾಪಾರಿಯಿಂದ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ವಹಿವಾಟಿನಲ್ಲಿ 1.8 ಕೋಟಿ ರೂಪಾಯಿ ಪಡೆದುಕೊಂಡು ವಂಚಿಸಿದ್ದ. ಹಣ ವಾಪಸ್ ಕೇಳಿದ್ದ ವ್ಯಾಪಾರಿಯ ಮೇಲೆ ನೋಯ್ಡಾದ ಸೆಕ್ಟರ್ 18ರಲ್ಲಿ ಖಾನ್ ಮುಬಾರಕ್​ನ ಕಡೆಯವರು ಗುಂಡು ಹಾರಿಸಿದ್ದರು. ಕಾರಿನಲ್ಲಿದ್ದ ವ್ಯಾಪಾರಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಆ ಸಂದರ್ಭದಲ್ಲಿ ಶೂಟರ್​ಗಳಿಗೆ ಮಿಶ್ರಾ 10 ಲಕ್ಷ ರೂಪಾಯಿ ಪಾವತಿಸಿದ್ದ. ಹಣದ ವಹಿವಾಟಿನ ರಹಸ್ಯ ತನಿಖಾ ಸಂಸ್ಥೆಗೆ ಗೊತ್ತಾಗಿತ್ತು. ಈ ಜಾಡನ್ನು ಬೆನ್ನತ್ತಿದಾಗ ಗಜೇಂದ್ರ ಸಿಂಗ್​ನ ಉಳಿದ ವಿಚಾರಗಳು ಬಹಿರಂಗವಾದವು.

ಆತ ಅಬು ಸಲೇಂ ಮತ್ತು ಖಾನ್ ಮುಬಾರಕ್ ಪರವಾಗಿ ಅವರ ಹಣವನ್ನು ದೆಹಲಿ-ಎನ್​ಸಿಆರ್ ಪ್ರದೇಶಗಳಲ್ಲಿ ವಿವಿಧ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದ. ನೊಯ್ಡಾ ಪೊಲೀಸ್ ಠಾಣೆಯಲ್ಲಿ ಸಿಂಗ್​ ವಿರುದ್ಧ ಕೆಲವು ಪ್ರಕರಣಗಳು ಬಾಕಿ ಇದ್ದು, ಈಗ ಅವುಗಳ ಮುಂದಿನ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಎಸ್​ಪಿ ಮಿಶ್ರಾ ತಿಳಿಸಿದ್ದಾರೆ.

English summary
The Uttar Pradesh police special task force has arrested an associate of mafia don Abu Salem. Gajender Singh was arrested from Sector 20 in Noida. It has been alleged that Gajender used to run an extortion racket in the National Capital Region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X