ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ ಪ್ರಕರಣ ಆರೋಪಿಯ ಕುಟುಂಬದಿಂದ ಸಿಬಿಐ ತಂಡದ ಮೇಲೆ ಹಲ್ಲೆ

|
Google Oneindia Kannada News

ನೋಯ್ಡಾ, ಫೆಬ್ರವರಿ 23: ಲಂಚ ಪ್ರಕರಣವೊಂದರ ಅರೋಪಿಯಾಗಿದ್ದ ಅಧಿಕಾರಿಯನ್ನು ಬಂಧಿಸಲು ಪ್ರಯತ್ನಿಸಿದ್ದ ಸಿಬಿಐ ತಂಡದ ಮೇಲೆಯೇ ಆ ಅಧಿಕಾರಿಯ ಕುಟುಂಬದವರು ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

ಲಂಚ ಪ್ರಕರಣದಲ್ಲಿ ಸಿಬಿಐನ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸುನಿಲ್ ದತ್ ಎಂಬುವವರ ಮೇಲೆ ಅವರದೇ ಸಂಸ್ಥೆ ಲಂಚ ಪ್ರಕರಣದ ದೂರು ದಾಖಲಿಸಿತ್ತು. ಆರೋಪಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲು ಸಿಬಿಐ ತಂಡ ಗ್ರೇಟರ್ ನೋಯ್ಡಾದ ಸೋನೇಪುರ ಗ್ರಾಮಕ್ಕೆ ತೆರಳಿತ್ತು.

ಹಿಮಾಚಲ ಪ್ರದೇಶ ಮಾಜಿ ಸಿಎಂ ವಿರುದ್ಧ ಸಿಬಿಐ ಚಾರ್ಜ್‌ ಶೀಟ್‌ ಹಿಮಾಚಲ ಪ್ರದೇಶ ಮಾಜಿ ಸಿಎಂ ವಿರುದ್ಧ ಸಿಬಿಐ ಚಾರ್ಜ್‌ ಶೀಟ್‌

ಅಲ್ಲಿನ ಫಾರ್ಮ್ ಹೌಸ್ ಒಂದರಲ್ಲಿ ದತ್ ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ದೊರಕಿತ್ತು. ಸಿಬಿಐ ತಂಡ ಅಲ್ಲಿಗೆ ತೆರಳಿ ದತ್‌ ಅವರನ್ನು ಬಂಧಿಸಲು ಮುಂದಾದರು. ಆಗ ಅವರ ಕುಟುಂಬದ ಸದಸ್ಯರು ತಂಡದ ಮೇಲೆ ಹಲ್ಲೆ ನಡೆಸಿದರು. ಈ ವೇಳೆ ದತ್ ಅಲ್ಲಿಂದ ಪರಾರಿಯಾದರು.

cbi team attacked by family of a accused officer in a bribery case in greater noida

ಘಟನೆಯಲ್ಲಿ ಸಿಬಿಐನ ಕೆಲವು ಅಧಿಕಾರಿಗಳಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಗ್ರೇಟರ್ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನಿ ಲಾಂಡ್ರಿಂಗ್ ಕೇಸ್ : ಚಿದಂಬರಂ ವಿರುದ್ಧ ತನಿಖೆಗೆ ಮುಂದಾದ ಸಿಬಿಐ ಮನಿ ಲಾಂಡ್ರಿಂಗ್ ಕೇಸ್ : ಚಿದಂಬರಂ ವಿರುದ್ಧ ತನಿಖೆಗೆ ಮುಂದಾದ ಸಿಬಿಐ

ಸಿಬಿಐ ಅಧಿಕಾರಿಯಾಗಿರುವ ದತ್‌, ಗ್ರೇಟರ್ ಎಕ್ಸ್‌ಪ್ರೆಸ್‌ ವೇ ಭೂಮಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

ಫೆ. 2ರಂದು ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಆಗಿನಿಂದಲೂ ದತ್ ತಲೆಮರೆಸಿಕೊಂಡಿದ್ದಾರೆ.

English summary
Family of a accused officer in bribery case attacked a CBI team in Uttar Pradesh's Greater Noida. Assistant Sub Inspector Sunil Dutt at CBI was absconding since Feb 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X