• search
  • Live TV
ನೋಯ್ಡಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೆಳತಿಯ ಅಣ್ಣನನ್ನು ಕೊಲೆ ಮಾಡಿದ್ದ ಯೂಟ್ಯೂಬರ್ ಬಂಧನ

|

ನವದೆಹಲಿ, ನವೆಂಬರ್ 4: ತನ್ನ ಬೈಕ್ ಸ್ಟಂಟ್ ವಿಡಿಯೋಗಳಿಗಾಗಿ ಯೂಟ್ಯೂಬ್‌ನಲ್ಲಿ ಸುಮಾರು 9 ಮಿಲಿಯನ್ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಸಾಮಾಜಿಕ ಮಾಧ್ಯಮದ ಪ್ರಭಾವಿ ವ್ಯಕ್ತಿಯನ್ನು ತನ್ನ ಗೆಳತಿಯ ಸಹೋದರನನ್ನು ಕೊಂದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಯೂಟ್ಯೂಬರ್ ನಿಜಾಮುಲ್ ಖಾನ್‌ನನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಪರಾಧ ಎಸಗಲು ಸಹಾಯ ಮಾಡಿದ ಆರೋಪದಲ್ಲಿ ಇನ್ನಿಬ್ಬರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧ

ನಿಜಾಮುಲ್ ಖಾನ್ ಮತ್ತು ತನ್ನ ಸಹೋದರಿಯ ನಡುವಿನ ಸ್ನೇಹಕ್ಕೆ ಕಮಲ್ ಶರ್ಮಾ (26) ಎಂಬಾತ ವಿರೋಧ ವ್ಯಕ್ತಪಡಿಸಿದ್ದ. ಇದರಿಂದ ಕೋಪಗೊಂಡಿದ್ದ 'ಬೈಕ್ ಸ್ಟಂಟರ್' ನಿಜಾಮುಲ್ ಆತನ ಕೊಲೆಗೆ ಸಂಚು ರೂಪಿಸಿದ್ದ. ಯುವತಿಯ ಸಹೋದರ ಕಮಲ್ ಶರ್ಮಾ, ಜಗಳವೊಂದರಲ್ಲಿ ನಿಜಾಮುಲ್‌ಗೆ ಹೊಡೆದಿದ್ದಲ್ಲದೆ, ಆತನ ಫೋನ್ ಅನ್ನೂ ಕಿತ್ತುಕೊಂಡಿದ್ದ ಎನ್ನಲಾಗಿದೆ.

ಅಕ್ಟೋಬರ್ 28ರಂದು ನೋಯ್ಡಾದ ಇಸ್ಕಾನ್ ದೇವಸ್ಥಾನ ಸಮೀಪದ ರಸ್ತೆಯಲ್ಲಿ ತೆರಳುತ್ತಿದ್ದ ಕಮಲ್ ಶರ್ಮಾನನ್ನು ಕೆಲವು ದೂರದವರೆಗೆ ಬೈಕ್‌ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದ ನಿಜಾಮುಲ್, ಬಳಿಕ ಆತನಿಗೆ ಹಿಂದಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಕಮಲ್, ಅದೇ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಕಮಲ್ ದ್ವಿಚಕ್ರ ವಾಹನ ಓಡಿಸುತ್ತಿದ್ದರಿಂದ ಇದು ಅಪಘಾತ ಪ್ರಕರಣ ಎಂದು ಪೊಲೀಸರು ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅವರ ಕತ್ತಿನಲ್ಲಿ ಗುಂಡು ಪತ್ತೆಯಾಗಿದ್ದರಿಂದ ಇದು ಹತ್ಯೆ ಪ್ರಕರಣ ಎನ್ನುವುದು ಪೊಲೀಸರಿಗೆ ಗೊತ್ತಾಗಿತ್ತು.

English summary
Noida police has arrested bike stunter and youtuber Nizamul Khan in his girlfriend's brother murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X