ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೊಮ್ಯಾಟೊಗೆ ನಿಮ್ಮ ಮನೆ ಅಡುಗೆಯನ್ನು ತೋರಿಸುವ ಕಾಲ ಬಂತು

|
Google Oneindia Kannada News

ನವ ದೆಹಲಿ, ಮಾರ್ಚ್ 23: ಆನ್ ಲೈನ್‌ನಲ್ಲಿ ಊಟ ಆರ್ಡರ್ ಮಾಡಿ, ತಿನ್ನುವವರ ಸಂಖ್ಯೆ ಬಹಳ ಹೆಚ್ಚಿತ್ತು. ಬೆಂಗಳೂರಿನಂತಹ ಮಹಾನಗರಗಳಲ್ಲಿ ಈ ಅಭ್ಯಾಸ ಬಹುಪಾಲು ಜನರು ಹೊಂದಿದ್ದರು. ಆದರೆ, ಈಗ ಇದು ಪೂರ ಕಡಿಮೆಯಾಗಿದೆ.

Recommended Video

Karnataka will be under complete lockdown | Karnataka LockDown | Oneindia kannada

ಕೊರೊನಾ ವೈರಸ್ ಭೀತಿಯಿಂದ ಜೊಮ್ಯಾಟೊ, ಸ್ವಿಗ್ಗಿ ಸಂಸ್ಥೆಗಳಲ್ಲಿ ಆನ್ ಲೈನ್ ಆರ್ಡರ್‌ಗಳು ಕುಸಿದಿದೆ. ಹೋಟೆಲ್‌ಗಳು ಕೂಡ ಬಂದ್ ಆಗಿದ್ದು, ಜೊಮ್ಯಾಟೊ, ಸ್ವಿಗ್ಗಿಗೆ ಕೆಲಸವೇ ಇಲ್ಲದಂತೆ ಆಗಿದೆ. ಇಂತಹ ವೇಳೆ ಜೊಮ್ಯಾಟೊ ಒಂದು ಚಟುವಟಿಕೆ ನೀಡಿದ್ದು, ಈ ಮೂಲಕ ನಿಮ್ಮ ಮನೆ ಅಡಿಗೆಯನ್ನು ಅವರಿಗೆ ತೊರಿಸಬಹುದಾಗಿದೆ.

ಟ್ವಿಟ್ಟರ್ ನಲ್ಲಿ ಜೊಮ್ಯಾಟೊ ತಮ್ಮ ಗ್ರಾಹಕರ ಜೊತೆಗೆ ಒಂದು ಚಟುವಟಿಕೆ ನಡೆಸಿದೆ. ನೀವು ನಿಮ್ಮ ಮನೆಯಲ್ಲಿ ಮಾಡಿದ ಅಡಿಗೆಯ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಬೇಕಿದೆ. ಅದಕ್ಕೆ ಜೊಮ್ಯಾಟೊ ಪ್ರತಿಕ್ರಿಯೆ ನೀಡಲಿದೆ.

Zomato Asks Customer To Share Picture What Are You Cooking At Home

ಕೊರೊನಾ ಭೀತಿಯಿಂದ ಹೊರಗಿನ ತಿನಿಸುಗಳನ್ನು ಜನ ಮುಟ್ಟುತ್ತಿಲ್ಲ. ಮನೆಯಲ್ಲಿಯೇ ಅಡಿಗೆ ಮಾಡಿಕೊಂಡು ತಿನ್ನುತ್ತಿದ್ದಾರೆ. ಆ ಫೋಟೋಗಳನ್ನು ಅನೇಕರು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜೊಮ್ಯಾಟೊ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿದೆ.

ಜೊಮ್ಯಾಟೊ ಕಳಿಸುವ ಆಹಾರ ತಿನ್ನುತ್ತಿದ್ದ ಜನರು, ಈಗ ತಾವು ಮಾಡಿದ ಅಡಿಗೆಯನ್ನು ಅವರಿಗೆ ತೋರಿಸುವ ಕಾಲ ಬಂದಿದೆ. ಎಲ್ಲ ಕೊರೊನಾ ಪರಿಣಾಮ.

English summary
Zomato asks customer to share picture what are you cooking at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X