ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ ಜೀ ಸುದ್ದಿವಾಚಕನ ಬಂಧಿಸಿದ ಛತ್ತೀಸ್ ಗಢ ಪೊಲೀಸ್

|
Google Oneindia Kannada News

ಲಕ್ನೋ, ಜುಲೈ 5: ಜೀ ಮಾಧ್ಯಮದ ಅಧೀನ ಸಂಸ್ಥೆಯ ಸುದ್ದಿವಾಚಕ ರೋಹಿತ್ ರಂಜನ್ ಬಂಧನವಾಗಿದೆ. ಉತ್ತರಪ್ರದೇಶದಲ್ಲಿ ರೋಹಿತ್ ರನ್ನು ಛತ್ತೀಸ್ ಗಢ ಪೊಲೀಸ್ ಬಂಧಿಸಿದ್ದಾರೆ. ಆದರೆ, ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಸುಳಿವು ಕೂಡಾ ತಿಳಿದು ಬಂದಿಲ್ಲ. ಜೀ ನ್ಯೂಸ್ ಆಂಕರ್ ಮನೆಗೆ ದಿಢೀರನೇ ಪೊಲೀಸರು ನುಗ್ಗಿ ಬಂಧಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜೀ ಅಂಗ ಸಂಸ್ಥೆ ಡಿಎನ್‌ಎಯಲ್ಲಿ ಪ್ರೈಮ್‌ಟೈಮ್ ಶೋ ನಡೆಸಿ ಕೊಡುವ ಆಂಕರ್ ರೋಹಿತ್ ರಂಜನ್ ಶೋ ನಡುವೆ ಪ್ಲೇ ಮಾಡಿದ ವಿಡಿಯೋಗೆ ಸಂಬಂಧಿಸಿದಂತೆ ಅವರನ್ನು ಛತ್ತೀಸ್‌ಗಢ ಪೊಲೀಸರು ಮಂಗಳವಾರ ಬೆಳಗ್ಗೆ ಬಂಧಿಸಿದ್ದರು. ಇದೀಗ ಸುದ್ದಿ ನಿರೂಪಕರನ್ನು ಅಧಿಕಾರಿಗಳು ಬಂಧಿಸಿದ ರೀತಿ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕೋವಿಡ್‌ನಿಂದ ಗುಣಮುಖ, ನೆಟ್ ಪ್ರಾಕ್ಟೀಸ್ ಆರಂಭಿಸಿದ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ, ನೆಟ್ ಪ್ರಾಕ್ಟೀಸ್ ಆರಂಭಿಸಿದ ರೋಹಿತ್ ಶರ್ಮಾ

ಮೂಲಗಳ ಪ್ರಕಾರ, ಛತ್ತೀಸ್‌ಗಢ ಪೊಲೀಸರು ಮಂಗಳವಾರ ಮುಂಜಾನೆ ರೋಹಿತ್ ರಂಜನ್ ಅವರನ್ನು ಬಂಧಿಸಲು ಅವರ ನಿವಾಸಕ್ಕೆ ಅನುಮತಿ ಇಲ್ಲದೆ ಪ್ರವೇಶಿಸಿದರು, ಝೀ ನ್ಯೂಸ್ ನಿರೂಪಕರನ್ನು ಬಂಧಿಸಿದ ಪೊಲೀಸರು ಸಮವಸ್ತ್ರದಲ್ಲಿರಲಿಲ್ಲ, ಎಲ್ಲರೂ ಮಫ್ತಿಯಲ್ಲಿದ್ದರು ಎಂದು ತಿಳಿದು ಬಂದಿದೆ.

