ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೀಕನನ್ನೇ ಮಂಗ ಮಾಡಲು ಹೊರಟ Paytm ಸಿಬ್ಬಂದಿ ಕಂಬಿ ಹಿಂದೆ!

|
Google Oneindia Kannada News

ನೋಯ್ಡಾ, ಅಕ್ಟೋಬರ್ 23: ಪೇಟೀಎಂ ಎಂಬ ಇ ವ್ಯಾಲೆಟ್ ದೈತ್ಯ ಕಂಪನಿಯ ಸಂಸ್ಥಾಪಕ, ಮಾಲೀಕ ವಿಜಯ ಶಂಕರ್ ಶರ್ಮಾ ಅವರನ್ನೇ ವಂಚಿಸಲು ಹೊರಟ ಈ ಕಂಪನಿಯ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮೂವರಲ್ಲಿ ಓರ್ವ ಶರ್ಮಾ ಅವರ ಆಪ್ತ ಕಾರ್ಯದರ್ಶಿ ಎಂಬುದು ಸಾಬೀತಾಗಿದೆ. 20 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಈ ಮೂವರು, ಹಣ ನೀಡದೆ ಇದ್ದಲ್ಲಿ ಶರ್ಮಾ ಅವರಿಗೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ಡೇಟಾಗಳನ್ನು ಸೋರಿಕೆ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು.

ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಮತ್ತೆ ಆರಂಭಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಮತ್ತೆ ಆರಂಭ

ಕಂಪನಿಯ ಮಹತ್ವದ ದಾಖಲೆಗಳನ್ನು ಕದ್ದಿದ್ದ ಮೂವರು ಆರೋಪಿಗಳಲ್ಲಿ ಓರ್ವ ಮಹಿಳೆಯೂ ಇದ್ದರು. ಈ ಮೂವರೂ ಸೇರಿ ಹಲವು ದಿನಗಳಿಂದ ಕಂಪನಿಯ ಮಹತ್ವದ ದಾಖಲೆಗಳನ್ನೂ, ಮಾಲೀಕರ ವೈಯಕ್ತಿಕ ದಾಖಲೆಗಳನ್ನು ಕದ್ದಿದ್ದರು. ಹಣ ನೀಡದಿದ್ದರೆ ಈ ಗೌಪ್ಯ ದಾಖಲೆಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದರು.

3 Paytm employees arrested for trying to blackmail their owner

ಉಬರ್ ನಿಂದ ಮಹಾವಂಚನೆ 500 ಮಿಲಿಯನ್ ಡಾಲರ್ ಗುಳಂ?ಉಬರ್ ನಿಂದ ಮಹಾವಂಚನೆ 500 ಮಿಲಿಯನ್ ಡಾಲರ್ ಗುಳಂ?

ಸಿಬ್ಬಂದಿಗಳ ಬೆದರಿಕೆಗೆ ಕ್ಯಾರೇ ಅನ್ನದ ಶರ್ಮಾ ಸೀದಾ ಪೊಲೀಸರ ಬಳಿ ಹೋಗಿ ವಿಷಯ ತಿಳಿಸಿದ್ದರು. ಶರ್ಮಾ ನೀಡಿದ ಮಾಹಿತಿಯ ಮೇರೆಗೆ ಮೂವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

English summary
The Noida police on arrested 3 employees of Paytm for allegedly trying to black mail the e wallent giant's faounder Vijay Shekhar Sharma and extort Rs.20 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X