ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿರಿಯಾನಿ ಮಾರುತ್ತಿದ್ದ ದಲಿತ ವ್ಯಾಪಾರಿ ಮೇಲೆ ಹಲ್ಲೆ

|
Google Oneindia Kannada News

ನೋಯ್ಡಾ, ಡಿಸೆಂಬರ್ 16: ದೆಹಲಿ ಸಮೀಪದ ಗ್ರೇಟರ್ ನೊಯ್ಡಾದಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ 43 ವರ್ಷದ ದಲಿತ ವ್ಯಾಪಾರಿ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಈ ಹಲ್ಲೆ ಆತನ ಜಾತಿಯ ಕಾರಣಕ್ಕೇ ನಡೆದಿದೆ ಎಂದು ಆರೋಪಿಸಲಾಗಿದೆ.

ಕೆಳಜಾತಿಗೆ ಸೇರಿದವನಾಗಿದ್ದರೂ ಬಿರಿಯಾನಿ ಮಾರಾಟ ಮಾಡಲು ಎಷ್ಟು ಧೈರ್ಯ ಎಂದು ಹಲ್ಲೆಗೊಳಗಾದ ವ್ಯಕ್ತಿಗೆ ದುಷ್ಕರ್ಮಿಗಳು ಕೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಲಿತ ಪೊಲೀಸ್ ಪೇದೆಯನ್ನು ಹೊರಹಾಕಿದ ದೇವಸ್ಥಾನ ಅರ್ಚಕರುದಲಿತ ಪೊಲೀಸ್ ಪೇದೆಯನ್ನು ಹೊರಹಾಕಿದ ದೇವಸ್ಥಾನ ಅರ್ಚಕರು

ರಸ್ತೆಬದಿಯಲ್ಲಿ ಬಿರಿಯಾನಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಶುಕ್ರವಾರ ಹಲ್ಲೆ ನಡೆದಿದೆ. ಗುಂಪೊಂದು ಅವರ ಕೆನ್ನೆಗೆ ಹೊಡೆಯುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. 'ಕೈಗಳನ್ನು ಜೋಡಿಸು' ಎಂದು ಒಬ್ಬ ಆರೋಪಿ ಬೆದರಿಸುವುದು ಚಿಕ್ಕ ವಿಡಿಯೋದಲ್ಲಿ ದಾಖಲಾಗಿದೆ. ಬಳಿಕ ವ್ಯಾಪಾರಿಯ ಮುಖದ ಮೇಲೆ ಸತತವಾಗಿ ಬಾರಿಸಲಾಗಿದೆ.

A Dalit Biryani Vendor Assaulted In Greater Noida Near Delhi

ದಲಿತ ವ್ಯಕ್ತಿ ಮೇಲೆ ಅಮಾನವೀಯ ಹಲ್ಲೆ: ನೀರಿನ ಬದಲು ಮೂತ್ರ ಕುಡಿಸಿದ ದುಷ್ಕರ್ಮಿಗಳುದಲಿತ ವ್ಯಕ್ತಿ ಮೇಲೆ ಅಮಾನವೀಯ ಹಲ್ಲೆ: ನೀರಿನ ಬದಲು ಮೂತ್ರ ಕುಡಿಸಿದ ದುಷ್ಕರ್ಮಿಗಳು

ಈ ಘಟನೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಂಡಿಸಿದ್ದಾರೆ. ಕಾನೂನಿಗೆ ವಿರುದ್ಧವಾಗಿ ವರ್ತಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ತಮಿಳುನಾಡು: 17 ದಲಿತರ ಜೀವ ತೆಗೆದಿದ್ದು ಮಳೆಯಲ್ಲ, ಅಸ್ಪೃಶ್ಯತೆ ತಮಿಳುನಾಡು: 17 ದಲಿತರ ಜೀವ ತೆಗೆದಿದ್ದು ಮಳೆಯಲ್ಲ, ಅಸ್ಪೃಶ್ಯತೆ

ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹಲ್ಲೆಗೊಳಗಾದ ಬಿರಿಯಾನಿ ವ್ಯಾಪಾರಿಯೊಂದಿಗೂ ಮಾತನಾಡಿದ್ದೇವೆ ಎಂದು ಗ್ರೇಟರ್ ನೊಯ್ಡಾ ಪೊಲೀಸರು ತಿಳಿಸಿದ್ದಾರೆ.

English summary
A Dalit man selling Biryani in Greater Noida near Delhi was beaten up by a group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X