Zee News anchor Rohit Ranjan arresed by Chhattisgarh police in UP

ಗಾಜಿಯಾಬಾದ್‌ನ ಇಂದ್ರಪುರಂನಲ್ಲಿರುವ ರೋಹಿತ್ ರಂಜನ್ ಅವರ ಮನೆಗೆ ಛತ್ತೀಸ್‌ಗಢದಿಂದ ಬಂದಿದ್ದ ಸುಮಾರು 15 ಪೊಲೀಸ್ ಸಿಬ್ಬಂದಿ ಪ್ರವೇಶಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಮನೆ ಇರುವ ಸೊಸೈಟಿ ಗೇಟ್‌ಗಳ ಭದ್ರತಾ ಸಿಬ್ಬಂದಿಯ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಸ್ಥಳದಿಂದ ಚದುರಿಸಲು ಅನುಮತಿಸಲಿಲ್ಲ.

ಛತ್ತೀಸ್‌ಗಢ ಪೊಲೀಸರು ಮೂರು ವಾಹನಗಳಲ್ಲಿ ರೋಹಿತ್ ರಂಜನ್ ಅವರ ಮನೆಗೆ ಬಂದರು ಮತ್ತು ಸೆಕ್ಯುರಿಟಿಗೆ ಏನನ್ನೂ ಹೇಳಲಿಲ್ಲ, ನಂತರ ಅವರ ಮೊಬೈಲ್‌ಗಳನ್ನು ಕಸಿದುಕೊಂಡು ಎಲ್ಲಿಗೂ ಹೋಗದಂತೆ ಕೇಳಿಕೊಂಡಿದ್ದಾರೆ ಎಂದು ಎಂದು ಭದ್ರತಾ ಗೇಟ್‌ನಲ್ಲಿ ನಿಯೋಜಿಸಲಾಗಿದ್ದ ಗಾರ್ಡ್ ಹೇಳಿಕೆ ದಾಖಲಿಸಿದ್ದಾರೆ.

ನಿರೂಪಕರ ನಿವಾಸವನ್ನು ಪ್ರವೇಶಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ನಿರೂಪಕರ ಸಹೋದರ ಮತ್ತು ಇಬ್ಬರು ಚಿಕ್ಕ ಮಕ್ಕಳು ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಝೀ ನ್ಯೂಸ್ ಆಂಕರ್ ಬಂಧನದ ಬಗ್ಗೆ ಛತ್ತೀಸ್‌ಗಢ ಅಧಿಕಾರಿಗಳು ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿಲ್ಲ.

ಮಂಗಳವಾರ ಮುಂಜಾನೆ 5:30 ರ ಸುಮಾರಿಗೆ ರೋಹಿತ್ ರಂಜನ್ ಅವರ ನಿವಾಸಕ್ಕೆ ಪೊಲೀಸ್ ತಂಡ ಆಗಮಿಸಿತು, ನಂತರ ಗಾಜಿಯಾಬಾದ್‌ನಲ್ಲಿರುವ ಅಧಿಕಾರಿಗಳು ಕೂಡ ಸ್ಥಳಕ್ಕೆ ತಲುಪಿದರು. ರೋಹಿತ್ ರಂಜನ್ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಯುಪಿ ಪೊಲೀಸರು ಮತ್ತು ಛತ್ತೀಸ್‌ಗಢ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ವರದಿಯಾಗಿದೆ.

ಛತ್ತೀಸ್‌ಗಢ ಪೊಲೀಸರು ಇನ್ನೂ ಸುದ್ದಿ ನಿರೂಪಕರ ಮನೆಯ ಹೊರಗೆ ಇದ್ದಾರೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಗಾಜಿಯಾಬಾದ್ ಪೊಲೀಸ್ ಅಧಿಕಾರಿಗಳು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಈ ವಿಷಯವನ್ನು ಸ್ಥಳೀಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

Recommended Video

ಸರಳ ವಾಸ್ತು ಖ್ಯಾತಿಯ Chandrasekhar Gurujiಯ ಕೊಲೆ: ಚಾಕುವಿನಿಂದ ಇರಿದು ಕೊಲೆ |*Karnataka | OneIndia Kannada

English summary
Zee News anchor Rohit Ranjan was arrested on Tuesday morning by the Chhattisgarh police in relation to a video played on the primetime show DNA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X