ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು

|
Google Oneindia Kannada News

ನೊಯ್ಡಾ, ಏಪ್ರಿಲ್ 14: ನೊಯ್ಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದ ಇಬ್ಬರಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

Recommended Video

ಸ್ಯಾಮ್​ ಸಂಗ್ ಮೊಬೈಲ್ ಫೋನ್ ಕಾರ್ಖಾನೆ ಉದ್ಘಾಟಿಸಿದ ಮೋದಿ ಹೇಳಿದ್ದೇನು ? | Oneindia Kannada

ಮತ್ತೆ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಹೊರವಲಯದಲ್ಲಿರುವ ನೋಯ್ಡಾದಲ್ಲಿ ನಡೆದ ಘಟನೆಯಿಂದ ಇಡೀ ದೇಶಾದ್ಯಂತ ಆತಂಕ ಉಂಟಾಗಿದೆ.

ಕೊರೊನಾ ವೈರಸ್: ವಿದೇಶಿಗರ ವೀಸಾ, ಇ-ವೀಸಾ ಅವಧಿ ವಿಸ್ತರಣೆಕೊರೊನಾ ವೈರಸ್: ವಿದೇಶಿಗರ ವೀಸಾ, ಇ-ವೀಸಾ ಅವಧಿ ವಿಸ್ತರಣೆ

ಕೊರೊನಾ ಸೋಂಕಿನಿಂದ ಇವರು ಗುಣಮುಖರಾಗಿದ್ದಾರೆಂದು ಖಚಿತಪಡಿಸಿಕೊಳ್ಳಲು 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ತಪಾಸಣೆ ಮಾಡಲಾಗಿತ್ತು. ಎರಡೂ ಟೆಸ್ಟ್‌ನಲ್ಲಿ ನೆಗೆಟಿವ್ ಬಂದಿತ್ತು. ನಂತರ ಮತ್ತೊಂದು ಸ್ವಾಬ್ ಸಂಗ್ರಹಿಸಿ ಡಿಸ್‌ಚಾರ್ಜ್ ಮಾಡಲಾಗಿತ್ತು.

{image-corona-1586830999.jpg kannada.oneindia.com

ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಕೂಡಾ ಒಂದಾಗಿದೆ. ಇಲ್ಲಿನ ಗೌತಮ ಬುದ್ಧ ಜಿಲ್ಲೆಯಲ್ಲಿದೆ ನೊಯ್ಡಾ ಇದೆ.

ಅದನ್ನು ಪರೀಕ್ಷಿಸಿದಾಗ ಪಾಸಿಟಿವ್ ಬಂದಿದೆ. ಹೀಗಾಗಿ ಇಬ್ಬರನ್ನೂ ಸೋಮವಾರ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರಿಶೀಲಿಸಿದ ಬಳಿಕ ಈ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಹೊಸದಾಗಿ 356 ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1510ಕ್ಕೆ ಏರಿಕೆಯಾಗಿದೆ.

English summary
Two people, who were discharged from a hospital in Noida last week after testing negative for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X